ಪುರಾಣದಲ್ಲಿ ಪವಾಡ ಬಸವಣ್ಣ ತೊಟ್ಟಿಲೋತ್ಸವ

Appeal for construction of CC road
ತಾಳಿಕೋಟೆಯಲ್ಲಿ ನಡೆಯುತ್ತಿರುವ ಪವಾಡಬಸವೇಶ್ವರರ ಮಹಾ ಪುರಾಣದ ಸನ್ನಿವೇಶದಂತೆ ಸುಮಂಗಲೆಯರು ತೋಟ್ಟಿಲು ಕಾರ್ಯಕ್ರಮ ನೇರವೇರಿಸಿದರು.
Published on

ತಾಳಿಕೋಟೆ: ಶರಣಮುತ್ಯಾರವರ ಜಾತ್ರೋತ್ಸವ ನಿಮತ್ತ ಶ್ರೀಮಠದ ಪ್ರಾಂಗಣದಲ್ಲಿ ನಡೆಯುತ್ತಿರುವ ಪುರಾಣದಲ್ಲಿ ಶ್ರೀ ಪಾವಡ ಬಸವೇಶ್ವರರ ತೊಟ್ಟಿಲೋತ್ಸವ ಸನ್ನಿವೇಶ ಕುರಿತು ಮಹಾದೇವಯ್ಯ ಶಾಸ್ತ್ರಿ ಪ್ರಚಚನ ನೀಡಿದರು. ಭಕ್ತರು ತೊಟ್ಟಿಲೋತ್ಸವ ಆಚರಿಸಿ ಸಂಭ್ರಮಿಸಿದರು.

ಶರಣರಾದ ಗುರುಲಿಂಗಪ್ಪನವರ ಮಲ್ಲಮ್ಮ ಅವರ ಉದರದಲ್ಲಿ ಗಂಡು ಮಗು ಜನಿಸುತ್ತದೆ ಸಾತ್ವಿಕಳಾದ ಮಲ್ಲಮ್ಮ ಹೆತ್ತ ಮಗುವಿಗೆ ಬಸವಣ್ಣನೆಂದು ನಾಮಕರಣ ಮಾಡುತ್ತಾಳೆ.

ಪುರಾಣ ಕೇಳಲು ಬಂದಿದ್ದ ಭಕ್ತರು ತೊಟ್ಟಿಲನ್ನು ಶೃಂಗರಿಸಿದ್ದರು. ಸುಮಂಗಲೆಯರು ತೊಟ್ಟಿಲ ಕಾರ್ಯಕ್ರಮವನ್ನು ಪದ್ಧ್ದತಿಯಂತೆ ನೆರವೇರಿಸಿ ಬಸವಣ್ಣನೆಂದು ನಾಮಕರಣ ಮಾಡಿದರು.

ಶರಣರ ಮಠದ ಬಸಣ್ಣ ಶರಣಮುತ್ಯಾ, ಶರಣಪ್ಪಮುತ್ಯಾ,ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು, ಸಾಹಿಲ್​ ಮುರಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net