

ಹೊರ್ತಿ: ರಾಜ್ಯ ಸರ್ಕಾರದ 448 ಹಾಗೂ ಕೇಂದ್ರ ಸರ್ಕಾರದ 445 ಮನೆಗಳನ್ನು ಅರ್ಹ ಲಾನುಭವಿಗಳಿಗೆ ಶುಕ್ರವಾರ ಹಂಚಲಾಯಿತು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕೇಂದ್ರ ಹಾಗೂ ಸರ್ಕಾರದಿಂದ ಮಂಜೂರಾದ ಮನೆಗಳನ್ನು ಅರ್ಹರಿಗೆ ಲಾನುಭವಿಗಳಿಗೆ ಹಂಚಲಾಯಿತು.
ಪಿಡಿಒ ಮಹೇಶ ನಾಯಕ ಮಾತನಾಡಿ, ಸರ್ಕಾರ ಬಸವ ವಸತಿ ಯೋಜನೆಯಡಿ 448 ಮನೆಗಳನ್ನು ಮಂಜೂರು ಮಾಡಿದ್ದು ಅದರಲ್ಲಿ 246 ಸಾಮಾನ್ಯ ಲಾನುಭಾವಿಗಳು ಹಾಗೂ 30 ಮನೆಗಳನ್ನು ಅಲ್ಪ ಸಂಖ್ಯಾತರಿಗೆ ಮೀಸಲಿರಿಸಲಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿ 165 ಮನೆಗಳು ಮಂಜೂರಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಲಾನುಭವಿಗಳಿಗೆ 7 ಮನೆ ಹಂಚಲಾಗಿದೆ ಎಂದರು.
ನೋಡಲ್ ಅಧಿಕಾರಿ ಜಿ.ಎಸ್. ಗುತ್ತರಗಿಮಠ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಗುಡಿಸಲು ಮುಕ್ತ ಗ್ರಾಮವನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯೆ ಜಯಶ್ರೀ ಭೋಸಗಿ,ಉಪಾಧ್ಯೆ ಶಿವಶರಣಪ್ಪ ಡೊಳ್ಳಿ, ಪಿಕೆಪಿಎಸ್ ಸಿಇಒ ಎ.ಬಿ. ಪೂಜಾರಿ, ಸಂದೀಪ ರಾಠೋಡ, ಮಲ್ಲೇಶಿ ಭೋಸಗಿ, ಹುಸೇನಸಾಬ ಹತ್ತಿರಕಿಹಾಳ, ಬಸಲಿಂಗಪ್ಪ ಪೂಜಾರಿ, ರಾಜು ವಡ್ಡರ, ಚಂದ್ರಕಲಾ ಮಸಳಿಕರ, ರೇಖಾ ಪೂಜಾರಿ, ಅಂಬವ್ವ ದಶವಂತ, ರೇವಣಸಿದ್ದ ತೇಲಿ, ಅಮರಸಿದ್ಧ ಲೋಣಿ, ಸಂಗೀತ ರಾಠೋಡ, ವೈ. ಗಾಡಿವಡ್ಡರ, ಪವನ ಕುಲಕರ್ಣಿ, ಸುರೇಶ ಅಳವೇರ, ವಿಠ್ಠಲ ಬಬಲಾದ, ಮೈಬೂಬ್ ಇಂಡಿ ಪಾಲ್ಗೊಂಡಿದ್ದರು.