ಇ-ಲರ್ನಿಂಗ್​​ ಅಧ್ಯಯನ ಸಾಮಗ್ರಿ ಅಭಿವೃದ್ಧಿಗೆ ವಿದ್ಯಾದಾನ್​ ಕಾರ್ಯಕ್ರಮ

E Learning
Published on

ನವದೆಹಲಿ: ಲಾಕ್​ಡೌನ್​ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುವಂತೆ ಮಾನವ ಸಂಪನ್ಮೂಲ ಸಚಿವಾಲಯ ವಿದ್ಯಾದಾನ್​ 2.0ವನ್ನು ಆರಂಭಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ಅವರು ಬುಧವಾರ ಈ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿದರು.

ವಿದ್ಯಾದಾನ್​ ಇ- ಲರ್ನಿಂಗ್​ ಯೋಜನೆ ಅಧ್ಯಯನ ಸಾಮಗ್ರಿಯನ್ನು ಅಭಿವೃದ್ಧಿಪಡಿಸುವ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಅಧ್ಯಯನ ಸಾಮಗ್ರಿಯನ್ನು ದೀಕ್ಷಾ (DIKSHA) ಅಪ್ಲಿಕೇಷನ್​ಗೆ ಒಳಪಡಿಸಬಹುದಾಗಿದ್ದು, ದೇಶಾದ್ಯಂತ ಯಾವುದೇ ಪ್ರದೇಶದಲ್ಲೂ ಯಾವುದೇ ವಿದ್ಯಾರ್ಥಿ ತನ್ನ ಕಲಿಕೆಯನ್ನು ಮುಂದುವರಿಸಬಹುದಾಗಿದೆ ಎಂದು ಮಾನವ ಸಂಪಸ್ಮೂಲ ಸಚಿವರು ತಿಳಿಸಿದರು.‘

ಕೋವಿಡ್​ -19 ನಿಂದಾಗಿ ಶಾಲಾ ಶಿಕ್ಷಣ ಸ್ಥಗಿತಗೊಂಡಿರುವುದರಿಂದ ಇ-ಲರ್ನಿಂಗ್​​ ಅಧ್ಯಯನ ಸಾಮಗ್ರಿಗೆ ಬೇಡಿಕೆ ಹೆಚ್ಚಿದೆ. ಶಾಲಾ ಶಿಕ್ಷಣದೊಂದಿಗೆ ಡಿಜಿಟಲ್​ ಶಿಕ್ಷಣವನ್ನು ಸಮನ್ವಯಗೊಳಿಸುವುದೂ ಕೂಡ ಇ-ಲರ್ನಿಂಗ್​ ಅಧ್ಯಯನ ಸಾಮಗ್ರಿ ಅಭಿವೃದ್ಧಿಗೆ ಕಾರಣವಾಗಿದೆ.

ಶಿಕ್ಷಣ ತಜ್ಞರು, ವಿಷಯ ತಜ್ಞರು, ಶಾಲೆ, ಕಾಲೇಜುಗಳು, ವಿವಿಗಳು ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಅಧ್ಯಯನ ಸಾಮಗ್ರಿ ಕೊಡುಗೆ ನೀಡಬಹುದು ಎಂದು ತಿಳಿಸಿದ್ದಾರೆ. ದೀಕ್ಷಾ & ಇ-ಲರ್ನಿಂಗ್​ ಅಧ್ಯಯನ ಸಾಮಗ್ರಿಗೆ ಸೇರಿಸಬಹುದಾದ (ಸ್ವೀಕಾರಾರ್ಹ) ಕೊಡುಗೆ ನೀಡಿದರೆ ಅಂಥವರ ಕೊಡುಗೆ ಹೆಮ್ಮೆಯ ವಿಷಯವಾಗಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net