ನನ್ನ ಕ್ಷೇತ್ರಕ್ಕೆ ಬಂದು ನನ್ನನ್ನೇ ತಡೆಯುತ್ತೀರಾ?: ಎಚ್.ಆರ್.ಗವಿಯಪ್ಪ

IMG_20240922_101357
Published on

ಹೊಸಪೇಟೆ: ರೈತರಿಗೆ ಹಾಗೂ ಬೆಂಬಲಿಗರಿಗೆ ಸಿಎಂ ಬಾಗಿನ ಕಾರ್ಯಕ್ರಮದ ಪ್ರವೇಶ ನೀಡಲಿಲ್ಲ ಎಂದು ಮುನಿಸಿಕೊಂಡ ಶಾಸಕ ಎಚ್.ಆರ್.ಗವಿಯಪ್ಪ ತುಂಗಭದ್ರಾ ಜಲಾಶಯದಿಂದ ಮರಳಿ ವಾಪಾಸ್ ಹೋದರು.

ಶಾಸಕ ಎಚ್.ಆರ್.ಗವಿಯಪ್ಪ ಅವರು, ನೀವೇ ಕಾರ್ಯಕ್ರಮ ಮಾಡ್ಕೊರಿ. ಸ್ಥಳಿಯ ಶಾಸಕ ನಾನಿಲ್ಲಿ. ಏನ್ ತಿಳ್ಕೊಂಡಿರಿ. ನನ್ನ ಕ್ಷೇತ್ರಕ್ಕೆ ಬಂದು ನನ್ನನ್ನೇ ತಡೆಯುತ್ತೀರಾ ಎಂದು ಪೊಲೀಸರ ಮೇಲೆ ಗದರಿದರು. ಇದಕ್ಕೆ ದನಿಗೂಡಿದ ಬೆಂಬಲಿಗರು, ಆಂಧ್ರ ಮತ್ತು ಕೊಪ್ಪಳದವರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಿ. ಮುನಿರಾಬಾದ್ ಕಡೆಯಿಂದ ಒಬ್ಬೊಬ್ಬರ 50 ಕಾರುಗಳನ್ನು ಬಿಟ್ಟಿದ್ದಿರಿ ಎಂದು ಆಕ್ರೋಶಗೊಂಡರು.

ಕಾರ್ಯಕ್ರಮಕ್ಕೆ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆಗೆ ಭಾರಿ ಭದ್ರತೆ ಒದಗಿಸಲಾಗಿತ್ತು. ಶಾಸಕರ ಕಾರು ಹೊರತು ಪಡಿಸಿ ಮೂರು ಕಾರುಗಳನ್ನು ಬಿಟ್ಟು ಉಳಿದ ಕಾರುಗಳನ್ನು ತಡೆದರು. ಇದಕ್ಕೆ ರೈತರಿಗೆ ಹಾಗೂ ಬೆಂಬಲಿಗರಿಗೆ ಕಾರ್ಯಕ್ರಮಕ್ಕೆ ಬಿಡಲಿಲ್ಲ ಎಂದು ಅಸಮಾಧಾನಗೊಂಡರು. ಮೇಲ್ ಅಧಿಕಾರಿಗಳಿಗೆ ಕೇಳಯವೆ ಎಂದ ಕೂಡ್ಲಿಗಿ ಸಿಪಿಐ ಸುರೇಶ್ ಅವರು, ನಿಮ್ಮಕಾರು ಬಿಡ್ಡುತ್ತೇವೆ. ಉಳಿದವರಿಗೆ ಇಲಾಖೆಯಿಂದ ಪ್ರತ್ಯಕ್ಷ ವಾಹನದ ವ್ಯವಸ್ತೆ ಮಾಡಿ ಕಳಿಸಲಾಗುತ್ತದೆ ಎಂದು ಹೇಳಿದ ಕೂಡಲೇ ಕೆಂಡ ಮಂಡಲರಾದ ಶಾಸಕ ಕಾರು ಹತ್ರಿ ವಾಪಾಸ್ ಹೋಗುತ್ತಿದಂತೆ ಸಿಪಿಐ ಸುರೇಶ್ ಅವರು ಎಸ್ಪಿ ಅವರು ಬರುತ್ತಿದ್ದಾರೆ ಬನ್ನಿ ಸಾರ್ ಎಂದು ಮನವಿ ಮಾತು ಕೆಳದ ಶಾಸಕ ಅಲ್ಲಿಂದ ಹೊರಟು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net