

ಇಂಡಿ: ಹಿಂದುಳಿದ, ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವರು ಒಬ್ಬರು. ಆಧ್ಯಾತ್ಮಿಕ ಪ್ರವೃತ್ತಿ ಮೂಲಕ ಜನರಲ್ಲಿ ಭಕ್ತಿಯ ಚಿಂತನೆ ಮೂಡಿಸಿದ ಮಾಚಿದೇವರ ತತ್ವಾದರ್ಶ ಸರ್ವಕಾಲಕ್ಕೂ ಅನ್ವಯ ಎಂದು ಶಿಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿಯ ಯುಬಿಎಸ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾತನಾಡಿದ ಅವರು, ಕಲ್ಯಾಣ
ಕ್ರಾಂತಿಯ ಕೊನೆಯ ಟ್ಟದ ಹೋರಾಟದಲ್ಲಿ ಮಾಚಿದೇವರು ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆಗೈದಿದ್ದಾರೆ ಎಂದರು.
ಅಧ್ಯತೆ ವಹಿಸಿದ್ದ ಹಿರೇರೂಗಿ ಉರ್ದು ಕ್ಲಸ್ಟರ್ ಸಿಆರ್ಪಿ ಬಾದಶಾ ಚಪ್ಪರಬಂದ ಮಾತನಾಡಿ, ಮೇಲು ಕೀಳು, ಬಡವರು, ಶೋಷಣೆಗೊಳಗಾದವರ ಬಗ್ಗೆ
ಚಿಂತಿಸಿ, ವ್ಯಕ್ತಿ&ವ್ಯಕ್ತಿಗಳ ನಡುವಿನ ಅಂತರ ಹೋಗಲಾಡಿಸಲು ಹೋರಾಡಿದ ಮಾಚಿದೇವರ ಜೀವನ ಆದರ್ಶಪ್ರಾಯವಾಗಿದೆ ಎಂದರು.
ಮುಖ್ಯ ಶಿಕ ಎಸ್.ಎಸ್.ಅರಬ, ಶಿಕರಾದ ಎನ್.ಬಿ.ಚೌಧರಿ, ಎಸ್.ಪಿ.ಪೂಜಾರಿ, ಬೇಗಂ ಮುಲ್ಲಾ, ಕಮಲಾ ದಳವಾಯಿ ಉಪಸ್ಥಿತರಿದ್ದರು.