

ಬೆಂಗಳೂರು: ಆಸ್ಪತ್ರೆಗಳ ಜೈವಿಕ ತ್ಯಾಜ್ಯಗಳ ಮೇಲೆ ಶೇ.18 ಜಿಎಸ್ಟಿ ಆಸ್ಪತ್ರೆಗಳಿಗೆ ಹೊರೆ ಆಗಲಿದ್ದು, ಇದರಿಂದ ಚಿಕಿತ್ಸೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಆಸ್ಪತ್ರೆಗಳಲ್ಲಿ ಐದು ಸಾವಿರ ರೂಪಾಯಿಗೂ ಹೆಚ್ಚು ಶುಲ್ಕ ಹೊಂದಿರುವ ವಾರ್ಡ್ಗಳಿಗೆ ಶೇ.5 ಜಿಎಸ್ಟಿ ವಿಧಿಸಲಾಗಿದೆ. ಇದರಿಂದ ಆಸ್ಪತ್ರೆಯವರಿಗೇನೂ ತೊಂದರೆ ಇಲ್ಲ. ಬದಲಿಗೆ ರೋಗಿಗಳಿಗೆ ಹೆಚ್ಚು ಹೊರೆ ಬೀಳಲಿದೆ.
ಕಿಡ್ನಿ ಕಸಿ, ಲಿವರ್ ಕಸಿ, ಸೇರಿ ಅಂಗಾಂಗ ಕಸಿಗೆ ಒಳಗಾದವರು ಸೋಂಕು ಹರಡದಿರಲು, ಗಂಭೀರವಾದ ಅಲರ್ಜಿ ಸಮಸ್ಯೆ ಹೊಂದಿರುವವರು ಸೇರಿ ಕೆಲ ಸಂದರ್ಭದಲ್ಲಿ ಬಡ ರೋಗಿಗಳು ಅನಿವಾರ್ಯವಾಗಿ ವಿಶೇಷ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹಾಗೆಂದು ಆಸ್ಪತ್ರೆಗಳಲ್ಲಿ ಬಡ ರೋಗಿಗಳು, ಶ್ರೀಮಂತರ ರೋಗಿಗಳು ಎಂದು ಪ್ರತ್ಯೇಕವಾಗಿ ವಿಶೇಷ ವಾರ್ಡ್ ಇರುವುದಿಲ್ಲ. ಪರಿಣಾಮ ಇದು ರೋಗಿಗಳಿಗೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು. ಸರ್ಕಾರಕ್ಕೆ ಈಗಾಗಲೆ (ಆಸ್ಪತ್ರೆಗಳ ಒಟ್ಟು ಆದಾಯದ ಮೇಲಿನ ಎಂಬೆಡೆಡ್ ತೆರಿಗೆಯನ್ನು) ರೋಗಿಗಳು ಪರೋಕ್ಷವಾಗಿ ಶೇ.4.67 ತೆರಿಗೆ ಪಾವತಿಸುತ್ತಿದ್ದಾರೆ ಎಂದು ನ್ಯಾಟ್ ಹೆಲ್ತ್ ಹಾಗೂ ಇವೈ ವರದಿಯಲ್ಲಿ ತಿಳಿಸಿದೆ.
ಸರ್ಕಾರದ ನೀತಿಗೆ ವಿರುದ್ಧ: ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ 5 ಸಾವಿರ ರೂ.ಗಿಂತ ಹೆಚ್ಚು ದರ ಇರುವ ವಿಶೇಷ ವಾರ್ಡ್ಗೆ ಶೇ.5 ಜಿಎಸ್ಟಿ ವಿಧಿಸಲಾಗಿದೆ. ಇದು ಜನರಿಗೆ ಗುಣಮಟ್ಟದ ಹಾಗೂ ಕೈಗೆಟುವ ದರದಲ್ಲಿ ಆರೋಗ್ಯ ಸೇವೆ ನೀಡಬೇಕೆಂಬ ಸರ್ಕಾರದ ನೀತಿಗೆ ವಿರುದ್ಧವಾಗಿದೆ. ಇದರಿಂದ ರೋಗಿಗಳಿಗೆ ಆರ್ಥಿಕ ಹೊರೆ ಆಗುವುದರ ಜತೆಗೆ ಆಸ್ಪತ್ರೆಗಳ ಮೇಲೂ ಪರಿಣಾಮ ಬೀರಲಿದೆ. ಹಾಗಾಗಿ ಆಸ್ಪತ್ರೆಗಳಲ್ಲಿ ವಾರ್ಡ್ಗಳಿಗೆ ವಿಧಿಸಿರುವ ಜಿಎಸ್ಟಿ ಕೈಬಿಡುವಂತೆ ಹಾಸ್ಪೆಟಲ್ ಅಸೋಸಿಯೇಷನ್ಸ್ ರ್ವಂಗ್ ಗ್ರೂಪ್ (ಅಸೋಚಮ್ ಎಫ್ಐಸಿಸಿಐ, ನ್ಯಾಟ್ ಹೆಲ್ತ್) ಕೇಂದ್ರ ಆರ್ಥಿಕ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದೆ.
ಆಸ್ಪತ್ರೆಗಳ ವಿಶೇಷ ವಾರ್ಡ್ (ಶೇ. 5)ಗಳಿಗೆ ಮಾತ್ರವಲ್ಲದೆ ಜೈವಿಕ ತ್ಯಾಜ್ಯಗಳ ಮೇಲೂ ಶೇ.18 ಜಿಎಸ್ಟಿ ವಿಧಿಸಲಾಗಿದೆ. ಇದರಿಂದ ಸೇವಾ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ. ಸರ್ಕಾರದ ಈ ನಡೆಯಿಂದ ಆರೋಗ್ಯ ವಲಯದ ಅಭಿವೃದ್ಧಿಗೆ ಮಾರಕವಾಗಲಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು. | ಡಾ. ಪ್ರಸನ್ನ ಅಧ್ಯಕ್ಷ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಳ ಒಕ್ಕೂಟ (ಫನಾ) ಜಿಎಸ್ಟಿ ಹೆಚ್ಚಳದಿಂದ ಜನರಿಗೆ ಹೊರೆ ಆಗುತ್ತದೆ ಎನ್ನಿಸಿದರೆ ಕಡಿಮೆ ಮಾಡಲು ಅವಕಾಶವಿದ್ದು, ಜಿಎಸ್ಟಿ ಕೌನ್ಸಿಲ್ನಲ್ಲಿ ಚರ್ಚೆ ಮಾಡಿ ಹಿಂಪಡೆಯಬಹುದಾಗಿದೆ. ಸಮಾಲೋಚನೆ ಮಾಡಿ ತಿದ್ದುಪಡಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಕೌನ್ಸಿಲ್ನಲ್ಲಿ ಎಲ್ಲ ರಾಜ್ಯದ ಪ್ರತಿನಿಧಿಗಳೂ ಇರುತ್ತಾರೆ. ನಿತ್ಯಬಳಕೆ ವಸ್ತುಗಳ ಮೇಲೆ ಜಿಎಸ್ಟಿ ಹೆಚ್ಚಿಸಿರುವ ವಿಚಾರವನ್ನು ನಾನು ಕೌನ್ಸಿಲ್ ನಿರ್ಣಯಕ್ಕೆ ಬಿಡುತ್ತೇನೆ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬೆಂಗಳೂರು: ಮೊಸರು, ಮಜ್ಜಿಗೆ, ಲಸ್ಸಿ ಮತ್ತು ಪನ್ನೀರ್ ದರ ಇಳಿಸಲು ಕರ್ನಾಟಕ ಹಾಲು ಮಹಾಮಂಡಳಿಗೆ ಸೂಚಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ ಬಳಿಕ ಕೆಎಂಎಫ್ ಏರಿಕೆ ಮಾಡಿದ್ದ ದರ ಪರಿಷ್ಕರಣೆ ಮಾಡಿದೆ.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಸಿಎಂ, ಬ್ರಾ್ಯಂಡೆಡ್ ಹಾಗೂ ಪ್ಯಾಕೇಜ್ಡ್ ಮೊಸರು, ಮಜ್ಜಿಗೆ ಮಾರುವವರಿಗೆ ಶೇ.5 ಸರಕು ಸೇವಾ ತೆರಿಗೆ ವಿಧಿಸಿದ್ದರೂ ಮರು ಪಾವತಿಸಿಕೊಳ್ಳಲು ಅವಕಾಶವಿದೆ. ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ಗೆ ಈಗಿನ ದರ ಹೆಚ್ಚಿಸುವ ಅಗತ್ಯವಿಲ್ಲ. ಜಿಎಸ್ಟಿ ಹೆಚ್ಚಳವನ್ನು ಗ್ರಾಹಕರಿಗೆ ದಾಟಿಸುವಂತೆಯೂ ಇಲ್ಲ. ವಿಧಿಸಿದ ಜಿಎಸ್ಟಿ ವಾಪಸ್ ಪಡೆಯಲು ಅವಕಾಶವಿರುವ ಕಾರಣ ಹೊರೆಯಾಗದು ಎಂಬ ಸಮಜಾಯಿಷಿ ನೀಡಿದರು. ಈ ವಿಷಯದ ಬಗ್ಗೆ ಜಿಎಸ್ಟಿ ಮಂಡಳಿಯಲ್ಲಿ ರ್ಚಚಿಸಿದ ನಂತರ ಕೆಎಂಎಫ್ಗೆ ಸೂಚನೆ ನೀಡಲಾಗುವುದು. ಶೇ.5 ಜಿಎಸ್ಟಿಯಿಂದ ಹಾಲು ಮಹಾಮಂಡಳಿ ಹಾಗೂ ಗ್ರಾಹಕರಿಗೆ ಹೊರೆ ಬೀಳದು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಅದರ ಬೆನ್ನಲ್ಲೇ ಕೆಎಂಎಫ್ ಮತ್ತೊಂದು ಬಾರಿ ದರ ಪರಿಷ್ಕರಣೆ ಮಾಡಿ ಹೊಸ ದರ ನಿಗದಿ ಮಾಡಿದೆ. ಉಪ ಉತ್ಪನ್ನಗಳ ಮೇಲೆ ಸರಾಸರಿ ಶೇ.5 ಬೆಲೆ ಹೆಚ್ಚಳವಾದಂತಾಗಿದೆ. ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕ್ ಮೇಲೆ ಈಗಾಗಲೆ ಹಳೆ ದರಗಳೇ ಮುದ್ರಿತವಾಗಿರುವ ಕಾರಣ, ಪ್ಯಾಕಿಂಗ್ ದಾಸ್ತಾನು ಮುಗಿಯುವ ತನಕ ಇಂಕ್ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪ್ಯಾಕ್ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲು ಸೂಚಿಸಲಾಗಿದ್ದು, ಗ್ರಾಹಕರು ಸಹಕರಿಸುವಂತೆ ಕೆಎಂಎಫ್ ಕೋರಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈ ಬಗ್ಗೆ ಸೂಚನೆ ನೀಡಿದ್ದರು. ಆ ನಂತರ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅವರು ವಾಣಿಜ್ಯ ತೆರಿಗೆ ಆಯುಕ್ತರಾದ ಸಿ. ಶಿಖಾ ಅವರೊಂದಿಗೆ ಸಭೆ ನಡೆಸಿದ ನಂತರ ಹೊಸ ದರ ಪಟ್ಟಿ ಬಿಡುಗಡೆಯಾಗಿದೆ.
ಚರ್ಚೆ ಸಾಧ್ಯತೆ: ಕೆಎಂಎಫ್ ಅಧ್ಯಕ್ಷರೂ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಮಂಗಳವಾರ ಕೆಎಂಎಫ್ ಆಡಳಿತ ಮಂಡಳಿ ಸಭೆ ನಡೆಸಲಿದ್ದು, ನಂತರ ಮುಖ್ಯಮಂತ್ರಿಗೆ ಭೇಟಿಯಾಗಿ ರ್ಚಚಿಸುವ ಸಾಧ್ಯತೆಗಳಿವೆ. ಜಿಎಸ್ಟಿ ಶೇ.5 ಮರು ಪಾವತಿಸಿಕೊಳ್ಳಲು ಅವಕಾಶವಿದೆ. ಆದರೆ ಮಂಡಳಿ ಮೇಲೆ ತಾತ್ಕಾಲಿಕವಾಗಿ ಆರ್ಥಿಕ ಹೊರೆ ಬೀಳಲಿದ್ದು, ಈ ಮೊತ್ತವನ್ನು ಅನುದಾನ ರೂಪದಲ್ಲಿ ಭರಿಸಲು ಸರ್ಕಾರಕ್ಕೆ ಕೋರಲು ಮಂಡಳಿ ಚಿಂತನೆ ನಡೆಸಿದೆ. ಹಾಲು ಪ್ರತಿ ಲೀಟರ್ಗೆ ಮೂರು ರೂ. ಹೆಚ್ಚಿಸಿ, ಇದರಲ್ಲಿ ಎರಡು ರೂ. ಹಾಲು ಉತ್ಪಾದಕರಿಗೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಸರ್ಕಾರಕ್ಕೆ ಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಹೇಳಲಾಗಿದೆ. ಆದರೆ ಸಿಎಂ ಬೊಮ್ಮಾಯಿ ಆಸಕ್ತಿ ತೋರದ ಕಾರಣಕ್ಕೆ ದರ ಏರಿಕೆ ಪ್ರಸ್ತಾಪ ನನೆಗುದಿಗೆ ಬಿದ್ದಿದ್ದರೆ, ಜಿಎಸ್ಟಿ ಭಾರವನ್ನು ತಾತ್ಕಾಲಿಕವಾಗಿ ಹೊರಬೇಕಾದ ಇಕ್ಕಟ್ಟಿಗೆ ಕೆಎಂಎಫ್ ಸಿಲುಕಿದೆ.