ಮಾಟ ಮಂತ್ರದಲ್ಲಿ ಭಾಗವಹಿಸಲು ನಿರಾಕರಣೆ: ಪತ್ನಿ ಮೇಲೆ ಬಿಸಿ ಮೀನಿನ ಕರ್ರಿ ಸುರಿದ ಗಂಡ! | Witchcraft

Bbau - 2025-10-31T184630.239
Published on

ಕೇರಳ: ಮಾಟಮಂತ್ರದಲ್ಲಿ(Witchcraft) ಭಾಗವಹಿಸಲು ನಿರಾಕರಿಸಿದ್ದಕ್ಕಾಗಿ ಪತಿಯೊಬ್ಬ ತನ್ನ ಪತ್ನಿ ಮೇಲೆ ಬಿಸಿ ಮೀನಿನ ಕರ್ರಿ ಸುರಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಗುರುವಾರ(ಅ.29) ನಡೆದಿದೆ.

ಕರ್ರಿ ಸುರಿದ ಪರಿಣಾಮ ಮಹಿಳೆಯ ಕೈಭಾಗ, ಮುಖ ಮತ್ತು ಕುತ್ತಿಗೆ ಸುಟ್ಟಿವೆ. ಆರೋಪಿಯನ್ನು ಚಡಯಮಂಗಲಂ ಬಳಿಯ ವೈಕ್ಕಲ್‌ನ ಸಜೀರ್ ಎಂದು ಗುರುತಿಸಲಾಗಿದ್ದು, ಆತ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳ್ಳಗ್ಗೆ ಮನೆಯಲ್ಲಿ ಮಾಟ ಮಂತ್ರದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಸಾಜೀರ್ ಆಂಚಲ್‌ನಲ್ಲಿರುವ ಮಾಟಮಂತ್ರ ತಜ್ಞರನ್ನು ಭೇಟಿ ಮಾಡಿ ಮನೆಗೆ ಬೂದಿ ಮತ್ತು ದಾರವನ್ನು ತಂದಿದ್ದ ಎಂದು ವರದಿಯಾಗಿದೆ. ನಂತರ ಅವನು ತನ್ನ ಹೆಂಡತಿಯ ಕೂದಲನ್ನು ಸಡಿಲಗೊಳಿಸಿ, ತನ್ನ ಮುಂದೆ ಕುಳಿತು, ಬೂದಿಯನ್ನು ಹಚ್ಚಲು ಮತ್ತು ಅವಳ ಕುತ್ತಿಗೆಗೆ ಲಾಕೆಟ್ ಕಟ್ಟಲು ಅವಕಾಶ ನೀಡುವಂತೆ ಕೇಳಿಕೊಂಡನು. ಮಹಿಳೆ ನಿರಾಕರಿಸಿದಾಗ, ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಅವನು ಅವಳ ಮುಖದ ಮೇಲೆ ಕುದಿಯುವ ಮೀನಿನ ಕರ್ರಿಯನ್ನು ಸುರಿದಿದ್ದಾನೆ ಎಂದು ಎಫ್​ಐಆರ್​ನಲ್ಲಿ ಆರೋಪಿಸಲಾಗಿದೆ.

ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net