ಪ್ರಭಾತಪೇರಿ ಮೂಲಕ ಆಧಾರ್​ ಕಾರ್ಡ್​ ಜಾಗೃತಿ

Aadhaar card awareness through Prabhatperi
ವಿಜಯಪುರ ಸಮೀಪದ ತೊರವಿ ಗ್ರಾಮದಲ್ಲಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಭಾತಪೇರಿ ಮೂಲಕ ಆಧಾರ್​ ಕಾರ್ಡಿನ ಮಹತ್ವ ಕುರಿತು ಜಾಗೃತಿ ಮೂಡಿಸಿದರು. ಮುಖ್ಯಶಿಕ್ಷಕ ಆನಂದ ಜಾಧವ ಇತರರಿದ್ದರು.
Published on

ವಿಜಯಪುರ: ಸಮೀಪದ ತೊರವಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಾಗೂ ಹೆಣ್ಣುಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶನಿವಾರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರಭಾತಪೇರಿ ಮೂಲಕ ಆಧಾರ್​ ಕಾರ್ಡ್​ ಮಾಡಿಸುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಮುಖ್ಯಶಿಕ್ಷಕ ಆನಂದ ಜಾಧವ ಮಾತನಾಡಿ, ಆಧಾರ್​ ಕಾರ್ಡ್​ ಮಾಡಿಸದಿರುವ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದಾರೆ. ಆಧರ್​ ಕಾರ್ಡ್​ ಮಾಡಿಸಿ ಬಡ ವಿದ್ಯಾರ್ಥಿಗಳು ಕಾಲರ್​ಶಿಪ್​ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಶಿಕ್ಷಕರಾದ ಎಂ.ಕೆ.ಬಗಲಿ, ಎಸ್​.ಎಸ್​. ಶಿವಾನಂದ, ಶಶೀಲ್​ ಬಿರಾದಾರ, ಎ.ಎಸ್​. ಪಾಟೀಲ್​, ಎಸ್​.ಎಸ್​. ಮಠ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net