ಕವಿತೆಗಳ ಮೂಲಕ ಎಚ್‌ಎಸ್‌ವಿ ಜೀವಂತ

bdvt hsv
ಭದ್ರಾವತಿಯಲ್ಲಿ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಭಾವ- ಗಾನ- ಗೌರವ ಕಾರ್ಯಕ್ರಮದಲ್ಲಿ ಡಾ. ಕೃಷ್ಣ ಎಸ್.ಭಟ್ ಮಾತನಾಡಿದರು. ಶಿವರಾಜ್, ಮುನಿರಾಜು, ಆನಂದ್ ಇದ್ದರು.
Published on

ಭದ್ರಾವತಿ: ಪ್ರಮುಖ ವ್ಯಕ್ತಿಗಳ ಸಂಸ್ಮರಣೆ ಮಾಡುವುದು ಎಂದರೆ ಆ ವ್ಯಕ್ತಿಯ ವ್ಯಕ್ತಿತ್ವ, ಜೀವನ ಶೈಲಿ ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯ ಎಂದು ಭೂಮಿಕಾ ವೇದಿಕೆ ಆಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಹೇಳಿದರು.

ಹಳೇ ನಗರದ ಶ್ರೀ ಗಾಯತ್ರಿ ಧರ್ಮಶಾಲಾ ಸಭಾಂಗಣದಲ್ಲಿ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಭಾವ- ಗಾನ- ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಚ್‌ಎಸ್‌ವಿ ಅವರ ಕವಿತೆ, ಕವನಗಳಲ್ಲಿ ಆಯಾ ಕಾಲಘಟ್ಟದಲ್ಲಿ ಆಯಾ ವಯೋಮಾನದವರು ಅನುಭವಿಸಿದ ಸಂಗತಿಗಳು ಅಡಕವಾಗಿರುತ್ತಿದ್ದವು. ಇದು ಅವರ ವ್ಯಕ್ತಿತ್ವದ ವಿಶೇಷ. ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ರಚಿಸಿದ ಕವಿತೆಗಳ ಮೂಲಕ ಸದಾ ಕನ್ನಡಿಗರ ಮನದಲ್ಲಿ ಉಳಿಯುತ್ತಾರೆ ಎಂದರು.

ಎಚ್‌ಎಸ್‌ವಿ ರಚಿಸಿದ ಆಯ್ದ ಗೀತೆಗಳನ್ನು ಭೂಮಿಕಾ ವೇದಿಕೆಯ ಸದಸ್ಯರು ಪ್ರಸ್ತುತ ಪಡಿಸಿದರು. ಅಪರಂಜಿ ಶಿವರಾಜ್, ಮುನಿರಾಜು, ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net