ಮರಡೀಪುರದಲ್ಲಿ ಮನೆಗಳ್ಳತನ

01 mar tnp 01
ತಿ.ನರಸೀಪುರ ತಾಲೂಕಿನ ಮರಡೀಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ಚಿನ್ನ ನಗದು ದೋಚಿರುವುದು.
Published on

ತಿ.ನರಸೀಪುರ : ತಾಲೂಕಿನ ಮರಡಿಪುರ ಗ್ರಾಮದಲ್ಲಿ ಗುರುವಾರ ತಡರಾತ್ರಿ ರಾಚಯ್ಯ ಅವರ ಮನೆಗೆ ನುಗ್ಗಿದ ಖದೀಮರು ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಸಾವಿರಾರು ರೂ. ಹಣ ದೋಚಿ ಪರಾರಿಯಾಗಿದ್ದಾರೆ.

ಪಂಚಾಯಿತಿ ಶುದ್ದ ಕುಡಿಯುವ ನೀರಿನ ಘಟಕದ ಬಾಗಿಲು ಮೀಟಿ, ಕಾಯಿನ್ ಬಾಕ್ಸ್‌ನಲ್ಲಿ ಸಂಗ್ರಹವಾಗಿದ್ದ ನಾಣ್ಯ ದೋಚಿದ್ದಾರೆ.

ರಾಚಪ್ಪ ಪತ್ನಿ ತವರು ಮನೆ ಕುಪ್ಪೇಗಾಲಕ್ಕೆ ಕುಟುಂಬ ಸಮೇತ ಗುರುವಾರ ಸಂಜೆ ತೆರಳಿದ್ದರು. ಇದನ್ನೇ ಹೊಂಚು ಹಾಕಿದ್ದ ಕಳ್ಳರು ಮನೆಯ ಬಾಗಿಲು ಮೀಟಿ ಬೀರುವಿನಲ್ಲಿ ಇಟ್ಟಿದ್ದ 121 ಗ್ರಾಂ ಚಿನ್ನ 59 ಸಾವಿರ ರೂ ನಗದನ್ನು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ತಲಕಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಕಳ್ಳತನ: ಇದಲ್ಲದೆ ವಾರದ ಹಿಂದೆಯೆ ತಾಲೂಕಿನ ಅಕ್ಕೂರು ಗ್ರಾಮದ ರೈತರಿಬ್ಬರ ಪಂಪ್ ಸೆಟ್ ಮೋಟಾರ್ ಹಾಗೂ ಕನೆಕ್ಟಿಂಗ್ ವೈಯರ್ ಗಳನ್ನು ಕಳ್ಳರು ತುಂಡರಿಸಿ, ಕಳ್ಳತನ ಮಾಡಿಕೊಂಡು ಹೋಗಿರುವ ಪ್ರಕರಣಗಳು ಕೂಡ ನಡೆದಿದೆ. ಈ ಕುರಿತು ತಲಕಾಡು ಠಾಣೆಗೆ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net