ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಹೋದ ಮನೆ

IMG-20231015-WA0008
Published on

ರಾವಂದೂರು: ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ವಾಸದ ಮನೆ ಸುಟ್ಟುಹೋಗಿದೆ.

ಗ್ರಾಮದ ಸುಕನ್ಯಮ್ಮ (65) ಎಂಬುವವರ ಮನೆ ಸುಟ್ಟು ಹೋಗಿದ್ದು, ಕುಟುಂಬ ಬೀದಿಗೆ ಬಿದ್ದಿದೆ. ಶನಿವಾರ ರಾತ್ರಿ 9 ಗಂಟೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮೊದಲು ಟಿವಿಗೆ ಬೆಂಕಿ ಹೊತ್ತಿಕೊಂಡಿತು. ಬಳಿಕ ಮನೆಯ ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಸುಕನ್ಯಮ್ಮ ಅವರ ಮಗ ಗಣೇಶ್ (31)ಪಾರ್ಶ್ವವಾಯು ತಗುಲಿ ಮನೆಯಲ್ಲೇ ಇದ್ದು, ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಇದೀಗ ಇವರ ಬದುಕಿಗೆ ಆಸರೆಯಾಗಿದ್ದ ಮನೆ ಕೂಡ ಸುಟ್ಟು ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net