

ಹೊಸಪೇಟೆ: ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ಇಬ್ಬರು ಉದ್ಯಮಿಗಳ ಮೆನೆ, ಕಚೇರಿಗಳ ಮೇಲೆ ಇಡಿ ಬೆಳಂಬೆಳಿಗ್ಗೆ ದಾಳಿ ನಡೆಸಿ, ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆ.
ಸ್ವಸ್ತಿಕ್ ನಾಗರಾಜ್ ಹಾಗೂ ಖಾರಾಪುಡಿ ಮಹೇಶ್ ಅವರ ಮನೆಗಳ ಮೇಲೆ ಬೆಳಿಗ್ಗೆಯೇ ದಾಳಿ ನಡೆಸಿದ ಇಡಿ ತಂಡಗಳು ಈ ದಾಳಿಗಳಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.
ಎಂ.ಜೆ.ನಗರದ ರಸ್ತೆಯಲ್ಲಿರೋ ಗಣಿ ಉದ್ಯಮಿ ಸ್ವಸ್ತಿಕ್ ನಾಗರಾಜ್ ಸ್ಟೀಲ್ ಅಂಗಡಿ ಹಾಗೂ ಮನೆಯಲ್ಲಿ ಇಡಿ ಅಧಿಕಾರಿಗಳ ತೀವ್ರಶೋಧ ನಡೆಸಿದ್ದಾರೆ. ಮತ್ತೊಬ್ಬ ಗಣಿ ಉದ್ಯಮಿ ಹಾಗೂ ನಗರಸಭೆ ಸದಸ್ಯ ಕಾರದಪುಡಿ ಮಹೇಶ್ ಮನೆ, ಕಚೇರಿ ಮತ್ತು ಸ್ಟೀಲ್ ಅಂಗಡಿ ಮೇಲೆ ಇಡಿ ದಾಳಿ ನಡೆಸಿ ತೀವ್ರಶೋಧ ನಡೆಸಿದ್ದಾರೆ.