

ಹೊಸಪೇಟೆ: ಹಂಪಿಯ ಶ್ರೀ ನರಹರಿತೀರ್ಥರ ಆರಾಧನೆ ಮಾಡಲು ನ್ಯಾಯಾಲಯ ನಮಗೆ ಅವಕಾಶ ನೀಡಿದೆ. ಮಠದ ವಿದ್ಯಾರ್ಥಿಗಳು ಅಪಘಾತದಲ್ಲಿ ಸಾವನ್ನಪ್ಪಿದ ಕಾರಣ ಗುರುಗಳ ಆರಧನೆ ಸಾಂಕೇತಿಕವಾಗಿ ಆಚರಣೆ ಮಾಡುತ್ತಿದ್ದೆವೆ ಎಂದು ಮಂತ್ರಾಲಯ ಮಠದ ಫೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಹಂಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮಠವು ಎಂದಿಗೂ ದ್ವೇಷ ಸಾಧಿಸೋಲ್ಲಾ, ಪ್ರೀತಿ ಸಹಬಾಳ್ವೆಯಿಂದಲೇ ನಾವು ಮುನ್ನಡೆಯುತ್ತೇವೆ. ಪರ ಮಠದವರಿಗೂ ನಾವು ಜತೆಗೂಡಿ ಆರಾಧನೆ ಮಾಡೋಣ ಅಂತ ಆಹ್ವಾನ ಮಾಡಿದ್ದೇವೆ. ಪರ ಮಠದಂತೆ ನಾವಷ್ಟೇ ಮಾಡಬೇಕು ಅನ್ನೋ ಅಭಿಪ್ರಾಯ ನಮ್ಮದಲ್ಲ. ನಾವು ಎಂದಿಗೋ ನ್ಯಾಯಾಲಯದ ಮೆಟ್ಟಿಲು ನಾವಾಗಿಯೇ ಹತ್ತೊಲ್ಲಾ, ಪರ ಮಠದವರು ನಮಗೆ ಕೋರ್ಟ್ಗೆ ಎಳೆದಾಗ ನಾವು ಉತ್ತರ ಕೊಟ್ಟಿದ್ದೇವೆ ಅಷ್ಟೆ. ನಾವು ಕೂಡಿ ಹೋಗಲು ಸಿದ್ದರಿದೇವೆ. ಎರಡು ಮಠಗಳು ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಕೂಡ ನಾವು ಸಿದ್ದ. ಉಭಯ ಮಠಗಳನ್ನು ಕೂಡಿಸಿಕೊಂಡು, ವ್ಯಾಜ್ಯ ಬಗೆಹರಿಸಿದರೆ ನಾವು ಅದಕ್ಕೂ ನಾವು ಸಿದ್ದ. ಉನ್ನತ ಮಟ್ಟದ ಸ್ವಾಮೀಜಿಗಳು, ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಮಾಧ್ಯಮದವರೂ ಕೂಡ ಗೌರವಯುತವಾಗಿ ವೇದಿಕೆ ಸಿದ್ಧ ಮಾಡಿದರೆ ನಾವು ವ್ಯಾಜ್ಯ ಬಗೆಹರಿಸಿಕೊಳ್ಳಲು ತಯಾರಿದ್ದೇವೆ ಎಂದರು.
ಶ್ರೀ ನರಹರಿ ತೀರ್ಥರ ಆರಾಧಾನ ಮಹೋತ್ಸವಕ್ಕೆ ಮಂತ್ರಾಲಯ ಮಠದ ವಿದ್ಯಾರ್ಥಿಗಳು ಆಗಮಿಸುತ್ತಿರೋ ವೇಳೆ ವಾಹನ ಅಪಘಾತವಾಗಿ ಆಗಬಾರದ ಘಟನೆ ನಡೆದಿದೆ. ವಿದ್ಯಾರ್ಥಿಗಳು ಬಹಳ ಭಕ್ತಿಯಿಂದ ಆಗಮಿಸುತ್ತಿದ್ದರು. ಆದರೆ, ಸಿಂಧನೂರು ಪ್ರಾಂತದಲ್ಲಿ ಅಪಘಾತವಾಗಿ ವಾಹನ ಚಾಲಕ ಮತ್ತು ಮೂರು ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮಕ್ಕಳ ಜೀವಕ್ಕೆ ಬೆಲೆ ಕಟ್ಟಲಾಗೋಲ್ಲಾ, ಆದರೆ ಶ್ರೀ ಮಠ ಅವರೊಂದಿಗೆ ಯಾವತ್ತೂ ಕೂಡ ಇರ್ತದೆ. ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಶ್ರೀ ಮಠ ಅವರೊಂದಿಗೆ ಇರುತ್ತದೆ. ಸಂಭ್ರಮಕ್ಕಿAತ ವಿದ್ಯಾರ್ಥಿಗಳ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಮೃತ ಮಕ್ಕಳು ಮತ್ತು ಚಾಲಕನಿಗೆ ಸದ್ಗತಿ ದೊರೆಯಲಿ. ಶ್ರೀ ನರಹರಿ ತೀರ್ಥರ ಆರಾಧನೆ ಸರಳವಾಗಿ ಆಚರಣೆ ಮಾಡಿದ್ದೇವೆ ಎಂದರು.