

ಬೆಂಗಳೂರು: ನೀವು ಚಿಕನ್ ಕಬಾಬ್, ಎಗ್ ಕಬಾಬ್, ಆಲೂಗಡ್ಡೆ, ಗೋಬಿ ಕಬಾಬ್ ಹೀಗೆ ಬೇರೆಬೇರೆ ಪದಾರ್ಥಗಳಿಂದ ಕಬಾಬ್ ಮಾಡಿ ಟೇಸ್ಟ್ ನೋಡಿರಬಹುದು. ಆದ್ರೆ ಬೆಳ್ಳುಳ್ಳಿ ಕಬಾಬ್ ಎಂದಾದ್ರು ಟೇಸ್ಟ್ ನೋಡಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಬೆಳ್ಳುಳ್ಳಿ ಕಬಾಬ್ ಕುರಿತಾಗಿ ವಿಡಿಯೋ ವೈರಲ್ ಆಗುತ್ತಿದೆ. ಹೀಗಿರುವಾಗ ಒಮ್ಮೆ ಆದ್ರು ಬೆಳ್ಳುಳ್ಳಿ ಕಬಾಬ್ ಮಾಡಿಲ್ಲ ಅಂದ್ರೆ ಹೇಗೆ.. ಬನ್ನಿ ನಾವಿಂದು ಬೆಳ್ಳುಳ್ಳಿ ಕಬಾಬ್ ಮಾಡಿ ಟೇಸ್ಟ್ ನೋಡಿನೋಣ..
ಬೇಕಾಗುವ ಸಾಮಗ್ರಿಗಳು:
1) ಚಿಕನ್ - 1 ಕೇಜಿ
2) ಜೋಳದ ಹಿಟ್ಟು - ಅರ್ಧ ಕಪ್
3) ಮೈದಾ- ಕಾಲು ಕಪ್
4) ಅಕ್ಕಿಹಿಟ್ಟು- 2 ಸ್ಪೂನ್
5) ಅಡುಗೆ ಎಣ್ಣೆ- 2 ಕಪ್
6) ಮೊಟ್ಟೆ- 1
7) ಮೊಸರು- ಅರ್ಧ ಕಪ್
8) ಕಸೂರಿ ಮೇಥಿ - ಸ್ವಲ್ಪ
ರುಬ್ಬೋದಕ್ಕೆ 1) ಬೆಳ್ಳುಳ್ಳಿ- ಅರ್ಧ ಕಪ್
2) ಶುಂಠಿ- ಸ್ವಲ್ಪ
3) ಚಕ್ಕೆ- 1
4) ಲವಂಗ- 1
5) ಕರಿಬೇವು- ಸ್ವಲ್ಪ
6) ಹಸಿಮೆಣಸು- 4
ಮಾಡುವ ವಿಧಾನ: 1) ಪಾತ್ರೆಗೆ ಜೋಳದಹಿಟ್ಟು, ಅಕ್ಕಿಹಿಟ್ಟು, ಮೈದಾ, ಕಡಲೆಹಿಟ್ಟು, ಕಸೂರಿ ಮೇತಿ, ಅದುಗೆ ಎಣ್ಣೆ, ಉಪ್ಪು ಹಾಕಿ ಮಿಶ್ರಣ ಮಾಡಬೇಕು.
2) ಶುಂಠಿ, ಚಕ್ಕೆ, ಕರಿಬೇವು, ಹಸಿಮೆಣಸು ಹಾಕಿ ಚೆನ್ನಾಗಿ ರುನ್ನಿಕೊಳ್ಳಬೇಕು.
3) ನಂತರ ರುಬ್ಬಿದ ಮಸಾಲೆ ಹಾಗೂ ಮಿಶ್ರಣ ಮಾಡಿಕೊಂಡ ಮಸಾಲೆಯುನ್ನು ಒಟ್ಟಾಗಿ ಸೇರಿಸಿ ಒಂದು ಮೊಟ್ಟೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
4) ಈಗಾಗಲೆ ತಯಾರಿಸಿದ ಮಿಶ್ರಣಕ್ಕೆ ಚಿಕನ್ ಹಾಕಿ ರುಬ್ಬಿದ ಮಸಾಲೆ, ಉಪ್ಪು ,ಅರಿಶಿಣ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಹಾಗೆ ಇಟ್ಟಿರಬೇಕು.
5) ಕಾದ ಎಣ್ಣೆಗೆ ಹಾಕಿ ರೋಸ್ಟ್ ಮಾಡಿ ಬೇಯಿಸಿದರೆ ಬಿಸಿ ಬಿಸಿ ಬೆಳ್ಳುಳ್ಳಿ ಕಬಾಬ್ ಸವಿಯಲು ಸಿದ್ಧವಾಗುತ್ತದೆ.