ಬಸವರಾಜ್ ದಢೇಸುಗೂರ ನಮ್ಮ ಯಜಮಾನ

Published on

ಹೊಸಪೇಟೆ: ಜಿಲ್ಲೆಯಲ್ಲಿ ಮೂರುದಿನಗಳ ಕಾಲ ಪ್ರವಾಸ ಕೈಗೊಂಡಿರುವ ಉಪ ಲೋಕಾಯುಕ್ತ ಬಿ.ವೀರಪ್ಪ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯ ಡಿಡಿ ಮೊಬೈಲ್ ಪರಿಶೀಲಿಸಿದಾಗ ಅಚ್ಚರಿ ವಿಷಯಯೊಂದು ಬಹಿರಂಗಗೊಂಡಿದೆ.

ಇಲಾಖೆಯ ಡಿಡಿ ಶ್ವೇತಾ ಅವರ ಮೊಬೈಲ್ ಅನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ನಿಮ್ಮ ಖಾತೆಯಲ್ಲಿ ದುಡ್ಡು ಒಂದು ಬಾರಿ ಹೋಗಿದೆ. ಆದರೆ ಎರಡು ಬಾರಿ ಬಂದಿದೆ. ಮಕ್ಕಳಿಗೆ ಅಥವಾ ಯಜಮಾನನಿಗೆ ಕಳಿಸಿರಬೇಕು ಎಂದು ಪೋನ್ ಪೇ ವಹಿವಾಟಿನ ಬಗ್ಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಿಡಿ ಶ್ವೇತಾ, ಹೌದು ಸರ್ ಎಂದು ವಹಿವಾಟಿನ ಬಗ್ಗೆ ಒಪ್ಪಿಕೊಂಡರು. ಏನ್ ಕೆಲಸ ಮಾಡುತ್ತಾರೆ ಯಜಮಾನರು? ಎಂದು ಲೋಕಾಯುಕ್ತರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಡಿಡಿ ಶ್ವೇತಾ ಪೊಲಿಟಿಷಿಯನ್, ಮಾಜಿ ಶಾಸಕರು ಸರ್. ಬಸವರಾಜ್ ದಢೇಸುಗೂರ ನನ್ನ ಪತಿ ಎಂದು ಹೇಳಿದರು. ಹೌದಾ.... ಅವರೇ ನಿಮ್ಮ ಬಳಿ ಹಣ ಕೇಳ್ತಾರಾ? ಅವರಿಗೆ ಏನ್ ಕಡಿಮೆ ಆಗಿದೆ ಎಂದು ಡಿಡಿ ಶ್ವೇತಾ ಅವರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಪ್ರಶ್ನೆ ಮಾಡಿದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net