

Unidentified Bodies:ಪ್ರಪಂಚದ ವಿವಿಧ ಭಾಗದಲ್ಲಿ ಕೊಲೆ, ಆ್ಯಕ್ಸಿಡೆಂಟ್ ಸೇರಿದತೆ ಇನ್ನಿತರ ಕಾರಣಗಳಿಂದ ಗುರುತು ಸಿಗದ ಮೃತ ದೇಹಗಳು ಪೊಲೀಸರು ದಿನನಿತ್ಯ ಪತ್ತೆ ಮಾಡುತ್ತಾರೆ. ಆದರೆ, ಈ ದೇಹಗಳು ಯಾರದು? ಅಥವಾ ದೇಹವನ್ನು ಗುರುತು ಸಿಗದೇ ಇದ್ದರೆ, ಕುಟುಂಬಸ್ಥರು ಬಾರದೆ ಇದ್ದರೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ತಿಳಿಯೋಣ ಬನ್ನಿ..
ಮೃತದೆಹಗಳ ಪತ್ತೆ ಬಳಿಕ ಅದನ್ನು ಮೊದಲು ಏನು ಮಾಡಬೇಕು ಎಂಬುವುದು ಅಧಿಕಾರಿಗಳಿಗೆ ಕೆಲವಷ್ಟು ಮಾರ್ಗಸೂಚಿಗಳಿರುತ್ತವೆ. ಅದರ ಪ್ರಕಾರವೇ ಮೃತದೇಹ ಪತ್ತೆಯಿಂದ ಕೊನೆಗೆ ದೇಹವನ್ನು ಏನು ಮಾಡಬೇಕು ಎನ್ನುವ ಪ್ರೋಟೊಕಾಲ್ ಇರುತ್ತದೆ. ಹೌದು, ಪೊಲೀಸರಿಗೆ ಮೃತ ದೇಹ ಪತ್ತೆಯಾದ ಕೂಡಲೇ ಮೊದಲು ಜಿಲ್ಲಾ ವರಿಷ್ಠಾಧಿಕಾರಿಗೆ ಮಾಹಿತಿ ರವಾನೆಯಾಗುತ್ತದೆ. ಬಳಿಕ ಮೃತದೇಹದ ವರದಿ ಸಿದ್ಧಪಡಿಸಲಾಗುತ್ತದೆ. ಮೃತದೇಹದ ಪೋಟೋವನ್ನು ಮೊದಲು ಹತ್ತಿರದ ಪೊಲೀಸ್ ಠಾಣೆ ಮತ್ತು ಕಂಟ್ರೋಲ್ ರೂಮ್ಗೆ ಕಳುಹಿಸಲಾಗುತ್ತದೆ. ಮೃತದೇಹ ಪೂರ್ತಿ ಹದಗೆಟ್ಟಿದ್ದರೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಸಾವು ಸಹಜವೋ ಅಥವಾ ಅಸಹಜವೋ ತಿಳಿದುಕೊಳ್ಳುತ್ತಾರೆ.
ಸಾಮಾನ್ಯವಾಗಿ ಮೃತದೇಹ ಗುರುತಿಸಲು ಶವದ ಪೋಟೋಗಳನ್ನು ದಿನಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುಲಾಗುತ್ತದೆ. ಇತ್ತೀಚಿನದ ದಿನಗಳಲ್ಲಿ ವಾಟ್ಸಪ್ ಗ್ರೂಪ್ಗಳಲ್ಲಿ ಶೇರ್ ಮಾಡುವ ಮೂಲಕ ಪತ್ತೆಗೆ ಸಹಾಯವಾಗುತ್ತದೆ. ಅಲ್ಲದೆ. ಮೃತದೇಹದ ಡಿಎನ್ಎದಿಂದ ಪತ್ತೆ ಅಧಿಕಾರಿಗಳು ಪತ್ತೆ ಮಾಡುತ್ತಾರೆ.
ಗುರುತೆ ಸಿಗದೇ ಇರುವ ಶವಗಳನ್ನು ತನಿಖೆ ಮುಗಿಯುವವರೆಗೂ ವಾಸನೆ ಬಾರದಂತೆ ಸ್ಟೋರ್ ರೂಮ್ನಲ್ಲಿ ಶೇಖರಣೆ ಮಾಡುತ್ತಾರೆ. ತನಿಖೆ ಬಳಿಕ ಮೃತ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಇಲ್ಲವಾದರೆ ಪೊಲೀಸೆರೇ ಸುಡುತ್ತಾರೆ. ಸಾಮಾನ್ಯ ಸಂದರ್ಭಗಳಲ್ಲಿ ಮೃತದೇಹ ಪತ್ತೆಯಾದ ನಾಲ್ಕು ಅಥವಾ ಐದು ದಿನಗಳಲ್ಲಿ ಗುರುತು ಸಿಗದೆ ಇದ್ದರೆ ಮತ್ತು ಕುಟುಂಬಸ್ಥರು ಬಾರದೆಹೋದರೆ ಆರನೇ ದಿನದಲ್ಲಿ ಪೊಲೀಸರೇ ದಹನ ಮಾಡುತ್ತಾರೆ.(ಏಜೆನ್ಸೀಸ್)