ಹಳೆ ವೈಷಮ್ಯ ವ್ಯಕ್ತಿಯ ಬರ್ಬರ ಕೊಲೆ

IMG-20250410-WA0030
Published on

ಹೊಸಪೇಟೆ: ನಗರದ ಜಂಬುನಾಥ ರಸ್ತೆಯಲ್ಲಿ ಬುಧವಾರ ರಾತ್ರಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆ ಮಾಡಲಾಗಿದೆ.

ಇದೇ ಪ್ರದೇಶದ ನಿವಾಸಿ ಹೊನ್ನೂರ (28) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಆರೋಪದಲ್ಲಿ ಅದೇ ಬಡಾವಣೆಯ ಕಾಳಿ (30) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಆರೋಪಿ ಕಾಳಿ
ಕೊಲೆ ಆರೋಪಿ ಕಾಳಿ

ಹಳೆ ದ್ವೇಷದ ಹಿನ್ನೆಲೆ 2021ರಲ್ಲಿ ಕೂಡ ಹೊನ್ನೂರ ಮೇಲೆ ಕಾಳಿಯಿಂದ ಕೊಲೆಗೆ ಯತ್ನ ನಡೆದಿತ್ತು. ನಂತರದಲ್ಲಿ ಮೃತ ಹೊನ್ನೂರ ದಾವಣಗೆರೆಯಲ್ಲಿ ವಾಸವಾಗಿದ್ದರು. ನಗರದ ಹೊರ ವಲಯದ ಜಂಬುನಾಥೇಶ್ವರ ರಥೋತ್ಸವ ಹಿನ್ನಲೆ ನಗರಕ್ಕೆ ಆಗಮಿಸಿದ್ದ ಹೊನ್ನೂರನ ಮೇಲೆ ಮತ್ತೆ ಬುಧವಾರ ರಾತ್ರಿ ಆರೋಪಿ ಕಾಳಿ ಚಾಕುವಿನಿಂದ ಚುಚ್ಚಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎಂದು ಇಲ್ಲಿನ ಪಟ್ಟಣ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಂ ಬೆಳಗ್ಗೆ ತುಪಾಕಿ ಸದ್ದು

ನಗರದಲ್ಲಿ ಬುಧವಾರ ರಾತ್ರಿ ನಡೆದ ಕೊಲೆ ಪ್ರಕರಣದ ಆರೋಪಿ ಕಾಳಿಗೆ ಬುಧವಾರ ಮಧ್ಯರಾತ್ರಿ ಪೊಕೀಸರು ಬಂಧಿಸಿ, ಬೆಳಗಿನ ಜಾವ ಪಂಚನಾಮ ನಡೆಸಿದ್ದಾರೆ. ಈ ವೇಳೆ ಕೊಲೆ ಆರೋಪಿ ಕಾಳಿ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಸಿಬ್ಬಂದಿಗಳಾದ ಎಚ್.ಸಿ. ಲಿಂಗರಾಜ ಹಾಗೂ ಪಿಸಿ ಕೊಟ್ರೇಶ್ ಅವರಿಗೆ ಗಾಯಗಳಾಗಿವೆ. ತಮ್ಮ ರಕ್ಷಣೆಗಾಗಿ ತನಿಖಾಧಿಕಾರಿ ಹುಲುಗಪ್ಪ ಆರೋಪಿ ಬಲಗಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಕೊಲೆ ಆರೋಪಿ ಹಾಗೂ ಹಲ್ಲೆಗೊಳಗಾದ ಪೊಲೀಸರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಎಸ್ಪಿ ಬಿ‌.ಎಲ್‌.ಶ್ರೀಹರಿಬಾಬು, ಎಎಸ್ಪಿ ಸಲೀಂಪಾಷಾ, ಡಿವೈಎಸ್ಪಿ ಡಾ ಮಂಜುನಾಥ್ ತಳವಾರ್ ಭೇಟಿ ನೀಡಿ‌ ಪರಿಶೀಲಿಸಿದರು.

ಹಲ್ಲೆಗೆ ಒಳಗಾದ ಪೊಲೀಸರಿಗೆ ಎಸ್ಪಿ ಬಿ.ಎಲ್.ಶ್ರೀಹರಿಬಾಬು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net