26 ಕೋಟಿ ಪ್ರಯಾಣಿಕರಿಗೆ ಆತಿಥ್ಯ ಸಾಮರ್ಥ್ಯ: ದುಬೈನಲ್ಲಿ ತಲೆಎತ್ತಲಿರುವ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ ವೈಶಿಷ್ಟ್ಯಗಳೇನು?

airport-1
Published on

ನವದೆಹಲಿ: ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು "ವಿಶ್ವದ ವಿಮಾನ ನಿಲ್ದಾಣ, ಬಂದರು, ನಗರ ಕೇಂದ್ರ ಮತ್ತು ಹೊಸ ಜಾಗತಿಕ ಕೇಂದ್ರ" ಆಗಲಿದೆ ದುಬೈ ಎಂದು ಅವರು ಭಾನುವಾರ ಹೇಳಿದ್ದಾರೆ,

ಅಂದಾಜು 35 ಬಿಲಿಯನ್ ಅಮೆರಿಕ ಡಾಲರ್ (ರೂ 2.9 ಲಕ್ಷ ಕೋಟಿ) ಮೌಲ್ಯದ ಹೊಸ ವಿಮಾನ ನಿಲ್ದಾಣ ಯೋಜನೆಯನ್ನು ಘೋಷಿಸಿ ಅವರು ಮಾತನಾಡಿದರು.

ಹೊಸ ವಿಮಾನ ನಿಲ್ದಾಣವನ್ನು ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು. ಐದು ಸಮಾನಾಂತರ ರನ್‌ವೇಗಳು, 26 ಕೋಟಿ ಪ್ರಯಾಣಿಕರು ಮತ್ತು 400 ಏರ್‌ಕ್ರಾಫ್ಟ್ ಗೇಟ್‌ಗಳಿಗೆ ಆತಿಥ್ಯ ಕಲ್ಪಿಸುವ ಸಾಮರ್ಥ್ಯವನ್ನು ಇದು ಹೊಂದಲಿದೆ ಎಂದರು.

ಎಕ್ಸ್‌ ಪೋಸ್ಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿದ ಅವರು, ಹೊಸ ಯೋಜನೆಯು ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರವಾದ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವರ್ಷಕ್ಕೆ 26 ಕೋಟಿ ಪ್ರಯಾಣಿಕರಿಗೆ ಆತಿಥ್ಯ ಕಲ್ಪಿಸಬಹುದಾದ ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿದೆ.

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಸ್ತುತ ಎಲ್ಲಾ ಕಾರ್ಯಾಚರಣೆಗಳನ್ನು ಮುಂಬರುವ ವರ್ಷಗಳಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ವರ್ಗಾಯಿಸಲಾಗುವುದು. ಹೊಸ ನಿಲ್ದಾಣವು ಪ್ರಸ್ತುತ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ಹೆಚ್ಚು ಇರಲಿದೆ.

ವಿಮಾನ ನಿಲ್ದಾಣವು 400 ವಿಮಾನ ಗೇಟ್‌ಗಳು ಮತ್ತು ಐದು ಸಮಾನಾಂತರ ರನ್‌ವೇಗಳನ್ನು ಹೊಂದಿರುತ್ತದೆ. ದುಬೈನ ವಾಯುಯಾನ ಕ್ಷೇತ್ರವು ಮೊದಲ ಬಾರಿಗೆ ಹೊಸ ವಾಯುಯಾನ ತಂತ್ರಜ್ಞಾನಗಳನ್ನು ನೋಡಲಿದೆ.

ದುಬೈ ಸೌತ್‌ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಸುತ್ತಲೂ ಇಡೀ ನಗರವನ್ನು ನಿರ್ಮಿಸಲಾಗುವುದು. ಏಕೆಂದರೆ ಮಹತ್ವಾಕಾಂಕ್ಷೆಯ ಯೋಜನೆಯು 10 ಲಕ್ಷ ಜನರಿಗೆ ವಸತಿ ಬೇಡಿಕೆಗೆ ಕಾರಣವಾಗಬಹುದು.

ಈ ವಿಮಾನ ನಿಲ್ದಾಣವು ಲಾಜಿಸ್ಟಿಕ್ಸ್ ಮತ್ತು ವಾಯು ಸಾರಿಗೆ ವಲಯದಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸಲಿದೆ. ಹೊಸ ಟರ್ಮಿನಲ್​ಗೆ 128 ಶತಕೋಟಿ AED (34.85 ಶತಕೋಟಿ ಅಮೆರಿಕ ಡಾಲರ್ ಅಥವಾ ರೂ. 2.9 ಲಕ್ಷ ಕೋಟಿ) ವ್ಯಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net