ಮಳೆಗೆ ಕುಸಿದ ಮನೆ

ಮಳೆಗೆ ಕುಸಿದ ಮನೆ
Published on

ಸಾಲಿಗ್ರಾಮ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹೊಸಕೋಟೆ ಕೊಪ್ಪಲು ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದೆ.

ಮಂಜುಳಾ ಲೋಕೇಶ್ ಅವರ ಮನೆ ಕುಸಿದಿದ್ದು, ಮನೆಯಲ್ಲಿದ್ದ ವಸ್ತುಗಳು ಹಾನಿಗೊಳಗಾಗಿವೆ. ಘಟನೆ ಸಂಭವಿಸುವುದಕ್ಕೂ ಕೆಲ ನಿಮಿಷಗಳ ಮುಂಚೆಯಷ್ಟೇ ಮನೆಯಿಂದ ಹೊರಬಂದದ್ದರಿಂದ ಪ್ರಾಣಾಪಾಯ ತಪ್ಪಿದೆ.

ಹೊಸಕೋಟೆ ಗ್ರಾ.ಪಂ. ಪಿಡಿಒ ರಾಜೇಶ್, ಗ್ರಾ.ಪಂ. ಸದಸ್ಯೆ ಕಮಲಮ್ಮ ಶಿವಣ್ಣ, ವಸಂತ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net