

ಕೊಟ್ಟೂರು: ಅಸಂಖ್ಯಾತ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಲಕ್ಷಾಂತರ ಜನರು ಒಕ್ಕೊರಲಿನಿಂದ ಕೊಟ್ಟೂರೇಶ್ವರ ಮಹಾರಾಜಕ್ಕೂ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತು. ಇದಕ್ಕೂ ಮುಂಚೆ ಹರಳಯ್ಯನ ಸಮುದಾಯದ ದುರುಗಮ್ಮ ಮತ್ತು ಉಡಿಸಲಮ್ಮ ಮನೆಗೆ ಅರ್ಚಕರು ಹಾಗೂ ಮಠದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಆಗಮಿಸಿ ಅರತಿ ಬೆಳಗಲು ಸಂಪ್ರದಾಯದಂತೆ ಆಹ್ವಾನಿಸಿದರು. ದುರುಗಮ್ಮ ಕಳಸ. ಉಡಸಲಮ್ಮ ದೂಪದ ಆರತಿಯೊಂದಿಗೆ ಕೊಟ್ಟೂರೇಶ್ವರ ಸ್ವಾಮಿ ಪಲ್ಲಕ್ಕಿ ಹತ್ತಿರ ಬಂದು ಅರತಿ. ದೂಪದ ಆರತಿ ಬೆಳಗುತ್ತಿದ್ದಂತೆ ಪಲ್ಲಕ್ಕಿ ತೇರ ಹತ್ತಿರ ಸಾಗಿತು.
ಕೊಟ್ಟೂರೇಶ್ವರ ಸ್ವಾಮಿ ಮೂರ್ತಿಯೊಂದಿಗೆ ಮಹಲ್ ಮಠದ ಕ್ರೀಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು ಹಾಗೂ ಧರ್ಮಕರ್ಯ ಶೇಖರಯ್ಯ ಹಾಗೂ ಅರ್ಚಕರು ರಥವೇರಿ ಮೂಲನಕ್ಷತ್ರ ಕೂಡುತ್ತಿದ್ದಂತೆ ರಥ ಉತ್ತರ ದಿಕ್ಕಿಗೆ ನಿಧಾನವಾಗಿ ಸಾಗಿತು. ನಂತರ ಉತ್ತರ ದಿಕ್ಕಿನಿಂದ ರಥ ಮರಳಿ ಬಂದು ಪೂರ್ವ ದಿಕ್ಕಿನ ಮೂಲಸ್ಥಾನಕ್ಕೆ ಬಂದು ನೆಲೆ ನಿಂತ್ತಿತು.
ಶನಿವಾರ ಬೆಳಗ್ಗೆ ಶಾಸ್ತ್ರೋಕ್ತವಾಗಿ ಏಣಿಗೆ ಪೂಜೆ ಸಲ್ಲಿಸಿ, ದಲಿತ ಸಮುದಾಯದ ನೂರಾರು ಯುವಕರು ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಬೃಹತ್ತಾದ ಏಣಿಯನ್ನು ಹೊತ್ತೊಯ್ದು ರಥಕ್ಕೆ ನಿಲ್ಲಿಸಿದ ನಂತರ ಮಧ್ಯಾಹ್ನ ಬಲಿದಾನವನ್ನು ಆಯಗಾರ ಬಳಗ ಸಮರ್ಪಿಸಿದರು. ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಪಾದಯಾತ್ರಿಗಳು. ಭಕ್ತರು ಆಮಿಸಿದ್ದರು. ಮೂಲಗಳ ಪ್ರಕಾರ 6 ಲಕ್ಷಕ್ಕೂ ಅಧಿಕ ಭಕ್ತರು ಆಮಿಸಿದ್ದರು. ಪೊಲೀಸರು ಬಿಗಿ ಬಂದೋಸ್ತ್ ಕಲ್ಪಿಸಿದ್ದರು. ಟ್ರಾಫಿಕ್ ಜಾಮ್ ಸಂಭವಿಸಿದಾಗ ಎಸ್ಪಿ ಶ್ರೀ ಹರಿಬಾಬು ತಾವೇ ನಿಂತು ಸರಿಪಡಿಸಿದರು.