ವಾಲ್ಮೀಕಿ ಸಮುದಾಯದಿಂದ ಬಂದ್ ಎಚ್ಚರಿಕೆ

28 MANJU 1
Published on

ಹೊಸಪೇಟೆ: ಹಾದಿ ಬೀದಿಯಲ್ಲಿ ತಿರುಗಾಡುತ್ತಿದ್ದ ರಾಮುಲು ಅರವರನ್ನು ನಾನು ಬೆಳೆಸಿದ್ದೇನೆ ಎಂದು ಜನಾರ್ಧನ ರೆಡ್ಡಿ ಹೇಳಿಕೆ ನೀಡಿದ್ದಾರೆ. ಇದರ ವಿರುದ್ದ ಎಸ್ಪಿ ಗೆ ದೂರು ನೀಡಲಾಗಿದೆ. ರೆಡ್ಡಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ವಾಲ್ಮೀಕಿ ಸಮುದಾಯದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ದೇವರಮನೆ ಹೇಳಿದರು.

ನಗದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಮುಖಂಡರನ್ನು ಒಡೆಯುವ ಕೆಲಸವನ್ನು ಜನಾರ್ದನ ರೆಡ್ಡಿ ಮಾಡ್ತಾ ಇದ್ದಾರೆ. ಶ್ರೀರಾಮುಲು ಜತೆ ವಾಲ್ಮೀಕಿ ಸಮಾಜ ಇದೆ. ಶ್ರೀರಾಮುಲು ಅವರನ್ನು ಅವನು ಇವನು ಅಂತಾ ರೆಡ್ಡಿ ಮಾತನಾಡ್ತಾ ಇದ್ದಾರೆ. ಮೊದಲಿಗೆ ಶ್ರೀರಾಮುಲು ಕಾಂಗ್ರೆಸ್ ನಗರಸಭೆ ಸದಸ್ಯರಾಗಿದ್ರು. ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯಕ್ಕೆ ಶ್ರೀರಾಮುಲು ಆಸರೆಯಾಗಿ ನಿಂತಿದ್ದರು. ಅವರನ್ನು ಜನಾರ್ದನ ರೆಡ್ಡಿ ಬೆಳೆಸಿಲ್ಲ. ಸ್ವಂತ ಶಕ್ತಿಯಿಂದ ಶ್ರೀರಾಮುಲು ರಾಜ್ಯದಲ್ಲಿ ಬೆಳೆದಿದ್ದಾರೆ ಎಂದು ರೆಡ್ಡಿಗೆ ತಿರುಗೇಟು ನೀಡಿದ್ದಾರೆ.

ರಾಜ್ಯದ ನಾಲ್ಕನೇ ದೊಡ್ಡ ಸಮುದಾಯದ ನಾಯಕ. ನಮ್ಮ ನಾಯಕನಿಗೆ ತೊಂದರೆ ಆದರೆ ಸುಮ್ಮನಿರುವ ಮಾತಿಲ್ಲ. ನಮ್ಮ ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯ ಕೇಳಿದ್ದೆವೆ. ಸಮ್ಮತಿ ನೀಡಿದ್ದಾರೆ. ಒಂದು ವಾರ ಗಡುವು ನೀಡುತ್ತೇವೆ. ಅಷ್ಟರೊಳಗೆ ರೆಡ್ಡಿ ಹೇಳಿಕೆ ಹಿಂಪಡೆಯಬೇಕು. ವಾಲ್ಮೀಕಿ ಸಮುದಾಯಕ್ಕೆ ಹಾಗೂ ಶ್ರೀರಾಮುಲುಗೆ ಕ್ಷಮೆ ಕೇಳಬೇಕು. ಇಲ್ಲ ವೆಂದರೆ ಕರ್ನಾಟಕ ರಾಜ್ಯ ಬಂದ್ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದರು.

ವಾಲ್ಮೀಕಿ ಪೀಠದ ದರ್ಮದರ್ಶಿ ತಾರಿಹಳ್ಳಿ ಜಂಬಯ್ಯ ನಾಯಕ, ಪ್ರಮುಖರಾದ ಜಂಬುನಾಥ, ಶ್ರೀಕಂಠಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net