ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ನಿ ಆತ್ಮಹತ್ಯೆ

Crime Logo
Published on

ಬ್ಯಾಡಗಿ: ಗೆಳತಿಯರೊಡನೆ ಬೆಳಗ್ಗೆ ತಿಂಡಿ ತಿಂದು ಬಂದ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಹಾವೇರಿ ತಾಲೂಕಿನ ಬರಡಿ ಗ್ರಾಮದ ರೇಖಾ ಫಕ್ಕೀರಪ್ಪ ಗೌಡ್ರ (15) ನೇಣು ಬಿಗಿದುಕೊಂಡ ವಿದ್ಯಾಥಿರ್ನಿ.
ಈಕೆ ವಸತಿ ನಿಲಯದಲ್ಲಿ ಬೆಳಗ್ಗೆ ಗೆಳತಿಯರೊಡನೆ ತೆರಳಿ ತಿಂಡಿ ತಿಂದು ವಾಪಸ್​ ವಸತಿ ಕೊಠಡಿಗೆ ಬಂದಿದ್ದಾಳೆ. ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹೊಟ್ಟೆನೋವಿನಿಂದ ಆತ್ಮಹತ್ಯೆ…
ವಿದ್ಯಾಥಿರ್ನಿ ರೇಖಾ 2 ವರ್ಷದ ಹಿಂದೆ ಋತುಮತಿಯಾಗಿದ್ದಳು. ಆವಾಗಿನಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಆಸ್ಪತ್ರೆಗೆ ತೋರಿಸಿದರೂ ಗುಣವಾಗಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net