ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟರೆ ವಿಮೆಯಿಂದ ಸಿಗುವ ಹಣವೆಷ್ಟು? ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ | EPFO

ವಿಜಯವಾಣಿ (36)
Published on

EPFO: ಉದ್ಯೋಗಿ ಭವಿಷ್ಯ ನಿಧಿ (EPF) ಖಾತೆದಾರರ ಕುಟುಂಬವು ಕಷ್ಟದ ಸಮಯದಲ್ಲಿ ಈ ಯೋಜನೆಯ ಪ್ರಯೋಜನಗಳನ್ನು ಬಳಿಸಿಕೊಳ್ಳಬಹುದು. ಅಂದರೆ, ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ (EDLI) ಅಡಿಯಲ್ಲಿ, ಆಯಾ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟರೆ EPFO ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯಾಗಿ 7 ಲಕ್ಷ ರೂ.ಗಳವರೆಗೆ ವಿಮೆಯನ್ನು ಒದಗಿಸುತ್ತಿದೆ. ಇದು ಖುಷಿ ವಿಚಾರ ನಿಜ. ಆದರೆ, ಇದಕ್ಕೆ ಯಾರೆಲ್ಲ ಅರ್ಹರು? ಇಷ್ಟು ವರ್ಷಗಳ ಅನುಭವ ಇರಬೇಕೇ ಅಥವಾ ಈ ವಿಮಾ ಯೋಜನೆ ಎಲ್ಲರಿಗೂ ಅನ್ವಯಿಸಲಿದೆಯೇ? ಕ್ಲೈಮ್ ಮಾಡಿಕೊಳ್ಳುವುದು ಹೇಗೆ? ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.

ಏನಿದು EDLI ಯೋಜನೆ?

EDLI ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ EPFO ಸದಸ್ಯರಿಗೆ ಒದಗಿಸಲಾದ ವಿಮಾ ಯೋಜನೆಯಾಗಿದೆ. ಈ ಯೋಜನೆಯನ್ನು 1976ರಲ್ಲಿ ಇಪಿಎಫ್​ಓ ಪರಿಚಯಿಸಿತು. ಉದ್ಯೋಗಿ ಸೇವೆಯಲ್ಲಿರುವಾಗ ಮರಣಹೊಂದಿದರೆ, ನಾಮಿನಿ ವ್ಯಕ್ತಿಗೆ ಹಣ ಸೇರಲಿದೆ. ಈ ಯೋಜನೆಯು EPFO ನಿಯಮಾವಳಿ ಕಾಯ್ದೆ, 1952ರ ಅಡಿಯಲ್ಲಿ ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಕಂಪನಿಗಳು ತನ್ನ ಉದ್ಯೋಗಿಗಳಿಗೆ ಜೀವ ವಿಮೆಯನ್ನು ಒದಗಿಸುವುದು ಕಡ್ಡಾಯವಾಗಿದೆ.

ಪ್ರೀಮಿಯಂ ಪಾವತಿಸಬೇಕೇ? ಬೇಡವೇ?

ಈ ಯೋಜನೆಯಡಿ ಸದಸ್ಯರು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಕಂಪನಿಗಳು ಮತ್ತು ಉದ್ಯೋಗದಾತರು ಸ್ವತಃ ಈ ಮೊತ್ತವನ್ನು ಪಾವತಿಸುತ್ತಾರೆ. ಕಂಪನಿಗಳು ಮೂಲ ವೇತನದ ಶೇ.0.5ರಷ್ಟು ಅಥವಾ ಪ್ರತಿ ತಿಂಗಳು ಗರಿಷ್ಠ 75 ರೂ. ಹಣವನ್ನು ಕೊಡುಗೆಯಾಗಿ ನೀಡಬೇಕು. ಖಾತೆದಾರರ ವೇತನದಿಂದ ಪಿಎಫ್ ಅನ್ನು ಸಂಗ್ರಹಿಸಬಾರದು ಎಂದು ವರದಿಯೊಂದು ಹೇಳಿದೆ.

ಯೋಜನೆಯ ಕೊಡುಗೆಗಳಿಗೆ ಗರಿಷ್ಠ ವೇತನ ಮಿತಿ ಕೇವಲ 15 ಸಾವಿರ ರೂ. ಮೂಲ ವೇತನವು 15 ಸಾವಿರ ರೂ.ಗಿಂತ ಹೆಚ್ಚಿದ್ದರೂ, ಇಡಿಎಲ್ಐ 15 ಸಾವಿರ ರೂ. ಅನ್ನು ಮಾತ್ರ ಪಾವತಿಸಬೇಕಾಗುತ್ತದೆ. ಕನಿಷ್ಠ ವೇತನವು 15 ಸಾವಿರ ರೂ.ಗಳಿಗಿಂತ ಕಡಿಮೆಯಿದ್ದರೆ, ಅದೇ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಕಂಪನಿಗಳು ಈ ಮೊತ್ತವನ್ನು ಪಾವತಿಸದಿದ್ದರೆ, ಇವಿಎಫ್‌ಒ ಅದನ್ನು ಒಂದು ಪ್ರತಿಶತದೊಂದಿಗೆ ಮರುಪಡೆಯುತ್ತದೆ.

ಯಾರೆಲ್ಲ ಅರ್ಹರು?

ಕರ್ತವ್ಯದಲ್ಲಿರುವ ಉದ್ಯೋಗಿಯೊಬ್ಬರು ಅಕಾಲಿಕ ಮೃತಪಟ್ಟರೆ, ಯೋಜನೆಯಡಿಯಲ್ಲಿ ಉದ್ಯೋಗಿ ಸೂಚಿಸಿರುವ ನಾಮನಿರ್ದೇಶಿತರು ಅಂದರೆ ನಾಮಿನಿ ಈ ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರು ಅರ್ಜಿ ಸಲ್ಲಿಸಬಹುದು. ನಾಮಿನಿ ಹೆಸರು ನೋಂದಾಯಿಸದಿದ್ದರೆ, ಕಾನೂನುಬದ್ಧ ಉತ್ತರಾಧಿಕಾರಿಗಳು ಅಥವಾ ಕುಟುಂಬ ಸದಸ್ಯರು ಇದನ್ನು ಪಡೆಯಬಹುದಾಗಿದೆ. ನಾಮಿನಿಯ ಕುಟುಂಬ ಸದಸ್ಯರು, ಉತ್ತರಾಧಿಕಾರಿಗಳು ಅಪ್ರಾಪ್ತ ವಯಸ್ಕರಾಗಿದ್ದರೆ, ಅವರ ಬದಲಿಗೆ ಅವರ ಪೋಷಕರು ಈ ಮೊತ್ತವನ್ನು ಪಡೆಯಬಹುದು.

EDLI ಯೋಜನೆಯ ಪ್ರಯೋಜನಗಳೇನು?

ಈ ವಿಮಾ ಮೊತ್ತವನ್ನು ಕಳೆದ 12 ತಿಂಗಳ ಸರಾಸರಿ ಮಾಸಿಕ ವೇತನದ 35 ಪಟ್ಟು ಪಡೆಯಬಹುದು. ಆದಾಗ್ಯೂ, ಇಪಿಎಫ್​ ಸದಸ್ಯರಿಗೆ ಗರಿಷ್ಠ ಸರಾಸರಿ ಮಾಸಿಕ ವೇತನವು 15 ಸಾವಿರ ರೂ. ಆಗಿರಬೇಕು. ಉದ್ಯೋಗಿ 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸೇವೆಯಲ್ಲಿದ್ದರೂ ಸಹ 12 ತಿಂಗಳ ಸರಾಸರಿ ಮಾಸಿಕ ವೇತನವು 15000 ರೂ. x 35, ಅಂದರೆ 5,25,000 ರೂ. ಜೊತೆಗೆ 1,75,000 ರೂ. ಹೆಚ್ಚುವರಿ ಬೋನಸ್ ಜೊತೆಗೆ ಗರಿಷ್ಠ 7 ಲಕ್ಷ ರೂ.ಗಳನ್ನು ನೀಡಲಾಗುತ್ತದೆ.

ಉದ್ಯೋಗಿ 12 ತಿಂಗಳಿಗಿಂತ ಹೆಚ್ಚು ಕಾಲ ಸೇವೆಯಲ್ಲಿ ಮುಂದುವರಿದರೆ, ಕನಿಷ್ಠ 2,50,000 ರೂ. ಮತ್ತು ಗರಿಷ್ಠ 7 ಲಕ್ಷ ರೂ. ಅನ್ನು ವ್ಯಕ್ತಿಗೆ ಪಾವತಿಸಲಾಗುವುದು ಎಂದು EPFO ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸುವ ಮೊದಲೇ ಮರಣ ಹೊಂದಿದ್ದಲ್ಲಿ ವಿಮಾ ಯೋಜನೆಯ ಹಣವನ್ನು ಅವರ ಕುಟುಂಬ ಸದಸ್ಯರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ಪಡೆಯಬಹುದು. ಕನಿಷ್ಠ 50,000 ರೂ. ವಿಮಾ ಪ್ರಯೋಜನವನ್ನು ನೀಡಲಾಗುತ್ತದೆ.

ಕ್ಲೈಮ್ ಮಾಡುವುದು ಹೇಗೆ?

ಮೃತ ಉದ್ಯೋಗಿಯ ಕುಟುಂಬ ಸದಸ್ಯರು ELDI ಯೋಜನೆಯ ಪ್ರಯೋಜನಗಳನ್ನು ಪಡೆಯಲು ಒಂದಷ್ಟು ದಾಖಲೆಗಳನ್ನು ಸಲ್ಲಿಸಬೇಕು.

  • ಫಾರ್ಮ್ 5 (IF)
  • ಫಾರ್ಮ್ 20, ಫಾರ್ಮ್ 10D/10C
  • ಮೃತ EPFO ಯೋಜನೆಯ ಸದಸ್ಯರ ಮರಣ ಪ್ರಮಾಣಪತ್ರ
  • ಪಿತ್ರಾರ್ಜಿತ ಪ್ರಮಾಣಪತ್ರ
  • ನಾಮನಿರ್ದೇಶಿತರು ಅಪ್ರಾಪ್ತ ವಯಸ್ಕರಾಗಿದ್ದರೆ ರಕ್ಷಕತ್ವ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ರದ್ದಾದ ಚೆಕ್ ಪ್ರತಿ ಕ್ಲೈ
  • ಮ್ ಫಾರ್ಮ್ ಅನ್ನು ಕಂಪನಿಯು ಸಹಿ ಮಾಡಿ ಪರಿಶೀಲಿಸಬೇಕು.

ಅಧಿಕೃತ ಅಧಿಕಾರಿಯ ಅನುಪಸ್ಥಿತಿಯಲ್ಲಿ...

  • ಮ್ಯಾಜಿಸ್ಟ್ರೇಟ್
  • ಗೆಜೆಟೆಡ್ ಅಧಿಕಾರಿ
  • ಪೋಸ್ಟ್, ಸಬ್ ಪೋಸ್ಟ್ ಮಾಸ್ಟರ್
  • ಸ್ಥಳೀಯ ಸಂಸದ ಅಥವಾ ಶಾಸಕರು
  • ಬ್ಯಾಂಕ್ ಮ್ಯಾನೇಜರ್ (ನೌಕರ ಖಾತೆ ಬ್ಯಾಂಕ್)
  • ಅಧ್ಯಕ್ಷರು, ಕಾರ್ಯದರ್ಶಿ
  • EPF ಮತ್ತು CBT ಪ್ರಾದೇಶಿಕ ಸಮಿತಿಯ ಸದಸ್ಯರು
  • ಫಾರ್ಮ್ ಅನ್ನು ಅಧಿಕಾರಿಯ ಸಹಿ ಮತ್ತು ಮುದ್ರೆಯೊಂದಿಗೆ ಲಗತ್ತಿಸಬೇಕು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net