ನೀರೆಂದು ಭಾವಿಸಿ ಆ್ಯಸಿಡ್​​ ಕುಡಿದ ಹಾಸ್ಟೆಲ್​​ ವಿದ್ಯಾರ್ಥಿ! ಮುಂದಾಗಿದ್ದೇನು? |Acid

dk - 2025-07-07T191523.721
Published on

Acid: ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಯೊಬ್ಬ ನೀರು ಎಂದುಕೊಂಡು ಬಾತ್​​ರೂಮ್​ ತೊಳೆಯುವ ಆ್ಯಸಿಡ್ ಕುಡಿದ ಘಟನೆ ಧಾರವಾಡದ ಸರ್ಕಾರಿ ಹಾಸ್ಟೆಲ್​​ವೊಂದರಲ್ಲಿ ನಡೆದಿದೆ. ಈ ಘಟನೆ ಜೂ.30ರಂದು ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ​

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮಕ್ಕೆ ಸೇರಿದ ವಿದ್ಯಾರ್ಥಿ ಕುಬೇರ್​ ಲಮಾಣಿ ಸಂತ್ರಸ್ತ. ಧಾರವಾಡದ ಅಂಜುಮಾನ್​​ ಕಾಲೇಜಿನಲ್ಲಿ BA ಕೋರ್ಸ್​​ ಮಾಡುತ್ತಿದ್ದಾರೆ. ಇಲ್ಲಿನ ಗಾಂಧಿನಗರದಲ್ಲಿರುವ ಸರ್ಕಾರಿ ಮೆಟ್ರಿಕ್​ ನಂತರದ ಹಾಸ್ಟೆಲ್​​ ವಿದ್ಯಾರ್ಥಿಯಾಗಿದ್ದಾನೆ.

ಇನ್ನು ಈ ಘಟನೆ ನಡೆದ ಬಳಿಕ ವಿದ್ಯಾರ್ಥಿ ಕುಬೇರ್​ ಲಮಾಣಿಗೆ ಗಂಟಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾನೆ. ವಿದ್ಯಾಗಿರಿ ಪೊಲೀಸ್​ ಠಾಣೆಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net