ಯಲಗೂರದಲ್ಲಿ ಸಂಭ್ರಮದ ರಥೋತ್ಸವ

A festive chariot festival in Yelagura
ಯಲಗೂರದಲ್ಲಿ ಭಾನುವಾರ ನಡೆದ ಯಲಗೂರೇಶನ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ.
Published on

ಆಲಮಟ್ಟಿ: ಯಲಗೂರು ಗ್ರಾಮದ ಯಲಗೂರೇಶನ ಕಾರ್ತಿಕೋತ್ಸವ ನಿಮಿತ್ತ ಭಾನುವಾರ ಸಂಜೆ ಸಂಭ್ರಮದಿಂದ ರಥೋತ್ಸವ ನಡೆಯಯಿತು.

ಕೀಲುಗೊಂಬೆ, ಕುದುರೆ ಕುಣಿತ, ನವಿಲು ಕುಣಿತ ಸೇರಿ ವಿವಿಧ ವಾದ್ಯ ವೈಭವಗಳೊಂದಿಗೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಜನ ಉತ್ತತ್ತಿ, ಹಣ್ಣು ಸಮರ್ಪಿಸಿ ಭಕ್ತಿ ಮೆರೆದರು.

ದೇವಸ್ಥಾನ ಸಮಿತಿ ಅಧ್ಯ ಅನಂತ ಓಂಕಾರ, ಅನ್ನದಾಸೋಹ ಸೇವಾ ಸಮಿತಿ ಅಧ್ಯ ಶ್ಯಾಮ್​ ಪಾತ್ರದ, ನಾರಾಯಣ ಒಡೆಯರ, ಗೋಪಾಲ ಗದ್ದನಕೇರಿ, ದೇವಸ್ಥಾನ ಕಮಿಟಿ ಕಾರ್ಯದರ್ಶಿ ಸಂತೋಷ ಪೂಜಾರಿ, ನ್ಯಾಯವಾದಿ ಎಸ್​.ಐ. ಡೆಂಗಿ, ದೇವಸ್ಥಾನ ಸಮಿತಿ ಸದಸ್ಯರು, ಹರಿದಾಸ ಸಾಹಿತ್ಯ ಸಂಗೀತ ವೇದಿಕೆ ಸದಸ್ಯರು, ಅಪಾರ ಭಕ್ತರು ಇದ್ದರು.

ಅಹೋರಾತ್ರಿ ಸಂಗೀತ:

ದೇವಸ್ಥಾನ ಆವರಣದ ಹರಿದಾಸ ಸಾಹಿತ್ಯ ಸಂಗೀತ ವೇದಿಕೆ ಸಭಾಮಂಟಪದಲ್ಲಿ ಎರಡು ದಿನ ನಡೆದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.

ಅಂತಾರಾಷ್ಟ್ರೀಯ ಕಲಾವಿದ ಚಿದಾನಂದ ಕುಲಕರ್ಣಿ ಅವರಿಂದ ಪುಣ್ಯಕೋಟಿ ಗೀತೆಯ ನೃತ್ಯ ರೂಪಕ ಗಮನ ಸೆಳೆಯಿತು. ಬಾಗಲಕೋಟೆಯ ನಟರಾಜ ಸಂಗೀತ ನೃತ್ಯ ನಿಕೇತನದ ಶುಭದಾ ದೇಶಪಾಂಡೆ ನೇತೃತ್ವದಲ್ಲಿ ಭರತನಾಟ್ಯ, ಸನಾದಿ ಅಪ್ಪಣ್ಣನ ವಂಶಸ್ತರಾದ ಡಾ. ಪುಟ್ಟರಾಜ ಬಸವಂತ ಭಜಂತ್ರಿ ಅವರಿಂದ ಶಹನಾಯಿ ವಾದನ ಜನಮನಸೂರೆಗೊಂಡಿತು.

ವಿಭಾ ಹೆಗಡೆ, ಪಂ. ರವೀಂದ್ರ ಸೊರಗಾವಿ, ಬಾಲಚಂದ್ರ ನಾಕೋಡ, ರಜತ್​ ಕುಲಕರ್ಣಿ ಅವರಿಂದ ಗಾಯನ, ರಾಯಿ ಗಲಗಲಿ ಅವರಿಂದ ತಬಲಾ ಸೋಲೊ, ತೆಲಗಿಯ ಮಧ್ವ ಭಜನಾ ಮಂಡಳಿಯಿಂದ ರೂಪಕ, ಬೆಳಗಾವಿಯ ಮನೋಹರಿ ಕುಲಕರ್ಣಿ ಅವರಿಂದ ಭರತನಾಟ್ಯ ನಡೆಯಿತು.

ಭಾನುವಾರ ಬೆಳಗ್ಗೆ ತೆಂಗಿನ ವನದಲ್ಲಿ ನಾರಾಯಣ ಹಿರೆಕೊಳಚಿ ಅವರಿಂದ ವಾಯವೋಲಿನ್​ ವಾದನ, ಪಂಡಿತ ರಾಜೇಂದ್ರ ನಾಕೋಡ ಅವರಿಂದ ತಬಲಾ ಸೋಲೊ, ಕುಮಾರ ಮರಡೂರ, ಪಂಡಿತ ಜಯತೀರ್ಥ ಮೇವುಂಡಿ ಹಾಗೂ ವಿದುಷಿ ಸಂಗೀತಾ ಕಟ್ಟಿ ಅವರು ಭಕ್ತಿ ಸಂಗೀತದ ಸವಿ ಉಣಬಡಿಸಿದರು.

ಹರಿದಾಸ ಸಾಹಿತ್ಯ ಹಾಗೂ ಸಂಗೀತ ೇತ್ರದಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ನೀಡುವ ಯಲಗೂರೇಶ ಅನುಗ್ರಹ ಪ್ರಶಸ್ತಿಯನ್ನು ಈ ಬಾರಿ ಪಂ. ಬಾಲಚಂದ್ರ ನಾಕೋಡ, ವಿದುಷಿ ಶುಭದಾ ದೇಶಪಾಂಡೆ ಹಾಗೂ ಪಂಡಿತ ರಾಜೇಂದ್ರ ನಾಕೋಡ ಅವರಿಗೆ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net