ಟಿಬಿಡ್ಯಾಂ ಮತ್ತೆ ಭರ್ತಿಗೆ ಪ್ರಾರ್ಥಿಸೋಣ

Published on

ಹೊಸಪೇಟೆ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಗೇಟ್ ಕಳಚಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಬಹೇಳಿದರು. ರಾಜ್ಯಕ್ಕೆ ಈ ಜಲಾಶಯದಿಂದ ಶೇ.40 ಆದಾಯ ಆದಾಯಿದೆ. ಇಲ್ಲಿನ ಭತ್ತ ರಾಜ್ಯ ಮಾತ್ರವಲ್ಲ ದೇಶದ ವಿದೇಶ ಜನರು ತಿನ್ನುತ್ತಿದ್ದಾರೆ. 20 ಲಕ್ಷ ಹೆಕ್ಟೆರ್ ಗೂ ಅದಿಕ ಭತ್ತ ಬೆಳೆಯಲಾಗುತ್ತದೆ.

ನವಲಿ ಸಮಾನಂತರ ಜಲಾಶಯ ಉಭಯ ರಾಜ್ಯಗಳ ಜತೆ ಮಾತನಾಡಿ ಪ್ರೋಸಸಿಂಗ್ ಆಗಿದೆ. ರಾಜ್ಯ ಸರ್ಕಾರ ಅದರ ಫಾಲೋಪ್ ಮಾಡಿ ಕ್ರಮಕೈಗೊಳ್ಳಬೇಕು. ಡ್ಯಾಮ್ ಗಳ ಅಭಿವೃದ್ಧಿ ಗೆ ವಿಶ್ವ ಬ್ಯಾಂಕ್‌ ಸಾಲ ನೀಡುತ್ತದೆ. ಅದನ್ನು ರಾಜ್ಯ ಸರ್ಕಾಕರ ತಂದು ಇಲ್ಲಿ ಅಭಿವೃದ್ಧಿ ಮಾಡಲಿ. ಸ್ಟಾಪ್‌ ಲಾಗ್ ಗೇಟ್ ಹಾಕಲು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಮೊದಲ ಬೆಳೆಗೆ 115 ಟಿಎಂಸಿ ಬೇಕು. ಈಗಾಗಲೇ 25 ನೀರು ಜಲಾಶಯದಿಂದ ಹರಿದಿದೆ. ಇನ್ನೂ 90 ಟಿಎಂಸಿ ನೀರು ಬೇಕಿದೆ. ಮೊದಲ ಬೆಳೆಗೆ ಇನ್ನೀ 50 ಟಿಎಂಸಿ ನೀರಿನ ಅವಶ್ಯಕತೆಯಿದೆ. ದೇವರು ಕರುಣಿಸಿ, ಜಲಾಶಯ ಮತ್ತೊಮ್ಮೆ ಭರ್ತಿಯಾಗಲಿ ಎಂದು ಪ್ರಾರ್ಥಿಸೋಣ ಎಂದರು.

ಜಲಾಶಯದ ಹುಳು ದೊಡ್ಡ ಸವಾಲಾಗಿದೆ‌. ಇದರ‌ ನಡುವೆ ಈ ಘಟನೆ ಹಾಗೂ ಮುಂದಿನ ದಿನಗಳಲ್ಲಿ ಆಗುವ ಘಟನೆ ಎಚ್ಚರಿಕೆ ಗಂಟೆಯಾಗಿದೆ. ನೀರಿನ ಅತಿಹೆಚ್ಚ ಒತ್ತಡದಿಂದ ಈ ಘಟನೆ ನಡೆದಿದೆ. ಮುಂಗಾರು‌ ಮುನ್ನ ಮಾಡುವ ನಿರ್ವಹಣೆ ಮಾಡಿಲ್ಲ. ಆದ್ದರಿಂದ ಸಮಸ್ಯೆ ಉದ್ಭವಿಸಿದೆ. ಅಧಿಕಾರಿಗಳು, ಸರ್ಕಾರದ ಅಲ್ಲ ಅಂದ್ರ ಮತ್ತೆ ಇನ್ಯಾರು? ಇತರೆ ಗೇಟ್ ಗಳ ಆತಂಕಯಿದೆ. ಜಲಾಶಯವನ್ನು ತಾಂತ್ರಿಕಾವಾಗಿ ಪರಿಶೀಲನೆ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net