ಕಾಡಿಚ್ಚು ಹರಡದಂತೆ ಮುಂಜಾಗ್ರತೆ ಅಗತ್ಯ

17 MANJU 01
Published on
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಬೇಸಿಗೆಯಲ್ಲಿ ಅರಣ್ಯದಲ್ಲಿ ಕಾಡ್ಲಿಚ್ಚು ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ದರೋಜಿ ಹಾಗೂ ಗುಡೇಕೋಟೆ ಕರಡಿ ಧಾಮಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ಜಿಲ್ಲೆಯಲ್ಲಿ 1.27 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಜಿಲ್ಲೆಯ ಭೂ ಪ್ರದೇಶ ಶೇ.22 ಕುರುಚಲು ಅರಣ್ಯದಿಂದ ಅವೃತವಾಗಿದೆ. ಈ ಕಾಡುಗಳಲ್ಲಿ ನೈಸರ್ಗಿಕ ಕಾಡಿಚ್ಚಿನ ಅಪಾಯಕ್ಕಿಂತ ಅರಣ್ಯದಂಚಿನ ಗ್ರಾಮಸ್ಥರು ಹುಲ್ಲುಗಳಿಗೆ ಹಾಕುವ ಬೆಂಕಿ ಹಾಗೂ ಕೆಲವರು ಮೋಜು-ಮಸ್ತಿಗಾಗಿ ಹಾಕುವ ಬೆಂಕಿಯಿಂದ ಕಾಡ್ಲಿಚ್ಚು ಕಾಣಿಸುವ ಸಾಧ್ಯತೆ ಹೆಚ್ಚಾಗಿದೆ. ಇದು ಅರಣ್ಯ ಪ್ರದೇಶದ ಹಾನಿ, ಉಷ್ಣತೆ ಏರಿಕೆ ಹಾಗೂ ಇನ್ನಿತರ ಏರುಪೇರಿಗೆ ಕಾರಣವಾಗುತ್ತಿದೆ.
2020-21ರಲ್ಲಿ ಜಿಲ್ಲೆಯಲ್ಲಿ 257 ಕಾಡ್ಗಚ್ಚು ಪ್ರಕರಣಗಳು ದಾಖಲಾಗಿದ್ದವು. 2021-22ರಲ್ಲಿ 278, 2022-23ರಲ್ಲಿ 385 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 551 ಪ್ರಕರಣ ದಾಖಲಾಗಿದ್ದು, 286.76 ಹೆಕ್ಟೇ‌ರ್ ಅರಣ್ಯ ಪ್ರದೇಶ ನಾಶವಾಗಿತ್ತು. ಪ್ರಸಕ್ತ ಸಾಲಿನಲ್ಲಿ 333 ಪ್ರಕರಣ ದಾಖಲಾಗಿದ್ದು, 450 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಫೈರ್ ಅಲರ್ಟ್ ತಂತ್ರಾಂಶ ಬಳಕೆ ಸೇರಿದಂತೆ ನಾನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾಡಿದ್ದು ಹರಡದಂತೆ ಸಿದ್ಧತೆ ಮಾಡಿಕೊಂಡಿದೆ.
ಹೆಚ್ಚಿನ ಅರಣ್ಯ ಪ್ರದೇಶ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳು, ಔಷಧೀಯ ಗಿಡಗಳು, ಬೆಲೆಬಾಳುವ ಮರಗಳ ಜತೆಗೆ ವನ್ಯಜೀವಿಗಳು ಇವೆ. ಇಂತಹ ಪ್ರದೇಶದಲ್ಲಿ ಬೆಂಕಿ ಅವಘಡ ಉಂಟಾದರೆ ಸಸ್ಯ ಹಾಗೂ ಪ್ರಾಣಿಸಂಕುಲದ ವಿನಾಶ ಖಚಿತ. ವನ್ಯಜೀವಿಗಳು ನಾಶವಾಗುವುದರೊಂದಿಗೆ ನೆಲೆ ಕಳೆದುಕೊಳ್ಳುತ್ತವೆ. ಅಗತ್ಯ ಆಹಾರವೂ ಸಿಗುವುದಿಲ್ಲ. ಆಗ ವನ್ಯಜೀವಿಗಳು ಆಹಾರ ಅರಸುತ್ತಾ ನಾಡಿನತ್ತ ಬರುತ್ತವೆ.

ಫೈರ್ ಅಲರ್ಟ್ ತಂತ್ರಜ್ಞಾನ ಬಳಕೆ

ಅರಣ್ಯ ಇಲಾಖೆ ಕಾಡಿಚ್ಚಿನ ನಿಯಂತ್ರಣಕ್ಕೆ ಫೈರ್ ಅಲರ್ಟ್ ತಂತ್ರಜ್ಞಾನದ ಮೊರೆಹೋಗಿದೆ. ಸ್ಕಾಟ್‌ಲೈಟ್ ಸಿಗ್ನಲ್ ಮೂಲಕ ಅರಣ್ಯದಲ್ಲಿ ಹೊಗೆ ಕಂಡು ಬಂದ ಸ್ಥಳದ ಮಾಹಿತಿ ಅರಣ್ಯ ಇಲಾಖೆಗೆ ದೊರೆಯುತ್ತದೆ. ಈ ಮಾಹಿತಿ ಅನುಸಾರ ಅರಣ್ಯ ಇಲಾಖೆ ಸಿಬ್ಬಂದಿ ನಿಗದಿತ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಆರಿಸುವ ಕೆಲಸವನ್ನು ಮಾಡುತ್ತಾರೆ.

ಹರಸಾಹಸ ಪಡಬೇಕಾಗುತ್ತದೆ ಸಿಬ್ಬಂದಿ

ಆರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತದೆ. ಕಾಲ್ನಡಿಗೆ ಮೂಲಕವೇ ಅಗತ್ಯ ಸಲಕರಣೆಗಳು ಹೊತ್ತು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಗುತ್ತದೆ. ಬೆಂಕಿಯ ಕೆನ್ನಾಲಿಗೆ ಪಸರಿಸುತ್ತಿದ್ದಂತೆ ಅದನ್ನು ಹತೋಟಿಗೆ ತರುವ ಹೋರಾಡುವ ವೇಳೆ ಸಿಬ್ಬಂದಿ ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುತ್ತಾರೆ. ಸಂಪೂರ್ಣ ಬೆಂಕಿ ಹತೋಟಿಗೆ ಬರಲು ಮಳೆಗಾಲ ಆರಂಭದವರೆಗೆ ಕಾಯಬೇಕಾಗುತ್ತದೆ.

ಕಠಿಣ ನಿರ್ಬಂಧಗಳು ಅಗತ್ಯ

ಬೆಂಕಿ ಹತೋಟಿಗೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಬೇಕಾಗಿದೆ. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಇಲಾಖೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು. ಇಲಾಖೆಗೆ ಅಗತ್ಯ ವಾಹನಗಳನ್ನು ಒದಗಿಸಬೇಕು. ಶಿಕಾರಿ, ರಸ್ತೆಬದಿ ಅಡುಗೆ ಮಾಡುವುದು ಇತ್ಯಾದಿಗಳಿಗೆ ಕಠಿಣ ನಿರ್ಬಂಧ ಹೇರಬೇಕು. ಸಾರ್ವಜನಿಕರು, ಪ್ರವಾಸಿಗರು ಬೆಂಕಿಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಜಿಲ್ಲೆಯಲ್ಲಿ ಕಾಡ್ಡಿದ್ದು ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೈರ್ ಅಲರ್ಟ್ ತಂತ್ರಾಂಶ ಬಳಸಲಾಗುತ್ತಿದೆ. ಕಾಡಿಚ್ಚು ನಿಯಂತ್ರಣಕ್ಕೆ ವಾಚರ್‌ಗಳ ನೇಮಕ ಮಾಡಲಾಗಿದೆ. ಜತೆಗೆ ಜನರಲ್ಲಿ ಜಾಗೃತಿ ಕೂಡ ಮೂಡಿಸಲಾಗುತ್ತಿದೆ.
| ಅರ್ಸಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಜಯನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net