ಹರಾಜಿನಲ್ಲಿ ಜೆನ್ನಿ ಮಿಲ್ಕ್ ಕತ್ತೆಗಳ ಬಿಡುಗಡೆ

donkey
ಹೊಸಪೇಟೆ ತಾಲೂಕಿನ ಮಲಪನಗುಡಿ ಬಳಿ ಬಂಧನದಲ್ಲಿದ್ದ ಜೆನ್ನಿ ಮಿಲ್ಕ್ ಕತ್ತೆಗಳು ಶುಕ್ರವಾರ ಹರಾಜಿನಲ್ಲಿ ಮಾರಾಟ ಮಾಡಲಾಯಿತು.
Published on

ಹೊಸಪೇಟೆ: ಜೆನ್ನಿ ಮಿಲ್ಕ್ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಮೇವು ನೀರಿಲ್ಲದೇ ತಾಲೂಕಿನ ಮಲಪನಗುಡಿ ಬಳಿ ಬಂಧನಲ್ಲಿ ನರಕಯಾತನೆ ಅನುಭವಿಸಿದ್ದ ಕತ್ತೆಗಳು ಶುಕ್ರವಾರ ಹರಾಜಿನ ಮೂಲಕ ಬಿಡುಗಡೆಯಾದವು.

ಜೆನ್ನಿ ಮಿಲ್ಕ್ ಕತ್ತೆಗಳ ಮಾರಾಟ ಪ್ರಕರಣದಲ್ಲಿ ಒಟ್ಟು 13 ಕೋಟಿ ರೂ. ಅಧಿಕ ವಂಚನೆ ಆಗಿದೆ ಎಂದು 319 ನೊಂದವರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ 3 ತಂಡಗಳನ್ನು ರಚಿಸಿ, ತನಿಖೆ ಕೈಗೊಂಡ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಜತೆಗೆ ಕಂಪನಿಗೆ ಸೇರಿದ 44 ಉಳಿದ ಕತ್ತೆಗಳನ್ನು ಕೂಡ ವಶಕ್ಕೆ ಪಡೆಯಲಾಗಿತ್ತು. ಪ್ರಕರಣವನ್ನು ಹೆಚ್ಚಿನ ತನಿಖೆಗೆ ಕಲಬುರಗಿಯ ಸಿಐಡಿ ಡಿವೈಎಸ್ಪಿ ಅಸ್ಲಾಂ ಪಾಷಾ ಅವರಿಗೆ ವಹಿಸಲಾಗಿದೆ. ಆದರೆ, ಕತ್ತೆಗಳು ಮೇವು ನೀರಿಲ್ಲದೇ ನರಕಯಾತೆನೆ ಅನುಭವಿಸಿದವು. ಇವುಗಳಲ್ಲಿ 2 ಕತ್ತೆಗಳು ಕೂಡ ನಿರ್ವಹಣೆಯಿಲ್ಲದೇ ಸತ್ತಿವೆ. ಇವುಗಳ ಯಾತನೆ ಮನಗಂಡ ಸಿಐಡಿ ತಂಡ ಕೆಲ ದಿನಗಳಿಂದ ದಿನಕ್ಕೆ ಅಂದಾಜು 5 ಸಾವಿರ ರೂ. ವೆಚ್ಚದಲ್ಲಿ ತರಕಾರಿ ಹಾಗೂ ಮೇವಿನ ವ್ಯವಸ್ಥೆ ಮಾಡಲಾಗಿತ್ತು. ನ್ಯಾಯಾಲಯದಲ್ಲಿ ಅನುಮತಿ ಪಡೆದು ಶುಕ್ರವಾರ ಹರಾಜು ಪ್ರಕ್ರಿಯೆ ನಡೆಸಿದ ಸಿಐಡಿ ತಂಡ ಕತ್ತೆಗಳಿಗೆ ಬಂಧನದಿAದ ಮುಕ್ತ ಮಾಡಿದೆ.

ಆಂಧ್ರ ಪ್ರದೇಶದ ಕರ್ನೂಲ್ ತಾಲೂಕಿನ ಗುಳ್ಳೆಂನ ಗಾದಿಲಿಂಗ, ರಾಯದುರ್ಗದ ಸಿ.ಸುರೇಶ್ ಹಾಗೂ ತುಮಕೂರಿನ ಪ್ರಹ್ಲಾದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರಿ ಸವಾಲ್ 10 ಸಾವಿರ ರೂ. ಹೇಳಿದರು. ಆದರೆ ಜೆನ್ನಿ ಮಿಲ್ಕ್ ಕಂಪನಿಯಿAದ ಮರಿಗಳ ಜತೆ ಹಾಲು ಕೊಡುವ ಕತ್ತೆಗಳನ್ನು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಕತ್ತೆಗಳಿಗೆ ಹರಾಜಿನಲ್ಲಿ ಕಡಿಮೆಗೆ ಮಾರಾಟವಾದವು. ರಾಯದುರ್ಗದ ಸಿ.ಸುರೇಶ್ ಅವರು ಒಂದು ಕತ್ತೆಗೆ 6.5 ಸಾವಿರ ರೂ.ಗೆ ಅತಿ ಹೆಚ್ಚಿನ ಹರಾಜು ಕೂಗಿದರು. ಒಂದು ಮರಿ ಕತ್ತೆ ಸಾವಿರ ರೂ.ಗೆ ಮಾರಾಟ ಆಗಿದೆ. 42 ಕತ್ತೆಗಳು ಹಾಗೂ ಎರಡು ಮರಿಗಳಿದ್ದವು. ಒಟ್ಟು 2.75 ಲಕ್ಷ ರೂ. ಹರಾಜಿನಲ್ಲಿ ಮಾರಾಟ ಆಗಿವೆ.

ಹಿರಿಯರ ಕಾಲದಿಂದಲೂ ಕತ್ತೆ ಸಾಕಿದ್ದೆವೆ. ಮೂಲತಹ ನಾವು ಮಡಿವಾಳ ಸಮಾಜದವರು ಆಗಿದ್ದೆವೆ. ಹಾಗೇ ನಮ್ಮಲ್ಲಿ ಈಗ 30 ಕತ್ತೆಗಳಿವೆ. 10 ಕುಟುಂಬಗಳಿದ್ದು ಇವುಗಳ ನಿರ್ವಾಹಣೆ ಮಾಡುತ್ತೇವೆ. ನಮ್ಮ ಕುಲ ಕಸಬು ಮಾಡಲು ಅನುಕೂಲ ಆಗಲಿವೆ. ಸಿ.ಸುರೇಶ್, ಕತ್ತೆಗಳ ಖರೀದಿದಾರ, ರಾಯದುರ್ಗ, ಆಂದ್ರಪ್ರದೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net