

ಹೊಸಪೇಟೆ: ತುಂಗಭದ್ರಾ ಜಲಾಶಯ ಈ ಬಾರಿ ಶೇ.80 ರಷ್ಟು ಭರ್ತಿ ಮಾಡಬೇಕ ಅಥವ ಸಂಪೂರ್ಣ ಭರ್ತಿ ಮಾಡಬೇಕ ಎಂಬುದು ಟಿಬಿಡ್ಯಾಂ ಆಡಳಿತ ಮಂಡಳಿಯಿAದ ಇನ್ನೂ ತಿರ್ಮಾನ ಮಾಡದ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ಇನ್ನೂ ಗೊಂದಲ ಮಯವಾಗಿದೆ.
ಜಲಾಶಯ ನಿರ್ಮಾಣವಾಗಿ 70 ವರ್ಷ ಕಳೆದಿದೆ. ಜಲಾಶಯದ ಎಲ್ಲ ಕ್ರಸ್ಟ್ ಗೇಟ್‌ಗಳು ಶೇ.40ರಷ್ಟು ದುರ್ಬಲವಾಗಿವೆ ಎಂದು ನಾನ್ ಡಿಸ್ಟ್ರಿಕ್ಟಿವ್ ಟೆಸ್ಟಿಂಗ್ (ಎನ್‌ಡಿಟಿ)ನ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಈ ಬಾರಿ ಜಲಾಶಯ ಸಂಫೂರ್ಣ ಭರ್ತಿ ಮಾಡದೇ ಶೇ.80 ರಷ್ಟು ಭರ್ತಿಗೆ ತಜ್ಞರ ಸಲಹೆಯಾಗಿದೆ. ಆದರೆ, ಈ ವರೆಗೆ ಟಿಬಿಬಿ ಸೇರಿದಂತೆ ಕರ್ನಾಟಕ, ಆಂದ್ರ ಮತ್ತು ತೆಲಂಗಾಣದ ಜನಪ್ರತಿಗಳು, ಉನ್ನತ ಅಧಿಕಾರಿಗಳು ಎಷ್ಟು ಭರ್ತಿ ಮಾಡಬೇಕು ಎಂಬುದು ಒಮ್ಮತ ಮೂಡದೇ ಇನ್ನೂ ತಿರ್ಮಾನ ಆಗಿಲ್ಲ. ಶೇ.80ರಷ್ಟು ಭರ್ತಿ ಎಂದರೆ, 105.788 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿ 84 ಟಿಎಂಸಿ ನೀರು ಭರ್ತಿ ಮಾಡಬೇಕು. ಈಗಾಗಲೇ ಜಲಾಶಯದಲ್ಲಿ 77 ಟಿಎಂಸಿ ನೀರು ಭರ್ತಿಯಾಗಿದೆ. ಒಳಹರಿವು 32 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದನ್ನು ನಿಲ್ಲಿಸುವುದೋ ಅಥವ ನದಿಗೆ ಹರಿಸುವುದೋ ಟಿಬಿಬಿ ಅಧಿಕಾರಿಗಳಿಗೆ ಗೊಂದಲಮಯವಾಗಿದೆ.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಂಗಭದ್ರಾ ಜಲಾಶಯ ಅವದಿ ಮೂನ್ನ ಭರ್ತಿಯಾಗುತ್ತೀದೆ. ಆದರೆ, ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆ.10ರಂದು ಕಳಚಿ ಬಿದ್ದಿತ್ತು. ಕಳೆದ ವರ್ಷ ನಡೆದ ದುರಂತ ಈ ಭಾಗದ ಜನರಿಗೆ ನೀರಿನ ಹಾಹಾಕಾರದ ಆತಂಕ ಮೂಡಿತು. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಗಿತ್ತು. ನಂತರ ಡಿಸೆಂಬರ್ ಒಳಗೆ ಗೇಟ್ ಅಳವಡಿಕೆ ಆರ್ಯ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ನಂತರ ಎಲ್ಲ ಶೇ.40 ರಷ್ಟು ದುರ್ಬಲವಾಗಿವೆ ಎಂದು ಹೇಳಿದರು. ಆದರೆ, ಈ ವರೆಗೆ ಗೇಟ್ ಅಳವಡಿಸದೇ ಕಾಲಹರಣ ಮಾಡಲಾಗಿದೆ. ಈಗ ಜಲಾಶಯ ಎಷ್ಟು ಭರ್ತಿ ಮಾಡಬೇಕು ಎಂಬುದು ಕೂಡ ಸ್ಪಷ್ಟ ಮಾಹಿತಿಯಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ 10 ಲಕ್ಷ ಎಕರೆ ಕೃಷಿ ಜಮೀನಿಗೆ ಈ ಜಲಾಶಯದ ನೀರು ಆಸರೆಯಾಗಿದೆ. ಅಲ್ಲದೆ ಆಂಧ್ರ, ತೆಲಂಗಾಣದ 3 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶವೂ ಇದೇ ನೀರನ್ನು ಅವಲಂಬಿಸಿದೆ. ಆದರೆ, ಜಲಾಶಯಕ್ಕೆ ಒಳಹರಿವು ಉತ್ತಮವಾಗಿದ್ದರೂ, ಈ ಬಾರಿ ಕೂಡ ಜಲಾಶಯ ಭರ್ತಿ ಆಗುವುದೇ ಎಂಬ ಗೊಂದಲದಲ್ಲಿ ರೈತರಿದ್ದಾರೆ.
ಕರ್ನಾಟಕ-ಆಂಧ್ರಪ್ರದೇಶದ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿರುವ ಟಿಬಿಡ್ಯಾಂನ ಎಲ್ಲ 33 Áಕ್ರಸ್ಟ್ ಗೇಟ್ ಬದಲಿಸಲು ಟೆಂಡರ್ ಪ್ರಕ್ರಿಯೇ ಮುಗಿದು 19ನೇ ಗೇಟ್ ಅಳವಡಿಕೆಗೆ ಸಿದ್ದತೆ ನಡೆಸಲಾಗಿತ್ತು. ಆದರೆ ಒಳ ಹರಿವು ಆರಂಭವಾಗಿ ಜಲಾಶಯದಲ್ಲಿ ಕೂಡ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದ್ದರಿಂದ ಗೇಟ್ ಅಳವಡಿಕೆ ಕಾರ್ಯ ಮುಂದೂಡಲಾಯಿತು. ಮುಂದಿನ ಬೇಸಿಗೆಯಲ್ಲಿ ಬದಲಾವಣೆ ಮಾಡುವ ಕಾರ್ಯಕ್ಕೆ ಚಿಂತನೆ ನಡೆದಿದೆ ಎಂದು ಟಿಬಿ ಡ್ಯಾಂ ಮೂಲಗಳು ತಿಳಿಸಿವೆ.
ಈ ವರ್ಷ ತುಂಗಭದ್ರಾ ಜಲಾಶಯದ ಗೇಟ್ ಬದಲಿಸಲು ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯ ಕೂಡ ಆರಂಭವಾಗಿದೆ. ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದ ಹಿನ್ನಲೇಯಲ್ಲಿ ಅಳವಡಿಕೆ ಕಾರ್ಯ ಮುಂದುಡಲಾಗಿದೆ. ತಜ್ಞರು ಡ್ಯಾಂ ಸಂಪೂರ್ಣ ಭರ್ತಿಗೆ ಬೇಡ ಎಂದು ತಿಳಿಸಿದ್ದಾರೆ. ಆದರೆ, ಆಡಳಿತ ಮಂಡಳಿಯಲ್ಲಿ ಇನ್ನು ತಿರ್ಮಾನ ಆಗಿಲ್ಲ. - ಓ.ಆರ್.ಕೆ.ರೆಡ್ಡಿ, ಕಾರ್ಯದರ್ಶಿ, ಟಿಬಿ ಮಂಡಳಿ