ಸೆಮಿಸ್ಟರ್​ ಪ್ರವೇಶಾತಿ ದಿನ ವಿಸ್ತರಣೆ; ಜೆಎನ್​ಯು ವಿವಿ ಉಪ ಕುಲಪತಿ ಎಂ.ಜಗದೀಶ್​ ಕುಮಾರ್​ ಹೇಳಿಕೆ

jnu 10
Published on

ನವದೆಹಲಿ: ಜವಾಹರ್​ ​ಲಾಲ್​ ನೆಹರು ವಿಶ್ವವಿದ್ಯಾಲಯ (ಜೆಎನ್​ಯು)ದ ಹಾಸ್ಟೆಲ್​ ಶುಲ್ಕದ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯದ ಹಿಂದಿನ ನಿರ್ಧಾರಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಿವಿ ಉಪ ಕುಲಪತಿ ಎಂ.ಜಗದೀಶ್​ ಕುಮಾರ್​ ತಿಳಿಸಿದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಜೆಎನ್​ಯು ಕ್ಯಾಂಪಸ್​ನ ಶೈಕ್ಷಣಿಕ ಪರಿಸ್ಥಿತಿ ಬಗ್ಗೆ ಶುಕ್ರವಾರ ಆಯೋಜಿಸಿದ್ದ ಆಡಳಿತ ವಿಭಾಗದ ಜತೆ ಸಭೆ ಬಳಿಕ ಮಾತನಾಡಿದರು.

ಕೆಲ ದಿನಗಳಿಂದ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಶೈಕ್ಷಣಿಕ ವಿಚಾರದಲ್ಲಿನ ಬದಲಾವಣೆ ಗಮನಿಸಿ ರಿಜಿಸ್ಟ್ರಾರ್, ವಿವಿ ಆಡಳಿತ ಮಂಡಳಿಯ ಮೂರು ಸದಸ್ಯರ ಜತೆ ಸಚಿವಾಲಯ ತುರ್ತು ಸಭೆ ನಡೆಸಿತು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು.

ವಿಶ್ವವಿದ್ಯಾಲಯದ ವಾತವರಣ ಶಾಂತವಾಗಿದ್ದು, ಶೈಕ್ಷಣಿಕ ಚಟುವಟಿಕೆಗಳು ಎಂದಿನಂತೆ ಸಾಗಲಿವೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸೆಮಿಸ್ಟರ್​ ಪ್ರವೇಶಾತಿ ದಿನ ವಿಸ್ತರಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಆಡಳಿತ ವಿಭಾಗದ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲಾಗಿದೆ ಎಂದು ತಿಳಿಸಿದರು. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net