ಗಮಕ ವಾಚನ ಕಾರ್ಯಕ್ರಮ

Gamaka Vachana program
ವಿಜಯಪುರದ ಹೆಣ್ಣು ಮಕ್ಕಳ ಸರ್ಕಾರಿ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಮಕ ವಾಚನ ಕಾರ್ಯಕ್ರಮದಲ್ಲಿ ಗಮಕಿ ಶಾಂತಾ ಕೌತಾಳ ಅವರನ್ನು ಸನ್ಮಾನಿಸಲಾಯಿತು. ಕಲ್ಯಾಣರಾವ್​ ದೇಶಪಾಂಡೆ, ಬಿ.ಎಂ. ಪಾಟೀಲ, ಸುವರ್ಣಾ ತೋಟದ ಮತ್ತಿತರರಿದ್ದರು.
Published on

ವಿಜಯಪುರ: ಇಲ್ಲಿನ ಗಾಂಧಿ ಚೌಕ ಬಳಿಯ ಹೆಣ್ಣು ಮಕ್ಕಳ ಸರ್ಕಾರಿ ಕನ್ನಡ ಶಾಲೆ ನಂ.1 ರಲ್ಲಿ ಶನಿವಾರ "ಗದುಗಿನ ಭಾರತದ ಉದ್ಯೋಗ ಪರ್ವ'ದ ವಿದುರ ನೀತಿ ಭಾಗದ ಗಮಕ ವಾಚನ&ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್​ನಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲಾ ಗಮಕ ಪರಿಷತ್​ ಅಧ್ಯಕ್ಷ ಬಿ.ಎಂ. ಪಾಟೀಲ ನೇತೃತ್ವ ವಹಿಸಿದ್ದರು. ಅಧ್ಯಾಪಕಿ ಸುವರ್ಣಾ ತೋಟದ ಅಧ್ಯಕ್ಷತೆ ವಹಿಸಿದ್ದರು.

ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದೆ, ಗಮಕಿ ಶಾಂತಾ ಕೌತಾಳ ಶ್ರೀವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ ಎಂಬ ಪೀಠಿಕಾ ಪದ್ಯದೊಂದಿಗೆ ಕಾವ್ಯವಾಚನ ಆರಂಭಿಸಿದರು.

ನಂತರ ಕಲ್ಯಾಣರಾವ್​ ದೇಶಪಾಂಡೆ ವ್ಯಾಖ್ಯಾನ ನೀಡಿ, "ವಿದುರ ನೀತಿ'ಯಲ್ಲಿನ ಅನೇಕ ವಿಚಾರಗಳು ಈಗಿನ ಸಮಾಜಕ್ಕೆ ಹೇಗೆ ಸಂಬಂಧಿಸಿವೆ ಎಂದು ಚರ್ಚಿಸಿದರು. ಕವಿ ಕುಮಾರವ್ಯಾಸರು ಕರ್ನಾಟಕ ಭಾರತ ಕಥಾ ಮಂಜರಿಯನ್ನು ಹೇಗೆ ಬರೆದರು ಎಂಬ ಬಗ್ಗೆ ವಿವರಿಸಿದರು.

ಬಿ.ಎಂ. ಪಾಟೀಲ ವಚನ ಗಾಯನ ನಡೆಸಿದರು.

ವಿದ್ಯಾರ್ಥಿನಿಯರಿಗೆ ಪ್ರಸಂಗದ ಬಗ್ಗೆ ಹತ್ತು ಪ್ರಶ್ನಾವಳಿ ಏರ್ಪಡಿಸಲಾಗಿತ್ತು. ಗಮಕಿಗಳು ಹಾಗೂ ಗಮಕ ಕಲಾ ಪರಿಷತ್​ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮಕ್ಕಳಾದ ಅಶ್ವಿನಿ, ಶ್ರಾವಣಿ ಪ್ರಾರ್ಥಿಸಿದರು. ಅಧ್ಯಾಪಕ ಎಸ್​.ಎಸ್​. ಬಬಲೇಶ್ವರ ನಿರೂಪಿಸಿದರು.

ಗಮಕ ಪರಿಷತ್ತಿನ ಸದಸ್ಯ ಎಸ್​.ಎಂ. ಜೇವರಗಿ, ಶಿಕ್ಷಕಿ ಸುರೇಖಾ ಪಾಟೀಲ, ಎಸ್​.ಎನ್​. ಪಾಟೀಲ, ಎಸ್​.ಬಿ. ಕುಲಕರ್ಣಿ, ಎಸ್​.ಎಂ. ಮುಳವಾಡ, ಬಿ.ಆರ್​. ತೇರದಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net