ಸಂಗೀತದ ನಾದ ಕಲ್ಲುಗಳ ಪತ್ತೆ

28 MANJU 03
Published on

ಹೊಸಪೇಟೆ: ತಾಲೂಕಿನ ಧರ್ಮಸಾಗರ ಗ್ರಾಮದಿಂದ ಬಳ್ಳಾರಿ ಜಿಲ್ಲೆಯ ದೇವಲಾಪುರ ಮಾರ್ಗ ಮದ್ಯೆದಲ್ಲಿಯನ ಅಪ್ಪಳಪ್ಪನ ಕೆರೆಯ ಬಳಿ ವಿಜಯನಗರ ತಿರುಗಾಟ ಸಂಶೋಧನ ತಂಡದಿAದ ಸಂಗೀತದ ನಾದ ಕಲ್ಲುಗಳ ಪತ್ತೆ ಮಾಡಲಾಗಿದೆ.

ಈ ಕರೆಕಲ್ಲು ಗುಡ್ಡದಲ್ಲಿ ಸಂಗೀತದ ಕಲ್ಲುಗಳೊಂದಿಗೆ, ಕ್ರಿ.ಪೂ. 3000 ಕಾಲಮಾನದ ಆದಿಮಾನವ ನೆಲೆಸಿದನೆನ್ನಲಿಕ್ಕೆ ಕುರುಹಾಗಿ ಅಲ್ಲಿನ ಬಹುತೇಕ ಗುಂಡುಕಲ್ಲುಗಳಿಗೆ ಆದಿಮ ಕುಟ್ಟಿದ ಕುಟ್ಟು ಚಿತ್ರಗಳಿವೆ. ಇದರಲ್ಲಿ ಗೂಳಿ ಚಿತ್ರವಿದ್ದು, ಆರು ಇಂಚು ಉದ್ದ, ನಾಲ್ಕು ಇಂಚು ಅಗಲವಿದೆ. ಆ ಗೂಳಿಯ ಹಿಂದೆ ಮಾನವನ ಚಿತ್ರವಿದೆ. ಬಹುತೇಖ ಕಲ್ಲುಗಳಿಗೆ ಇತರೆ ಪ್ರಾಣಿಗಳ ಚಿತ್ರಗಳಿವೆ. ಹುಲಿಯ ಚಿತ್ರ ಕೂಡ ಚಿತ್ರಿಸಿದ್ದಾರೆ. ಇವು ಅಲ್ಲದೇ ಆದಿ ಮಾನವ ಬೇಟಯಾಡುವ, ಹಾಗೂ ಎತ್ತರದ ಮನುಷ್ಯನ ಚಿತ್ರಗಳನ್ನು ಕುಟ್ಟಿರುವುದು ಕಂಡು ಬಂದಿವೆ. ಇನ್ನಿತರೆ ಗುಂಡು ಕಲ್ಲುಗಳಿಗಿರುವ ಕುಟ್ಟು ಚಿತ್ರಗಳು ಗಾಳಿ, ಮಳೆ, ಬಿಸಿಲಿನಿಂದ ಸವೆದು ಹೋಗಿವೆ. ಇವುಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಂಶೋಧಕ ಡಾ.ಗೋವಿಂದ ತಿಳಿಸಿದ್ದಾರೆ.

ಕರೆಕಲ್ಲು ಗುಡ್ಡದ ಸಮೂಹದ ಮದ್ಯೆ ಭಾಗದಲ್ಲಿರುವ ನಾಲ್ಕೈದು ಕಲ್ಲುಗುಂಡುಗಳಿಗೆ ಕಲ್ಲಿನಿಂದ ಕುಟ್ಟಿದಾಗ ಹಂಪಿಯ ವಿಠ್ಠಲ ಮಂಟಪದಲ್ಲಿ ಸಂಗೀತ ರೀತಿಯಲ್ಲಿ ಸಂಗೀತದ ನಾದವು ಹೊರ ಹೊಮ್ಮುವುದನ್ನು ಈ ತಂಡದ ಡಾ.ಗೋವಿಂದ, ಡಾ.ಎಚ್.ತಿಪ್ಪೇಸ್ವಾಮಿ, ಡಾ.ಗೋವರ್ಧನ್, ಡಾ.ಕೃಷ್ನೆಗೌಡ, ಡಾ.ವೀರಾಂಜಿನೇಯ, ಕೆ.ವೀರಭದ್ರ ಗೌಡ, ರವಿ, ಮಂಜು ಹಾಗೂ ಭೈರಪ್ಪ, ಶಂಕರ್ ಪತ್ತೆ ಹಚ್ಚಿದ್ದಾರೆ.

ಈ ಕಲ್ಲುಗಳಲ್ಲಿ ಒಂದು ಕಲ್ಲು ಚಪ್ಪಟೆಯಾಕಾರವಾಗಿದ್ದು, ಅದು ಎಂಟು ಅಡಿ ಎತ್ತರ, ನಾಲ್ಕು ಅಡಿ ಅಗಲವಾಗಿದೆ. ಅದರ ಪಕ್ಕದ ಇನ್ನಿತರೆ ಮೂರು ಹಾಸು ಗುಂಡು ಕಲ್ಲುಗಳಿಂದಲೂ ಸುನಾದ ಸಂಗೀತ ಕೇಳುತ್ತದೆ. ಈ ಸಂಗೀತ ನಾದವು ಮೊಳಗುವುದನ್ನು ಆದಿ ಮಾನವರು ಗುರುತಿಸಿ ಅವರು ಕುಟ್ಟಿದ ಗುರುತು ಈಗಲೂ ಕಾಣಿಸುತ್ತವೆ. ಇದೇ ರೀತಿ ಈಗಾಗಲೇ ಪ್ರಾಗೈತಿಹಾಸಿಕ ಸ್ಥಳವೆಂಬ ಖ್ಯಾತಿಗೆ ಗುರಿಯಾಗಿರುವ ಸಂಗನಕಲ್ಲಿನಲ್ಲಿ ಸಹ ಇದೇ ರೀತಿಯ ಸಂಗೀತ ನಾದ ಹೊರಹೊಮ್ಮುವ ಕಲ್ಲುಗಳು ಕಂಡು ಬರುತ್ತವೆ. ಆದರೂ ಈ ಕರೆಕಲ್ಲು ಗುಡ್ಡದ ಕಲ್ಲುಗಳು ತುಂಬಾ ವಿಶೇಷವಾಗಿವೆ. ರಸ್ತೆ ಪಕ್ಕದಲ್ಲಿರುವ ಈ ಗುಂಡುಕಲ್ಲುಗಳ ಸುತ್ತಲೂ ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಸಂಶೋಧಕ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಪಾಪಿನಾಯಕನ ಹಳ್ಳಿಯ ಅಂಕಾಲಮ್ಮ ದೇಗುಲದ ಹಿಂಬದಿಯ ಕರೆಕಲ್ಲು ಗುಡ್ಡದಲ್ಲಿ ಇದೇ ರೀತಿಯ ಕುಟ್ಟುಚಿತ್ರಗಳನ್ನು ಪತ್ತೆಮಾಡಿದ್ದೆವು. ಆದರೆ, ಇಲ್ಲಿ ವಿಶೇಷವಾಗಿ ಕಲ್ಲುಗಳಲ್ಲಿ ಸಂಗೀತದ ನಾದ ಕೇಳಿಸುತ್ತದೆ. ಇಲ್ಲವೇ ಬೇಟೆಯ ಹಿನ್ನೆಲೆಯಲ್ಲಿ ತಿರುಗಾಡುತ್ತಾ ತಂಗಿದಾಗ ಕುಟ್ಟು ಚಿತ್ರಗಳನ್ನು ಕುಟ್ಟಿರಬೇಕೆಂದು ತಿಳಿದುಬರುತ್ತದೆ ಎಂದು ಸಂಶೋಧಕ ಡಾ.ಗೋವರ್ಧನ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net