

Parle-G: ಇತ್ತೀಚೆಗಷ್ಟೇ ಗಾಜಾದ ಯುದ್ಧಪೀಡಿತ ಪ್ರದೇಶದಲ್ಲಿ ತಂದೆಯೊಬ್ಬ ತನ್ನ ಮಗಳು ಆಸೆಪಟ್ಟಳು ಎಂದು ಐದು ರೂ. ಪಾರ್ಲೆ-ಜಿ ಬಿಸ್ಕತ್ಗೆ ಬರೋಬ್ಬರಿ 2,400 ರೂ. ಕೊಟ್ಟು ಖರೀದಿಸಿದ ದೃಶ್ಯ ನೆಟ್ಟಿಗರ ಮನ ಕಲಕಿತು. ಕಾರಣ, 5 ರೂ. ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ಗೆ ಅಷ್ಟೊಂದು ಹಣ ಕೊಟ್ಟು ಮಗಳಿಗಾಗಿ ಖರೀದಿಸಿದ ತಂದೆ, ಅತ್ಯಂತ ಕಠಿಣ, ಶೋಚನೀಯ ಸ್ಥಿತಿಯಲ್ಲೂ ಪುತ್ರಿಯ ಆಸೆಗೆ ಅಣಿಯಾಗಿದ್ದು ಹಲವರ ಕಣ್ಣಂಚಲಿ ನೀರು ತರಿಸಿತು. ಅಸಲಿಗೆ ಭಾರತ ಬಿಟ್ಟು ಉಳಿದ ದೇಶಗಳಲ್ಲಿ ಈ ಬಿಸ್ಕತ್ನ ಬೆಲೆ ಎಷ್ಟಿದೆ ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.
80ರ ದಶಕದಿಂದ ಹೆಚ್ಚು ಚಾಲ್ತಿಯಲ್ಲಿರುವ ಬಿಸ್ಕತ್ ಸಂಸ್ಥೆ ಎಂದರೆ ಅದು ಪಾರ್ಲೆ-ಜಿ. 1980ಕ್ಕೂ ಹಿಂದೆ ಇದನ್ನು ‘ಪಾರ್ಲೆ-ಗ್ಲುಕೋ ಬಿಸ್ಕತ್’ ಎಂದು ಕರೆಯಲಾಗುತ್ತಿತ್ತು. ಅದಾದ ನಂತರ ಈಗ ‘ಪಾರ್ಲೆ-ಜಿ’ ಎಂದು ಹೆಸರಿಸಲಾಗಿದೆ. 90ರ ದಶಕದಲ್ಲಿ ಬಹುತೇಕರ ಮನೆಗಳಲ್ಲಿ ಇರುತ್ತಿದ್ದ ಪಾರ್ಲೆ-ಜಿ, ಅತೀ ಹೆಚ್ಚಾಗಿ ಮಾರಾಟವಾಗುತ್ತಿದ್ದ ಬಿಸ್ಕತ್ ಬ್ರಾಂಡ್. ಇದರ ಹೆಸರು ಕೇಳದವರೇ ಇಲ್ಲ ಎಂದರೆ ಖಂಡಿತ ತಪ್ಪಾಗಲಾರದು. ಇಂದಿಗೂ ಮಾರುಕಟ್ಟೆಯಲ್ಲಿ ತನ್ನದೇ ಹೆಸರು ಸ್ಥಾಪಿಸಿರುವ ಈ ಬಿಸ್ಕತ್, ಇಂದಿಗೂ ತನ್ನ ಗ್ರಾಹಕರಿಗೆ ಅದೇ ಗುಣಮಟ್ಟವನ್ನು ನೀಡುತ್ತ ಬಂದಿದೆ.
ಈ ಬಿಸ್ಕತ್ ಸವಿಯದವರೇ ಇಲ್ಲ ಬಿಡಿ. ಅಷ್ಟು ಫೇಮಸ್ ಈ ಪಾರ್ಲೆ-ಜಿ. ಇಂದಿಗೂ ಈ ಬಿಸ್ಕತ್ಗೆ ಎಲ್ಲಿಲ್ಲದ ಬೇಡಿಕೆ ಎಂದರೆ ನಂಬ್ತೀರಾ? ಖಂಡಿತ ನಂಬಲೇಬೇಕು. ಯಾಕಂದ್ರೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಇದರ ಮಾರುಕಟ್ಟೆ. ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಪಾರ್ಲೆ-ಜಿ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಹಳ್ಳಿಯಿಂದ ಹಿಡಿದು ನಗರದ ನಿವಾಸಿಗಳ ಮನೆಗಳಲ್ಲಿ ಈ ಪಾರ್ಲೆ-ಜಿ ಬಿಸ್ಕತ್ ಇರುವುದು ಕಂಡುಬಂದಿದೆ. ಕೆಲವರ ದಿನಚರಿಯಲ್ಲಿ ಟೀ ಎಷ್ಟು ಮುಖ್ಯವೋ, ಟೀ ಜತೆಗೆ ಈ ಬಿಸ್ಕತ್ ಇರುವುದು ಕೂಡ ಅಷ್ಟೇ ಮುಖ್ಯ.
ಭಾರತದಲ್ಲಿ 2ರೂ.ನಿಂದ 5, 10, 50ರೂ. ಪ್ಯಾಕೆಟ್ನಲ್ಲಿ ಲಭಿಸುವ ಪಾರ್ಲೆ-ಜಿ ಬಿಸ್ಕತ್, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತದೆ. ಆದರೆ, ಇದೇ ಬಿಸ್ಕತ್ ಹೊರದೇಶಗಳಾದ ಅಮೆರಿಕಾ, ಪಾಕಿಸ್ತಾನಗಳಲ್ಲಿ ಎಷ್ಟರ ರೂ.ಗೆ ಸಿಗುತ್ತದೆ? ಭಾರತಕ್ಕಿಂತ ದುಬಾರಿ ಹಣಕ್ಕೆ ಮಾರಾಟವಾಗುತ್ತಿದೆಯೋ ಅಥವಾ ಇನ್ನೂ ಕಡಿಮೆ ದರದಲ್ಲಿ ಲಭಿಸುತ್ತಿದೆಯೋ ಎಂಬ ಪ್ರಶ್ನೆ ಬಹುತೇಕರಲ್ಲಿ ಕಾಡುತ್ತಿರುತ್ತದೆ. ಅದಕ್ಕೆ ಉತ್ತರ ಈ ಕೆಳಕಂಡಂತಿದೆ ಗಮನಿಸಿ.
ಭಾರತದಲ್ಲಿ 65 ಗ್ರಾಂ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ಗೆ ಐದು ರೂ. ನಿಗದಿಪಡಿಸಲಾಗಿದೆ. ಆದರೆ, ಇದೇ ಬಿಸ್ಕತ್ ಅಮೆರಿಕಾ ದೇಶದಲ್ಲಿ 1 ಡಾಲರ್ಗೆ 56.5 ಗ್ರಾಂ. ಇರುವ 8 ಪ್ಯಾಕೆಟ್ ಬಿಸ್ಕತ್ ಲಭಿಸುತ್ತದೆ ಎಂದು ವರದಿ ತಿಳಿಸುತ್ತದೆ. ಅಂದರೆ, ಒಂದು ಪ್ಯಾಕೆಟ್ಗೆ 10 ರೂ. ಎಂದು ಹೇಳಲಾಗಿದೆ. ಇದೇ ಪಾಕಿಸ್ತಾನದಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಒಂದು ಪ್ಯಾಕೆಟ್ಗೆ 50 ರೂ. ಇದೆ. ಇದನ್ನೆಲ್ಲಾ ಗಮನಿಸಿ ಹೇಳುವುದಾದರೆ, ನಮ್ಮ ದೇಶಕ್ಕಿಂತ ಹೊರರಾಷ್ಟ್ರಗಳಲ್ಲಿಯೇ ಈ ಬಿಸ್ಕತ್ ಬೆಲೆ ದುಬಾರಿ ಇದೆ ಎಂಬುದು ವರದಿಯಿಂದ ಸ್ಪಷ್ಟ,(ಏಜೆನ್ಸೀಸ್).