ಸಖತ್​ ಟೆಸ್ಟಿ ಆಚಾರಿ ಮಟನ್​ ಚಾಪ್ಸ್​​​ ಮಾಡುವುದು ಸುಲಭ: ಹೀಗಿದೆ ಮಾಡುವು ವಿಧಾನ

Untitled-design-36-1
Published on

ವೀಕೆಂಡ್​ನಲ್ಲಿ ಟೇಸ್ಟಿ ಫುಡ್​​ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ನಾನ್​​ವೆಜ್​ ಪ್ರಿಯರಿಗಂತೂ ವಾರಾಂತ್ಯ ಭರ್ಜರಿ ಭೋಜನ ಅಂತು ಪಕ್ಕಾ. ಭಾರತೀಯ ಮಸಾಲೆಗಳ ರುಚಿ ಮತ್ತು ಸುವಾಸನೆಯ ಎಂತಹವರನ್ನಾದರೂ ಮೋಡಿ ಮಾಡುತ್ತದೆ. ಮಟನ್ ನಲ್ಲಿ ಎಷ್ಟೋ ರೀತಿಯ ವೆರೈಟಿ ಮಾಡಬಹದು. ಸಾಮಾನ್ಯವಾದ ರುಚಿಗಿಂತ ವಿಭಿನ್ನ ರುಚಿಕೊಡುವ ಆಚಾರಿ ಮಟನ್​ ಚಾಪ್ಸ್​​ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಬೇಳೆಕಾಳುಗಳನ್ನು ಅತಿಯಾಗಿ ಬೇಯಿಸುವುದನ್ನು ತಪ್ಪಿಸಬೇಕು: ಐಸಿಎಂಆರ್ ಸೂಚನೆ ಆಚಾರಿ ಮಟನ್​ ಚಾಪ್ಸ್​​ಗೆ ಬೇಕಾಗಿರುವ ಪದಾರ್ಥಗಳು:

  • 250 ಗ್ರಾಂ ಮಟನ್​​
  • 1 ದೊಡ್ಡ ಆಲೂಗಡ್ಡೆ
  • 2 ಟೆಬಲ್​ ಸ್ಪೂನ್​ ಚಿಲ್ಲಿ ಪೌಡರ್​​
  • 1 ಟೀಸ್ಪೂನ್ ಅರಿಶಿನ ಪುಡಿ
  • 2 ಟೆಬಲ್​ ಸ್ಪೂನ್ ಧನಿಯಾ ಪೌಡರ್​​
  • 2 ಸ್ಪೂನ್​ಗಳು ಉಪ್ಪಿನಕಾಯಿ ಮಸಾಲಾ
  • 1 ಟೀಸ್ಪೂನ್ ಗರಂ ಮಸಾಲಾ ಪುಡಿ
  • ರುಚಿಗೆ ತಕ್ಕಂತೆ ಉಪ್ಪು
  • 1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
  • ಮೊಸರು
  • ಗರಂ ಮಸಾಲಾ
  • ಜೀರಿಗೆ
  • 1 ಏಲಕ್ಕಿ
  • 1 ದಾಲ್ಚಿನ್ನಿ
  • ಈರುಳ್ಳಿ
  • ಅಡುಗೆ ಎಣ್ಣೆ

ಆಚಾರಿ ಮಟನ್​ ಚಾಪ್ಸ್​ ಮಾಡುವ ವಿಧಾನ: ಮಟನ್ ಅನ್ನು ತೊಳೆಯಿರಿ. ಬಳಿಕ ಚಿಲ್ಲಿ ಪೌಡರ್​​, ಅರಿಶಿನ ಪುಡಿ, ಧನಿಯಾ ಪುಡಿ, ಉಪ್ಪು, ಉಪ್ಪಿನಕಾಯಿ ಮಸಾಲಾ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 20 ನಿಮಿಷಗಳ ಕಾಲ ಮ್ಯಾರಿನೇಟ್​ ಮಾಡಲು ಬಿಡಿ. ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಜೀರಿಗೆ, ಏಲಕ್ಕಿ, ದಾಲ್ಚಿನ್ನಿ, ಈರುಳ್ಳಿ ಹಾರಿ ಫ್ರೈ ಮಾಡಿ. ನಂತರ ಮ್ಯಾರಿನೇಟ್ ಮಾಡಿದ ಮಟನ್ ಸೇರಿಸಿ. ಅವಶ್ಯಕತೆ ಇದ್ದರೆ ಟೊಮ್ಯಾಟೋ ಸೇರಿಸಿ ಸ್ವಲ್ಪ ಫ್ರೈ ಮಾಡಿ. ಒಂದೂವರೆ ಕಪ್ ನೀರು ಸೇರಿಸಿ ಸ್ವಲ್ಪ ಸಮಯ ಬೇಯಲು ಬಿಡಿ. ಬಳಿಕ ಕುಕ್ಕರ್ ಮುಚ್ಚಳ ಹಾಕಿ 4 ವಿಶಿಲ್​ ಕೂಗಿಸಿ. ಬಳಿಕ ಮಟನ್ ಮಿಶ್ರಣಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net