ಪತಿ ಬಿಟ್ಟು ಪ್ರಿಯತಮನೊಂದಿಗೆ ಬಂದಿದ್ದ ಗೃಹಿಣಿ ಆತ್ಮಹತ್ಯೆ: ಸಾವಿನ ತನಿಖೆಗೆ ಪತಿ ಒತ್ತಾಯ | Lover

dk (49) (1)
Published on

ಹಾವೇರಿ: ಪತಿಯನ್ನು ಬಿಟ್ಟು ಪ್ರಿಯತಮನೊಂದಿಗೆ(Lover) ಬಂದಿದ್ದ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರ ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಬೆಂಗಳೂರಿನ ಉಳ್ಳಾಲ ಅಂಬೇಡ್ಕರ್ ನಗರದ ನಿವಾಸಿ ಶ್ವೇತಾ (ರೋಜಾ) ಹನುಮಂತರಾಜು ಕಂಬಾಳು (31) ಮೃತ ಮಹಿಳೆ. ತನ್ನ ಪತ್ನಿಯ ಸಾವಿನ ಕುರಿತು ತನಿಖೆ ನಡೆಸುವಂತೆ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.

ಮೃತೆ ಶ್ವೇತಾ ಬೆಂಗಳೂರಿನಲ್ಲಿ ಹೋಮ್ ನರ್ಸಿಂಗ್ ಉದ್ಯೋಗ ಮಾಡುತ್ತಿದ್ದಳು. 10 ವರ್ಷದ ಹಿಂದೆ ನೆಲಮಂಗಲದ ಹನುಮಂತರಾಜು ಜತೆ ಮದುವೆಯಾಗಿ ಜೀವನ ಸಾಗಿಸುತ್ತಿದ್ದಳು.ಆದರೆ,ಕಳೆದ 2 ವರ್ಷದಿಂದ ಪತಿಯಿಂದ ದೂರವಾಗಿದ್ದಳು. ಅಲ್ಲದೆ ತಾನೂ ಪ್ರೀತಿಸುತ್ತಿದ್ದ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದ ನವೀನ ಎಂಬುವನ ಜತೆ ಸೇರಿ ಡಿ. 22ರಂದು ತಾಲೂಕಿನ ಹೆಡಿಯಾಲ ಗ್ರಾಮದ ನವೀನನ ಅಜ್ಜನ ಮನೆಗೆ ಬಂದು ಉಳಿದುಕೊಂಡಿದ್ದಾಳೆ.

ಶುಕ್ರವಾರ ಬೆಳಗ್ಗೆ ನಾನು ಊರಿಗೆ ಹೋಗುವೆ ಎಂದು ಹೇಳಿ ಸ್ನಾನ ಮಾಡಲು ಹೋದಾಗ ವಿಷ ಸೇವಿಸಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಅರ್ಧ ಗಂಟೆಯಾದರೂ ಆಕೆ ಹೊರಗೆ ಬಾರದ ಕಾರಣ ನವೀನ ಹಾಗೂ ಅಜ್ಜ, ಅಜ್ಜಿ ಹೋಗಿ ನೋಡಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ.

ಆದರೆ, ಶ್ವೇತಾಳ ಸಾವಿನ ಬಗ್ಗೆ ಸಂಶಯವಿದ್ದು ಈ ಕುರಿತು ತನಿಖೆ ನಡೆಸುವಂತೆ ಆಕೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net