

ಹೊಸಪೇಟೆ: ನಾಡೋಜ ನನಗೆ ದೊರೆತಿರೋದು ಖುಷಿ ತಂದಿದೆ. ಇದು ನನ್ನದು ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕ ಜನತೆಗೆ ಸಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ಇದೇ ಜಿಲ್ಲೆಯವನು, ಹಾಗೇ ನೋಡಿದರೆ ನನಗೆ ಯಾವಾಗಲೋ ಈ ನಾಡೋಜ ದೊರೆಯಬೇಕಿತ್ತು. ಈಗಲಾದರೂ ದೊರೆತಿದೆ ಎಂಬುದು ಖಷಿಯಾಗಿದೆ ಎಂದು ಕುಂ ವೀರಭದ್ರಪ್ಪ ಹೇಳಿದರು.
ಕನ್ನಡ ವಿವಿ 33ನೇ ನುಡಿಹಬ್ಬದಲ್ಲಿ ನಾಡೋಜ ಗೌರವ ಪದವಿ ಪಡೆದ ಬಳಿಕ ಮಾತನಾಡಿ, ಮಹಾಕವಿ ಪಂಪನನ್ನು ನಾಡೋಜ ಅಂತ ಕರೆಯುತ್ತಿದ್ದರು. ನಾಡೋಜ ಅಂದರೆ ನಾಡಿಗೆ ದೊಡ್ಡವನೆಂಬ ಹೆಗ್ಗಳಿಕೆ ಇತ್ತು. ಬರೆಯುವವರಿಗೆ, ಬುದ್ಧಿವಂತರಿಗೆ ಇಂತಹ ಪ್ರಶಸ್ತಿಗಳು ಸಿಗಬೇಕು. ನಾನು ಕಡಿಮೆ ಓದಿ, ಹೆಚ್ಚು ಬರೆದವನು ಎಂದರು.
ಗಡಿಭಾಗ ಬಳ್ಳಾರಿಯಲ್ಲಿ ಇನ್ನೇನು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅದಕ್ಕೆ ಇದು ಮುನ್ಸೂಚನೆ ಎಂದು ನಾನು ಭಾವಿಸಿದ್ದೇನೆ ಎಂದರು.