ಅವಳಿ ಮಕ್ಕಳಿಗೆ ಜನ ನೀಡಿದ ಬಾಣಂತಿಯ ದುರಂತ ಸಾವು

Tragic death of a mother who gave birth to twins
ರೇವತಿ ರಾಜಶೇಖರ ಬಿರಾದಾರ
Published on

ಮುದ್ದೇಬಿಹಾಳ: ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೆಲವೇ ಂಟೆಗಳಲ್ಲಿ ಚಿಕಿತ್ಸೆ ಲಿಸದೆ ಬಾಣಂತಿಯೊಬ್ಬರು ದುರಂತ ಸಾವೀಗೀಡಾಗಿ ನವಜಾತ ಶಿಶುಗಳು ತಾಯಿ ಇಲ್ಲದೆ ಅನಾಥರಾದ ಮನಕಲಕುವ ಟನೆ ಶುಕ್ರವಾರ ನಡೆದಿದೆ.

ಮುದ್ದೇಬಿಹಾಳದ ಗಣೇಶ ನಗರದಲ್ಲಿ ವಾಸವಾಗಿದ್ದ ನಾಗರಾಳ ಗ್ರಾಮದ ರೇವತಿ ರಾಜಶೇಖರ ಬಿರಾದಾರ (26) ಆ ದುರದಷ್ಟವಂತೆ. ತುಂಬು ಗರ್ಭಿಣಿಯಾಗಿದ್ದ ರೇವತಿಯನ್ನು 24ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದಲ್ಲದೆ ಮಿದುಳಲ್ಲಿ ರಕ್ತ ಹೆಪ್ಪುಗಟ್ಟತೊಡಗಿತ್ತು.

ಪರಿಸ್ಥಿತಿಯ ಗಂಭೀರತೆ ಅರಿತ ವೈದ್ಯರು ತಣ ಹೆರಿಗೆ ಮಾಡಿಸಿದ್ದಾರೆ. ಆರೋಗ್ಯವಂತ ಗಂಡು, ಹೆಣ್ಣು ಅವಳಿ ಮಕ್ಕಳು ಜನಿಸಿವೆ. ತದನಂತರ ರೇವತಿಗೆ ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣ ಉಳಿಸಲು ವೈದ್ಯರು ಮುಂದಾಗಿದ್ದಾರೆ. ಈ ಸಂದರ್ಭ ರೇವತಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಗುರುವಾರ ಮಧ್ಯರಾತ್ರಿ ಉಸಿರು ಚಲ್ಲಿದರು ಎಂದು ಆ ಕುಟುಂಬದ ಆಪ್ತರು ತಿಳಿಸಿದರು.

ಅವಳ ಪತಿ ರಾಜಶೇಖರ ಬಿರಾದಾರ ಅವರು ವಾಣಿಜ್ಯ ನೌಕಾದಳದಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದು ಕಳೆದ ಮೂರ್ನಾಲ್ಕು ತಿಂಗಳಿಂದ ಪತ್ನಿಯನ್ನು ನೋಡಿಕೊಳ್ಳಲು ಇಲ್ಲಿಯೇ ಇದ್ದರು. ರಾಜಶೇಖರ ಅವರು ಕೂಡಾ ನಾಗರಾಳ ಗ್ರಾಮದವರೇ ಆಗಿದ್ದು ಇವರ ಪತ್ನಿ ರೇವತಿ ಅದೇ ಗ್ರಾಮದಲ್ಲಿರುವ ರಾಜಶೇಖರ ಅವರ ಅಕ್ಕನ ಮಗಳು. ಶುಕ್ರವಾರ ನಾಗರಾಳದಲ್ಲಿ ಶೋಕ ಸಾಗರದ ಮಧ್ಯೆ ಅಂತ್ಯಕ್ರಿಯೆ ನೆರವೇರಿತು. ಅವಳಿ ನವಜಾತ ಶಿಶುಗಳು ಜನಿಸುವಾಗಲೇ ತಾಯಿಯನ್ನು ಕಳೆದುಕೊಂಡು ಅನಾಥರಾದದ್ದು ವಿಧಿಯಾಟ ಎನ್ನಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net