ವಸತಿ ಸಹಾಯಧನ ನೀಡಲು ಸಚಿವ ಜಮೀರ್​ಗೆ ಮನವಿ ಸಲ್ಲಿಕೆ

3-RNR-07
Published on

ರಾಣೆಬೆನ್ನೂರ: ವಸತಿ ಯೋಜನೆಯಡಿ ಬಡವರು ಕೊಟ್ಟಿಕೊಂಡಿರುವ ಆಶ್ರಯ ಯೋಜನೆ ಮನೆಗಳಿಗೆ ಕೂಡಲೇ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂದ ಕಾರ್ಯಕರ್ತರು ಮಂಗಳವಾರ ತಾಲೂಕಿನ ಮಾಕನೂರ ಕ್ರಾಸ್​ ಬಳಿ ವಸತಿ ಸಚಿವ ಜಮೀರ್​ ಅಹ್ಮದ್​ ಅವರಿಗೆ ಮನವಿ ಸಲ್ಲಿಸಿದರು.
ಹಾವೇರಿಯಲ್ಲಿ ಸಭೆ ಮುಗಿಸಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದ ಸಚಿವ ಜಮೀರ್​ ಅಹ್ಮದ್​ ಅವರ ಕಾರನ್ನು ತಡೆದ ರೈತರು, ತಾಲೂಕಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಆಶ್ರಯ ಯೋಜನೆ ಮನೆ ನಿಮಿರ್ಸಿಕೊಂಡವರಿಗೆ ಈವರೆಗೂ ಸಹಾಯಧನ ಬಂದಿಲ್ಲ. ಹೀಗಾಗಿ ಲಾನುಭವಿಗಳು ಬೇರೆಡೆ ಸಾಲ ಮಾಡಿಕೊಂಡು ಪರದಾಡುವಂತಾಗಿದೆ. ಆದ್ದರಿಂದ ಕೂಡಲೇ ಸಹಾಯಧನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಜಮೀರ್​ ಅಹ್ಮದ್​, ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಸಹಾಯಧನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಕೊಟ್ರಪ್ಪ ಐರಣಿ, ಮೇರಾಜ ದುರ್ಗಾಕಾಲನಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net