ಐದನೇ ದಿನದ ಗಣೇಶನಿಗೆ ಅದ್ದೂರಿ ಬೀಳ್ಕೊಡುಗೆ

IMG-20240911-WA0083
Published on

ಹೊಸಪೇಟೆ: ನಗರದಲ್ಲಿ ಬುಧವಾರ ಪ್ರತಿಷ್ಠಾಪಿಸಿದ್ದ 5ನೇ ದಿನಕ್ಕೆ ಗಣೇಶನಮೂರ್ತಿಗಳನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಸಾಗಿ ವಿಸರ್ಜನೆ ಮಾಡಲಾಯಿತು.

ನಗರದ ವಿವಿಧ ಕಡೆಯಿಂದ ಆರಂಭವಾದ ಮೆರವಣಿಗೆ ದೊಡ್ಡ ಮಸೀದಿ, ಕೇಂದ್ರ ಬಸ್ ನಿಲ್ದಾಣ ಮೂಲಕ ನಗರದ ಸ್ಟೇಷನ್ ರಸ್ತೆಯ ತುಂಗಭದ್ರಾ ಕಾಲುವೆ ವರೆಗೆ ಸಾಗಿತು. ಪಂಚವಾದ್ಯ ಡೋಲು, ಝಾಂಜ್ ಮೇಳ, ಡಿಜೆ ಮೆರವಣಿಗೆಗೆ ಮೆರಗು ತಂದವು. ರಸ್ತೆ ಉದ್ದಕ್ಕೂ ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸಿದವು. ಯುವಕ, ಯುವತಿಯರು ಡಿಜೆ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಜನ ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಬೇಗ ತೆರಳುವಂತೆ ತಾಕೀತು ಮಾಡಿದರು.

ವಿಸರ್ಜನಾ ಮೆರವಣಿಗೆ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ನಗರದ ಹಲವು ಕಡೆ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net