“ಹಿಂದು ದೇವರನ್ನು ಗೇಲಿ ಮಾಡುವವ, ಹುಡುಗಿಯರ ಜೀವನದ ಜೊತೆ ಆಟವಾಡುವವ ಹೇಗೆ ಬಿಗ್ ಬಾಸ್ ವಿಜೇತನಾದನು''?

bigboss
Published on

ಮುಂಬೈ: ಹಿಂದಿ ಬಿಗ್ ಬಾಸ್ 17 ಶೋ ಮುಗಿದಿದೆ. ಮುನಾವರ್ ಫಾರುಕಿ ಶೋ ಟ್ರೋಫಿಯನ್ನು ಗೆದ್ದಿದ್ದಾರೆ. ಈ ಹಾಸ್ಯನಟ ಕಾರ್ಯಕ್ರಮವನ್ನು ಗೆದ್ದ ತಕ್ಷಣ, ಭವ್ಯವಾದ ಸ್ವಾಗತ ಸಿಕ್ಕಿತು. ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮುನಾವರ್ ಫಾರುಕಿ ಅವರನ್ನು ಹೀರೋ ಎಂದು ಬಣ್ಣಿಸಿದರೆ, ಕ್ರಮೇಣ ಅವರ ಬಗ್ಗೆ ಒಂದೊಂದೇ ಸತ್ಯ ಈಗ ಬಯಲಿಗೆ ಬರುತ್ತಿದೆ. ಹೌದು, ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಹಾಸ್ಯನಟನನ್ನು ಇದೀಗ ಟೀಕಿಸಲಾಗುತ್ತಿದೆ.

ಮುನಾವರ್ ಡೋಂಗ್ರಿ ರಾಜ
ಮುನಾವರ್ ಫಾರುಕಿ ಮುಂಬೈನ ಡೋಂಗ್ರಿ ಪ್ರದೇಶದಿಂದ ಬಂದವರು ಎಂದು ಎಲ್ಲರಿಗೂ ತಿಳಿದಿದೆ. ಇದು ಒಂದು ಕಾಲದಲ್ಲಿ ಮುಂಬೈನ ಅತ್ಯಂತ ಭಯಭೀತ ಪ್ರದೇಶಗಳಲ್ಲಿ ಒಂದಾಗಿತ್ತು. ಹಿಂದೆ ಭೂಗತ ಜಗತ್ತಿನ ಕಂಟ್ರೋಲ್ ರೂಂ ಆಗಿತ್ತು. ಇದರ ರಿಮೋಟ್ ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಅಬು ಸಲೇಂ ಮುಂತಾದ ಡಾನ್‌ಗಳ ಕೈಯ್ಯಲ್ಲಿತ್ತು. ಇಂದಿಗೂ ಆ ಪ್ರದೇಶವು ಕೊಳಚೆ ಪ್ರದೇಶವಾಗಿದ್ದು, ಮುಸ್ಲಿಮರು ಬಹುಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಮುನಾವರ್ ಗೆಲುವಿಗೆ ಅತ್ಯಂತ ವ್ಯವಸ್ಥಿತವಾಗಿ ಮತದಾನ ನಡೆದಿದೆ, ಹೀಗಾಗಿ ಮುನಾವರ್​​​ಗೆ ಇಡೀ ದೇಶವೇ ಮತ ಹಾಕಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಗದ್ದಲ ಎದ್ದಿದೆ. ಇದಲ್ಲದೇ ಧಾರಾವಿ ಸ್ಲಂ ಕೂಡ ಮುನಾವರ್ ಪರವಾಗಿ ಮತ ಚಲಾಯಿಸಿದೆಯಂತೆ.

ಸಾಮಾಜಿಕ ಜಾಲತಾಣಗಳ ಪ್ರತಿಭಟನೆ
ಹಿರಿಯ ಪತ್ರಕರ್ತ ಸುಧೀರ್ ಚೌಧರಿ ಕೂಡ ಡೋಂಗ್ರಿ ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವ ಮುನಾವರ್ ಅವರ ಕರಾಳ ಸತ್ಯವನ್ನು ತೋರಿಸಿದ್ದಾರೆ.

ದೇವತೆಗಳನ್ನು ಗೇಲಿ ಮಾಡುವವ
ಕೆಲವು ಬಳಕೆದಾರರು "ಹಿಂದು ದೇವರು ಮತ್ತು ದೇವತೆಗಳನ್ನು ಗೇಲಿ ಮಾಡುವ ಮತ್ತು ಹುಡುಗಿಯರ ಜೀವನದ ಜೊತೆ ಆಟವಾಡುವವನು ಇಂದು ಬಿಗ್ ಬಾಸ್ ವಿಜೇತ'' ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net