

ಹೊಸಪೇಟೆ: ರಾಜ್ಯಾದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿಚಾರ ಇದೀಗ ವಿಜಯನಗರ ಜಿಲ್ಲೆಗೂ ಕಾಲಿಟ್ಟಿದ್ದು, ರೈತರು ಆತಂಕದಲ್ಲಿದ್ದಾರೆ.
ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ. ನಿಮ್ಮ ದಾಖಲಾತಿ ಇದ್ದರೆ ಕಚೇರಿಗೆ ಬಂದು ನೀಡಿ. ಇಲ್ಲವೆಂದರೆ ಕ್ರಮೈಗೊಳ್ಳಲಾಗುತ್ತದೆ ಎಂದು ಕೊಟ್ಟೂರು ತಾಲೂಕಿನ ಕೆ.ಕೋಟ್ರಗೌಡ ಹಾಗೂ ಕೆ.ರುದ್ರಗೌಡ ಎಂಬ ಸಹೋದರು ಸ.ನಂ. 131 ಮತ್ತು 131/1 ಜಮೀನು ಸೇರಿದಂತೆ 45ಕ್ಕೂ ಹೆಚ್ಚು ರೈತರಿಗೆ ತಹಸೀಲ್ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇನ್ನೂ ಹೊಸಪೇಟೆ ತಾಲೂಕಿನಲ್ಲಿ 5 ಜನರಿಗೆ ವಕ್ಫ್ ಮಂಡಳಿಯಿAದ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಜಮೀನು ನಮ್ಮದು ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ. ನಮ್ಮ ಹೆಸರಿನ ಮೇಲೆ ಪಹಣಿ ಇದೆ. ಆದರೆ ನೋಟಿಸ್ ಯಾಕೆ ಬಂದಿದೆ ಎಂದು ಗೊಂದಲವಾಗಿದೆ. ಇದ್ದ ದಾಖಲೆಗಳನ್ನು ಈಗಾಗಲೇ ತೋರಿಸಲಾಗಿದೆ. ನ.04ರಂದು ಮತ್ತೆ ಕರೆದಿದ್ದಾರೆ. ಸಮಸ್ಯೆ ಬಂದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ರೈತರ ಮಾತಾಗಿದೆ.