

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತುಂಗಭದ್ರಾ ಜಲಾಶಯ ತುಂಬಿ ಹರಿದು ಪ್ರವಾಹ ಸೃಷ್ಠಿಯಾಗಿದೆ. ಆದರೆ, ಕಂದು ಬಣ್ಣದ ಹೊಸ ನೀರಿನಿಂದ ಜಲಚರಗಳು ಅವಸಾನದ ಅಂಚಿಗೆ ತಲುಪುತ್ತಿದ್ದರೆ, ಜಿಲ್ಲೆಯ ಜನರಿಗೆ ಕಲುಷಿತ ನೀರೇ ಗತಿಯಾಗಿದೆಯಾಗಿದೆ.
ಜಿಲ್ಲೆಯ ಬಹುತೇಕ ನಗರ, ಪಟ್ಟಣ, ಗ್ರಾಮಗಳಲ್ಲಿರುವ ಜನರಿಗೆ ಕುಡಿಯಲು, ಕೃಷಿ ಜಮೀನಿಗೆ ತುಂಗಭದ್ರಾ ಆಸರೆಯಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ನದಿ ನೀರು ಕಂದು ಬಣ್ಣಕ್ಕೆ ತಿರುಗಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ. ಜನರಿಗೆ ಯಾವುದೇ ಪ್ರತ್ಯೇಕ ಕುಡಿವ ನೀರು ಸಂಗ್ರಹಣೆ ವ್ಯವಸ್ಥೆ ಇಲ್ಲ. ಕಾರಣ ನದಿಯ ನೀರನ್ನು ನೇರವಾಗಿ ಶುದ್ಧಿಕರಣ ಘಟಕಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ಕಂದು ಬಣ್ಣದ ನೀರನ್ನೇ ನೇರವಾಗಿ ಹರಿಸಲಾಗುತ್ತದೆ. ಇದರಿಂದ ಜನರಲ್ಲಿ ಆತಂಕ ಮುಡಿದೆ.
ಈ ಹಿಂದೆ ತುಂಗಭದ್ರಾ ಅಣೆಕಟ್ಟು ಸೇರಿದಂತೆ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗುವ ಮೂಲಕ ಜನರಲ್ಲಿ ಆತಂಕ ಮಾಡಿತ್ತು. ಈಗ ನೀರು ಕಂದು ಬಣ್ಣಕ್ಕೆ ತಿರುಗುವ ಮೂಲಕ ಮತ್ತೊಮ್ಮೆ ಜನರಲ್ಲಿ ಭಯ ಸೃಷ್ಟಿಸಿದೆ. ಆದರೆ, ಶುದ್ದ ನೀರು ಪುರೈಕೆ ಮಾಡುವ ಸ್ಥಳೀಯ ಆಡಳಿತ, ಜಲಾಶಯಕ್ಕೆ ಹೊಸ ನೀರು ಬರುತ್ತಿದೆ. ಆದ್ದರಿಂದ ಹೊಂಡು ನೀರಿನಂತೆ ಕಾಣುತ್ತಿದೆ. ಶುದ್ಧೀಕರಣ ಘಟಕದ ಮುಂದೆ ನೀರು ಶುದ್ಧೀಕರಣ ಮಾಡಿ ಪೂರೈಕೆ ಮಾಡಲಾಗುತ್ತಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಹೊಸ ನೀರು ಇದುವುದರಿಂದ ಬಿಸಿ ಮಾಡಿ ಆರಿಸಿ ಕುಡಿದರೆ ಉತ್ತಮ ಎಂದು ಅಧಿಕಾರಿಗಳ ಹೇಳುತ್ತಿದ್ದಾರೆ.
ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರು ನದಿಗೆ ಹರಿಸುತ್ತಿರುವುದರಿಂದ ನೀರುನಾಯಿ ಕಾಣಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕಳೆದ ಕೆಲ ದಿನಗಳಿಂದ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ತೀರದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿರುವ ನೀರು ನಾಯಿಗಳು, ಇದೀಗ ತುಂಗಭದ್ರಾ ಜಲಾಶಯ ಹಿನ್ನೀರು ಪ್ರದೇಶದ ಗುಂಡಾ ಸಸ್ಯೋದ್ಯಾನವನ ಬಳಿ, ಜಲಾಶಯದ ಕೆಳಭಾಗ ನದಿ ಪ್ರದೇಶದಲ್ಲಿ ಪ್ರತ್ಯಕ್ಷವಾಗಿ. ನದಿಗೆ ನೀರು ಹರಿಸುತ್ತಿರುವ ದೃಶ್ಯವನ್ನು ನೋಡಲು ಜಲಾಶಯದ ಕೆಳಭಾಗದ ನದಿ, ಸೇತುವೆ ಬಳಿ ನಿಂತಿದ್ದ ವೇಳೆ ನದಿ ತೀರದಲ್ಲಿ ನೀರು ನಾಯಿಗಳ ಆಟ ಮನತಣಿಸಿತು.
ತುಂಗಭದ್ರಾ ನದಿಗಳು ತುಂಬಿ ಹರಿದು ಪ್ರವಾಹ ಸೃಷ್ಠಿಯಾಗಿದ್ದು, ಮೊಸಳೆ, ನೀರು ನಾಯಿ ಸೇರಿದಂತೆ ಇತರೆ ಜಲಚರಗಳು ನದಿ ತೀರದಲ್ಲಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು. ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಮೊಸಳೆ ಹಾಗೂ ನೀರು ನಾಯಿಗಳು ತಮ್ಮ ಮೂಲ ಆಶ್ರಯವನ್ನು ಬಿಟ್ಟು, ನಡುಗಡ್ಡೆಗಳನ್ನು ಆಶ್ರಯಿಸುತ್ತವೆ. ಅಲ್ಲದೇ ಪ್ರವಾಹದಲ್ಲಿ ಅವುಗಳ ಆಹಾರವಾದ ಮೀನು ಮುಂತಾದ ಆಹಾರದ ಲಭ್ಯತೆ ಇರುವುದಿಲ್ಲ. ಆದ್ದರಿಂದ ನೀರುನಾಯಿಗಳು ಕಾಲುವೆಗಳಲ್ಲಿ ಹಾಗೂ ಸುತ್ತಮುತ್ತಲಿನ ಗದ್ದೆಗಳಲ್ಲಿ ಕಂಡು ಬರುತ್ತವೆ. ಕೆಲವೊಮ್ಮೆ ಕಾಲುವೆಗಳ ಮೂಲಕ ಸಾಗಿ ಸಮೀಪದ ಕೆರೆ ಕಟ್ಟೆಗಳಲ್ಲಿ ಮೀನು, ಏಡಿ, ಕಪ್ಪೆ ಮುಂತಾದ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಆದ್ದರಿಂದ ಹೊಲಗದ್ದೆಗಳಲ್ಲಿ ಅಥವಾ ಕಿರು ಕಾಲುವೆಗಳಲ್ಲಿ ಮೊಸಳೆ ಮತ್ತು ನೀರುನಾಯಿಗಳು ಕಂಡು ಬಂದಲ್ಲಿ ಗಾಬರಿ ಪಡಿಸದೇ, ಜಾಗೃತಿಯಿಂದ ದೂರವಿರಿ ಹಾಗೂ ಎಚ್ಚರಿಕೆ ವಹಿಸಬೇಕು. ಇನ್ನೂ ಮೊಸಳೆಗಳು ಜನವಸತಿ ಪ್ರದೇಶದಲ್ಲಿ ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಗೆ ಸಂಪರ್ಕಿಸಿ ಅವುಗಳನ್ನು ಸಂರಕ್ಷಿಸಿ ಸೂಕ್ತ ಆವಾಸಸ್ಥಾನಕ್ಕೆ ಬಿಡಲು ನೆರವಾಗಬೇಕು ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಮನವಿ ಮಾಡಿದ್ದಾರೆ.
ಪ್ರವಾಹದಿಂದ ಯಾವುದೇ ಹಾನಿಯಾಗಿಲ್ಲ. ನದಿ ತೀರದಲ್ಲಿ ಜಲಚರದಿಂದ ಎಚ್ಚರಿಕೆಯಿಂದಿರಬೇಕು. ಜಲಾಶಯಕ್ಕೆ ಹೊಸ ನೀರು ಬಂದಿರುವುದರಿAದ ಕಂದು ಬಣ್ಣ ಇರುತ್ತದೆ. ಸ್ವಲ್ಪ ದಿನದ ನಂತರ ಅದು ತಿಳಿಯಾಗಲಿದೆ. ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿದೆ. ಯಾವುದಕ್ಕೂ ಕಾಯಿಸಿ, ಆರಿಸಿ ಕುಡಿದರೆ ಉತ್ತಮ. ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ ವಿಜಯನಗರ ....ಕೋಟ್.....
ಟಿಬಿಡ್ಯಾಂ ತುಂಬಿ ಹರಿಯುತ್ತಿದೆ. ನದಿ ಪತ್ರದಲ್ಲಿ ಪ್ರವಾಹ ಬಂದಾಗ, ಜಲಚರಗಳು ಹೊರಗೆ ಬರುವುದು ಸಹಜ. ನೀರುನಾಯಿ, ಮೊಸಳೆಯಿಂದ ಎಚ್ಚರ ವಹಿಸಬೇಕು. ಒಂದು ವೇಳೆ ಕಂಡು ಬಂದರೆ ,ಕೂಡಲೇ ಅರಣ್ಯ ಅಧಿಕಾರಿಗಳಿಗೆ ತಿಳಿಸಿ. ಅವುಗಳ ರಕ್ಷಣೆ ಕಾರ್ಯ ನಡೆಯಲಿದೆ. - ಅರ್ಸಲಾನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಜಯನಗರ
ಜಲಾಶಯಕ್ಕೆ ಹೊಸ ನೀರು ಬರುತ್ತಿದೆ. ಕುಡಿವ ಮುನ್ನ ಗಮನ ಹರಿಸಬೇಕು. ಸ್ಥಳೀಯ ಸಂಸ್ಥೆಗಳು ಶುದ್ದ ಮಾಡುತ್ತಿದ್ದೆವೆ ಎಂದು ಹೇಳುತ್ತಿದ್ದಾರೆ. ಪರಿಶೀಲನೆ ಮಾಡುತ್ತೇನೆ. ಕಲುಷಿತ ನೀರು ಕುಡಿದರೆ ವಾಂತಿ, ಬೇದಿ ಪ್ರಕರಣಗಳು ಹೆಚ್ಚಾಗುತ್ತವೆ. ನೀರು ಬಿಸಿಮಾಡಿ ಕುಡಿದರೆ ಅನಾಹುತ ತಡೆಯಬಹುದು. - ಡಾ.ಎಲ್.ಆರ್.ಶಂಕರ್ ನಾಯ್ಕ, ಡಿಎಚ್‌ಒ, ವಿಜಯನಗರ