

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್.ಮಧುನಾಯ್ಕ ಇವರು ಈ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರಿಗೆ ಸ.5 ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ. ಶಾಲೆಯಲ್ಲಿ ಆರಂಭದಿಂದಲೂ ಕ್ರೀಯಾಶಿಲರಾಗಿ ಸೇವೆ ಸಲ್ಲಿಸಿದ್ದಾರೆ. ಮಕ್ಕಳೊಂದಿಗೆ ನಿತ್ಯವೂ ಆಟವಾಡುತ್ತ ಕಠಿಣವೆನಿದ ವಿಷಯಗಳನ್ನು ಸರಳವಾಗಿ ಹೇಳಿಕೊಡುವುದರ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಕಲೆ ಮತ್ತು ಸಾಹಿತ್ಯದಲ್ಲಿ ನಿರಂತರ ಕೃಷಿ ಮಾಡುತ್ತಾ ನಿರಂತರವಾಗಿ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಾನು ಸೇವೆ ಮಾಡಿದ ಬಹುತೇಕ ಕಡೆ ಮಕ್ಕಳಿಗೆ ಪಾಠಗಳ ಜತೆ ಸ್ಥಳೀಯರ ಸಹಾಯದಿಂದ ಶಾಲೆಗಳ ಅಭಿವೃದ್ಧಿ ಪಡಿಸುವ ಪ್ರಯತ್ನದಲ್ಲಿ ಹಲವು ಬಾರಿ ಯಶಸ್ಸು ಕಂಡಿದ್ದಾರೆ. ಇಲಾಖೆ ಹಾಗೂ ಸರ್ಕಾರದ ಆದೇಶಗಳನ್ಙು ನಿಷ್ಠೆಯಿಂದ ಪಾಲನೆ ಮಾಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಿದೆ.
ತಾಲೂಕಿಮ ಬಸರಹಳ್ಳಿ ತಾಂಡಾದಲ್ಲಿ ಜನಿಸಿದ ಇವರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಹನುಮನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಹೂವಿನಹಡಗಲಿಯಲ್ಲಿ ಪ್ರೌಢಾ ಶಿಕ್ಷಣ, ಹರಪನಹಳ್ಳಿಯಲ್ಲಿ ಪಿಯುಸಿ, ಬಳ್ಳಾರಿಯಲ್ಲಿ ಟಿಸಿಎಚ್ ತರಬೇತಿ ಪೂರ್ಣ ಗೊಳಿಸಿ 1994 ರಲ್ಲಿ ಶಿಕ್ಷಕ ವೃತ್ತಿಗೆ ಆಯ್ಕೆಯಾಗಿದ್ದಾರೆ. ಹೂವಿನ ತಾಲೂಕಿನ ಅಡವಿಮಲ್ಲಕೆರಿಯ ಸರ್ಕಾರಿ ಹಿರಿಯಪ್ರಾಥಮಿಕಶಾಲೆಯಲ್ಲಿ 11 ವರ್ಷ ಸೇವೆ ಸಲ್ಲಿಸಿ ನಂತರ ಅಂಕ್ಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 2 ವರ್ಷ ಸೇವೆ ಸಲ್ಲಿಸಿ, ಹನ್ನೊಂದು ವರ್ಷಗಳಕಾಲ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ. ನಂತರ ತಾಲೂಕಿನ ಹುದ್ದೆಯಿಂದ ಬಡ್ತಿಯೊಂದಿ ಕೆ.ಕೆ.ತಾಂಡ ಗ್ರಾಮಕ್ಕೆ ವರ್ಗಾವಣೆಯಾಗಿ ಅಲ್ಲಿಯೇ ಮುಖ್ಯಗುರುವಾಗಿ ಐದು ವರ್ಷ ಸೇವೆಸಲ್ಲಿಸಿದ್ದಾರೆ.
ನಂತರ ತಿಪ್ಪಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದು ವರ್ಷ ಸೇವೆ. ಎರಡನೇ ಬಡ್ತಿ ಪಡೆದು ಹಿರೇಕೊಳಚಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು ಮೂವತ್ತು ವರ್ಷಗಳಕಾಲ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಒಟ್ಟು 35 ಸಾಹಿತ್ಯಕೃತಿಗಳನ್ನು ರಚಿಸಿದ್ದಾರೆ. ಐದು ಮಕ್ಕಳಿಗಾಗಿ ಸಂಪಾದಕೀಯ ಕೃತಿಗಳನ್ನು ರಚಿಸಿದ್ದಾರೆ. ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಉತ್ತಮಶಿಕ್ಷಕ ಪ್ರಶಸ್ತಿ, ಗೋರೂರು ರಾಮಸ್ವಾಮಿ ಅಯ್ಯಂಗಾರ ರಾಜ್ಯ ಪ್ರಶಸ್ತಿ ಅನೇಕ ಸಂಘ ಸಂಸ್ಥೆಗಳು ಇತರೆ ಪ್ರಶಸ್ತಿಗಳನ್ನುನೀಡಿದೆ.
ಇಲಾಖೆಯ ಆದೇಶಗಳನ್ನು ಪಾಲಿಸಿತ್ತ ಮಕ್ಕಳೊಂದಿಗೆ ಕಲಿಯುತ್ತಲೇ ಬಂದಿರುವೆ. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ನನನ್ನು ಇಲಾಖೆ ಗುರುತಿಸಿ ಪ್ರಶಸ್ತಿ ನೀಡಿ ಇನ್ನು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದೆಎಲ್.ಮಧುನಾಯ್ಕ, ಶಿಕ್ಷಕ, ಹೂವಿನಹಡಗಲಿ