ಜೆನ್ನಿ ಮಿಲ್ಕ್ ವಂಚಕರನ್ನು ವಶಕ್ಕೆ ಪಡೆದ ಸಿಐಡಿ

15 MANJU 01
Published on

ಹೊಸಪೇಟೆ: ಜೆನ್ನಿ ಮಿಲ್ಕ್ (ಕತ್ತೆ ಹಾಲು) ವಂಚನೆ ಪ್ರಕರಣದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಸಿಐಡಿ ಡಿವೈಎಸ್ಪಿ ಅಸ್ಲಾಂ ಪಾಷಾ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ಶುಕ್ರವಾರ ಬಂಧಿತರಾದ ಐದು ಆರೋಪಿಗಳನ್ನು ಕಸ್ಟಡಿಗೆ ಪಡೆದ ವಿಚಾರಣೆ ನಡೆದಿದ್ದಾರೆ.

ಕತ್ತೆ ಹಾಲಿನ ಹೆಸರಿನಲ್ಲಿ ರೈತರಿಗೆ ಕೋಟಿ, ಕೋಟಿ, ವಂಚನೆ ಮಾಡಿದ್ದ ಜಿನ್ನಿ ಮಿಲ್ಕ್ ಕಂಪನಿ ಕಂಪನಿಯ ಎಂ.ಡಿ. ನೆಲ್ಲೂರಿನ ನೂತಲಪಾಟಿ ಮುರುಳಿ, ವ್ಯವಸ್ಥಾಪಕ ಉಮಾಶಂಕರ್ ರೆಡ್ಡಿ, ಸಯ್ಯದ್ ಮೊಹಮ್ಮದ್ ಗೌಸ್, ಹರ್ಷವರ್ಧನ ರಾಜು, ಜಿ.ಯೋಗಾನಂದ ರೆಡ್ಡಿ ಐವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಬಳಿಕ ತಮ್ಮ ವಶಕ್ಕೆ ಪಡೆದು ಇಲ್ಲಿನ ಪಟ್ಟಣ ಠಾಣೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಬಿಡು ಬಿಟ್ಟಿರೋ ಸಿಐಡಿ ತಂಡ ಆರೋಪಿಗಳನ್ನು ಘಟನ ಸ್ಥಳಗಳಲ್ಲಿಯೂ ಪರಿಶೀಲಿಸಿದರು.

ಕತ್ತೆ ಹಾಲಿನ ಜಾಲಕ್ಕೆ ಬಿದ್ದ 319 ನೊಂದವರು ಈ ಪ್ರಕರಣದಲ್ಲಿ 13.36 ಕೋಟಿ ರೂ. ವಂಚನೆಗೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿನ ಪೊಲೀಸರು ಎರಡು ತಂಡಗಳನ್ನು ಮಾಡಿ, ದೇಶದ ಹಲವು ರಾಜ್ಯಗಳಲ್ಲಿ ತನಿಖೆ ನಡೆಸಿ ಪ್ರಮುಖ 5 ಆರೋಪಿಗಳನ್ನು ಬಂದಿಸಿದರು. ಇಬ್ಬರನ್ನು ಎರಡು ದಿನ, ಹಾಗೂ ಮೂವರನ್ನು 8 ದಿನದ ವರೆಗೆ ಸಿಐಡಿ ವಶಕ್ಕೆ ಪಡೆಯಲಾಗಿದೆ. ಅವರನ್ನು ಆರೋಗ್ಯ ತಪಾಸಣೆ ನಡೆಸಲಾಯಿತು. ಸಂಜೆ ವರೆಗೆ ತನಿಖೆ ನಡೆಸಿದರು.

ಈಗಾಗಲೇ ಪೊಲೀಸರು ಕರ್ನಾಟಕ, ಆಂದ್ರ, ಮಹಾರಾಷ್ಟç ಸೇರಿದಂತೆ ಇತರೆ ರಾಜ್ಯಗಳಲ್ಲಿನ ಕಂಪನಿಗೆ ಸೇರಿದ 33 ಬ್ಯಾಂಕ್ ಅಕೌಂಟ್‌ಗಳನ್ನು ಪ್ರೀಜ್ ಮಾಡಲಾಗಿದೆ. ಸ್ಥಳೀಯರ ಪೊಲೀಸರ ನೀಡಿದ 3600 ಪುಟಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net