ಮೈಲಾರಲಿಂಗೇಶ್ವರ ಕಾರ್ಣಿಕಕ್ಕೆ ಭಕ್ತರ ಕಾತರ

IMG-20250214-WA0010
Published on

ಹೂವಿನಹಡಗಲಿ: ಐತಿಹಾಸಿಕ ಹಿನ್ನಲೆಹೊಂದಿದೆ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರನ ಕಾರ್ಣಿಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇತಿದವು.

ಬೆಳಗಿಜಾವ ದೇವಸ್ಥಾನದಿಂದ ಡೆಂಕನ ಮರಡಿಯವರೆಗೂ ಗೊರವಪ್ಪಗಳು, ಧರ್ಮದರ್ಶಿ, ಅರ್ಚಕರು ಸೇರಿದಂತೆ ಸಕಲ ಭಕ್ತರೂ ಮೌನ ಮೆರವಣಿಗೆಯೊಂದೆ ಕೆಂಡನ ಮರಡಿಗೆ ತೆರಳಿದರು.

ತುಂಗಭದ್ರಾ ನದಿ ತೀರದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ಶ್ರೀ ಸ್ಚಾಮಿಯನ್ನು ಪ್ರಾರ್ಥಿಸಿದರು. ಬಿಸಿಲಿ ತಾಪದಿಂದ ತಪ್ಪಿಸಿಕೊಳ್ಳಲು ನರಗಳ ಕೆಳಗೆ ನಿಲ್ಲತೊಡಗಿದ್ದಾರೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.ಪೊಲೀಸ್ ಇಲಾಖೆಯಿಂದ ಹೆಚ್ಚುವತಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.ತುಂಗಭದ್ರಾ ನದಿಯಲ್ಲಿ ಎರಡು ಭೋಟಿನ ವ್ಯವಸ್ಥೆ ಮಾಡಲಾಗಿದ್ದು. ಸಿಬ್ಬಂದಿಗಳು ನೇಮಿಸಲಾಗಿದೆ. ಸ್ವಾಮಿಯ ದೈವವಾಣಿಯನ್ನು ಆಲಿಸಲು ಡೆಂಕನ ಮರಡಿಯ ಕಡೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net