ಉತ್ತರಾಖಂಡ: ಹೋಟೆಲ್​ಗಳಲ್ಲಿ ಶೇ. 50 ರಷ್ಟು ಜನರಿಗೆ ಅವಕಾಶ

hotels
Published on

ಡೆಹ್ರಾಡೂನ್ : ಉತ್ತರಾಖಂಡದ ನೈನಿತಾಲ್​ ಮತ್ತು ಡೆಹ್ರಾಡೂನ್​ ನಗರಗಳಲ್ಲಿರುವ ಹೊಟೆಲ್​ಗಳಿಗೆ ತಮ್ಮ ಸಾಮರ್ಥ್ಯದಲ್ಲಿ ಅರ್ಧದಷ್ಟು ರೂಮುಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಆದೇಶ ಹೊರಡಿಸಿದ್ದಾರೆ. ಲಾಕ್ಡೌನ್​ ಸಡಿಲಿಕೆಯಿಂದಾಗಿ ಇಲ್ಲಿನ ಮಸ್ಸೂರಿಯಂತಹ ಜನಪ್ರಿಯ ಹಿಲ್​ ಸ್ಟೇಷನ್​ಗಳಲ್ಲಿ ಉಂಟಾಗುತ್ತಿರುವ ಜನಜಂಗುಳಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

"ನೈನಿತಾಲ್​ ಮತ್ತು ಡೆಹ್ರಾಡೂನ್​ನಲ್ಲಿನ ಹೊಟೆಲ್​ಗಳಿಗೆ ಶೇ.50 ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಿದ್ದೇವೆ. ಮಾಸ್ಕ್​ ಧರಿಸದವರಿಗೆ ಚಲನ್ ನೀಡಲಾಗುತ್ತಿದೆ. ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ" ಎಂದು ಧಾಮಿ ಹೇಳಿದ್ದಾರೆ.

ಪಕ್ಕದ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕುರ್​ ಕೋವಿಡ್​ ನಿಯಮಗಳನ್ನು ಪಾಲಿಸುವಂತೆ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. "ನಾವು ಪ್ರವಾಸೋದ್ಯಮವನ್ನು ಉಳಿಸಬೇಕಾಗಿದೆ. ನಾನು ಎಲ್ಲಾ ಜಿಲ್ಲಾ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಜನಜಂಗುಳಿಯನ್ನು ನಿಯಂತ್ರಿಸಲು ನಿರ್ದೇಶನ ನೀಡಿದ್ದೇನೆ. ಕೋವಿಡ್​-19 ಇನ್ನೂ ಮುಗಿದಿಲ್ಲ. ಹೋಟೆಲ್​ಗಳಿಗೆ ಎಸ್​ಒಪಿ ಪಾಲಿಸಲು ಹೇಳಲಾಗಿದೆ" ಎಂದು ಠಾಕುರ್​ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net