ಪ್ರಧಾನಿ ಮೋದಿಯವರಿಗೆ ರಾಹುಲ್ ಗಾಂಧಿ ಏನು ವಿಶ್ ಮಾಡಿದ್ರು?

Modi and raga
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 70ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದಾರೆ. ನಿತ್ಯವೂ ಒಂದಿಲ್ಲೊಂದು ಟೀಕೆಗಳನ್ನು ಟ್ವೀಟ್ ಮೂಲಕ ಮಾಡುತ್ತ ಬಂದಿರುವ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ಏನು ಶುಭಾಶಯ ಕೋರಿರಬಹುದು?!

ತಾಯಿ ಸೋನಿಯಾ ಅವರ ಜತೆಗೆ ವಿದೇಶಕ್ಕೆ ತೆರಳಿರುವ ರಾಹುಲ್ ಗಾಂಧಿ ಗುರುವಾರ ಬೆಳಗ್ಗೆ 7.11ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹ್ಯಾಪಿ ಬರ್ತ್​ ಡೇ ಎಂದು ವಿಶ್ ಮಾಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್ಸಿಗರು ಮತ್ತು ಅವರ ಬೆಂಬಲಿಗರು ಟ್ವಿಟರ್​ನಲ್ಲಿ ಬೇರೋಜಗಾರಿ ದಿವಸ್ ಎಂಬ ವಿಚಾರವನ್ನು ಇಟ್ಟುಕೊಂಡು ಟ್ರೆಂಡಿಂಗ್ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಆ ಮೂಲಕ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಮುಂದಾಗಿದ್ದಾರೆ.

ನ್ಯಾಷನಲ್ ಅನ್​ಎಂಪ್ಲಾಯ್​ಮೆಂಟ್​ಡೇ ಎಂಬ ಹ್ಯಾಷ್ ಟ್ಯಾಗ್ ಜತೆಗೆ ಪಿಎಂ ಮೋದಿ, ಹ್ಯಾಪಿಬಿಡೇನಮೋ ಹ್ಯಾಷ್ ಟ್ಯಾಗ್​ಗಳನ್ನೂ ಬಳಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net