ಪ್ರೀತಿಸುವುದನ್ನು ಹೇಗೆ ನಿಲ್ಲಿಸಲು ಸಾಧ್ಯ: ಇಮಾದ್ ಷಾ ಜೊತೆಗಿನ ಬ್ರೇಕ್ ಅಪ್​ ಬಗ್ಗೆ ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ ಸ್ಪಷ್ಟನೆ! | Bollywood

untitled-design-2025-09-09t132605710-68bfddb1d83c6
Published on

Bollywood: ಹಲವಾರು ವರ್ಷಗಳ ಕಾಲ ಡೇಟಿಂಗ್​ ಮಾಡಿದ ನಂತರ ಸಬಾ ಆಜಾದ್ ಮತ್ತು ಇಮಾದ್ ಷಾ 2020 ರಲ್ಲಿ ಬೇರ್ಪಟ್ಟಿರುವುದಾಗಿ ಸುದ್ದಿಗಳು ಬಂದಿದ್ದವು. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಮ್ಮ ಪ್ರೀತಿ ಕಹಿಯೊಂದಿಗೆ ಕೊನೆಗೊಂಡಿಲ್ಲ. ಬದಲಾಗಿ ಅವರು ವೈಯಕ್ತಿಕವಾಗಿ ವೃತ್ತಿಪರವಾಗಿ ತಮ್ಮ ಸಂಬಂಧವನ್ನು ಮುಂದುವರೆಸಲು ಹೊಸ ದಾರಿಯನ್ನು ಅನುಸರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಪರಸ್ಪರ ಬೇರಾಗುವಿಕೆಯು ಎಂದಿಗೂ ನಾಟಕೀಯ ವಿದಾಯದಂತೆ ಅನಿಸಲಿಲ್ಲ ಎಂದು ಇಮಾದ್ ಒಪ್ಪಿಕೊಂಡಿದ್ದಾರೆ. ನಾವಿಬ್ಬರು ಸಂಬಂಧದಿಂದ ದೂರವಾದಾಗ ಅನೇಕರು ಸ್ವಲ್ಪ ಸಮಯದವರೆಗೆ ಭೇಟಿಯಾಗಬಾರದು ಎಂದು ಹೇಳಿದರು. ಆದರೆ ಅದು ಅಂತ್ಯಕ್ಕಿಂತ ಹೆಚ್ಚಾಗಿ ಕಷ್ಟವೆಂದು ತಿಳಿಯಿತು. ಅದು ಅಧಿಕೃತವಾಗಿ ಮುಗಿಯುವ ಹೊತ್ತಿಗೆ, ಹೆಚ್ಚಿನ ಹೃದಯ ನೋವು ಇರಲಿಲ್ಲ" ಎಂದು ಅವರು ಹೇಳಿದರು.

ಈ ಬಗ್ಗೆ ಸಭಾ ಪ್ರತಿಕ್ರಿಯೆ ನೀಡಿದ್ದು, ಪ್ರೀತಿ ಎಂದಿಗೂ ದೂರವಾಗುವುದಿಲ್ಲ. "ಯಾರಾದರೂ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳದೇ ಇರುವಾಗ ನೀವು ಅವರನ್ನು ಹೇಗೆ ಪ್ರೀತಿಸುವುದನ್ನು ನಿಲ್ಲಿಸುತ್ತೀರಿ? ನಮ್ಮಿಬ್ಬರದ್ದೂ ಪರಸ್ಪರ ಜೊತೆಗಿರುವ ಸುಂದರವಾದ ಪ್ಲಾಟೋನಿಕ್ ಸ್ನೇಹ ಎಂದು ತಿಳಿಸಿದ್ದಾರೆ.

ಅವರೊಂದಿಗೆ ಇರುವ ದಿನಗಳನ್ನು ನೆನೆದ ಸಬಾ ಅವರು ನನ್ನ ಕುಟುಂಬ ಇದ್ದಂತೆ, ಇವರನ್ನು ನನ್ನ ಜೀವನದಿಂದ ಹೊರಹಾಕಲು ಯಾವುದೇ ಮಾರ್ಗವಿಲ್ಲ. ನಾವು ಶಾಶ್ವತವಾಗಿ ಸ್ನೇಹಿತರಾಗುತ್ತೇವೆ ಎಂಬುದು ನಮಗೆ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಬದ್ಧತೆ ಇಲ್ಲದ ನಂತರ ನಮ್ಮ ಸಂಬಂಧವು ಉತ್ತಮವಾಗಿದೆ. ನಾವು ಬೇರ್ಪಟ್ಟ ನಂತರ ನಮ್ಮ ಸಂಬಂಧ ಹೆಚ್ಚು ಉತ್ತಮವಾಗಿದೆ. ಉತ್ತಮ ಸ್ನೇಹಿತರಾದೆವು, ಕಡಿಮೆ ತೀರ್ಪುಗಳನ್ನು ನೀಡಲಾರಂಭಿಸಿದ್ದೇವೆ ಎಂದರು. ಇನ್ನು ಈ ಸಮಯದಲ್ಲಿ ಇಮಾದ್​ ನಮ್ಮ ಸಂಬಂಧ ಕಳೆದಿರುವ ದಿನಗಳಲ್ಲಿ ಉತ್ತಮ ಭಾಗಗಳನ್ನು ಉಳಿಸಿಕೊಂಡು, ಉಳಿದವುಗಳನ್ನು ಫಿಲ್ಟರ್​ ಮಾಡುವಂತಿದೆ ಎಂದರು.

ಸಬಾಗೆ ಈ ಬದಲಾವಣೆ ಆ ಸಮಯದಲ್ಲಿ ಬೇಕಾಗಿತ್ತು. ಯಾವುದೇ ಗೊಂದಲ ಇರಲಿಲ್ಲ. ಹಾಗೆಯೇ ಆಕೆಯ ನಿರ್ಧಾರ ಬಹಳ ಸಹಜವಾಗಿತ್ತು. ಆಕೆಗೆ ಸ್ನೇಹ ಎಂಬುದು ಕುಟುಂಬದಂತೆ ಭಾಸವಾಗುತ್ತದೆ. ಅವರು ಸದಾ ಖುಷಿಯಾಗಿರಲಿ ಎಂದು ಇಮಾದ್ ಹೇಳಿದರು.

ಸಬಾ ಆಜಾದ್ ಪ್ರಸ್ತುತ ಹೃತಿಕ್ ರೋಷನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು 2022 ರಲ್ಲಿ ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದರು. ಹೃತಿಕ್ ಅವರ ಕುಟುಂಬದ ಪಾರ್ಟಿಗಳಲ್ಲಿ ಸಬಾ ಕಾಣಿಸಿಕೊಳ್ಳುತ್ತಾರೆ. ಇದರೊಂದಿಗೆ ಅವರ ಕುಟುಂಬದೊಂದಿಗೆ ಉತ್ತಮ ಸಂಬಂಧ ಇರುವುದಾಗಿ ತಿಳಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net