ವೃತ್ತಿ ಧರ್ಮ ಮರೆತ ವೈದ್ಯರು

Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ನಕಲಿ ವೈದ್ಯಕೀಯ ದಾಖಲೆಗಳನ್ನು ಸೃಷ್ಠಿಸಿ, ಅಂಗವಿಕಲ ಮೀಸಲಾತಿ ಅಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ ಅಭ್ಯಾರ್ಥಿಗಳು ಯಾರು ಕೂಡ ವಿಜಯನಗರ ಜಿಲ್ಲೆಯ ನಿವಾಸಿಗಳಿಲ್ಲ. ವೈದಾಧಿಕಾರಿಗಳು ಆಮಿಷ್ಯ ಒಳಗಾಗಿ 21 ಮೆಡಿಕಲ್ ಅಬ್ಯಾರ್ಥಿಗಳು, ದಾಖಲೆ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ನೂತನ ವಿಜಯನಗರ ಕಪ್ಪು ಚುಕ್ಕೆಯಾಗಿದೆ.

21 ವೈದ್ಯಕೀಯ ಅಭ್ಯರ್ಥಿಗಳು ಬೆಂಗಳೂರಿನ ಯಲಂಹAಕ ಸಾರ್ವಜನಿಕ ಆಸ್ಪತ್ರೆ, ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗಳಿಂದ ನಕಲಿ ಪ್ರಮಾಣಪತ್ರ ಮಾಡಿಸಿಕೊಂಡು ಬಂದಿದ್ದ ಪ್ರಮಾಣ ಪತ್ರ ಆಧಾರದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರಗಳಲ್ಲಿ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ, ಯುಡಿಐಡಿಗಳನ್ನು (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ನೀಡಲಾಗಿದೆ. ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆಗಳಲ್ಲಿ ಎಂಬುದು ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳ ಮಾತಾಗಿದೆ. ಆದರೆ, ಇದರ ಬೇರು ಇನ್ನಷ್ಟು ಆಳಕ್ಕೆ ಇಳಿದಿರುವುದು ಸ್ಪಷ್ಟವಾಗಿದ್ದು, ಬೆಂಗಳೂರಿನ ಮಲ್ಲೇಶ್ವರ ಪೊಲೀಸರು ಪಾತಾಳಗರಡಿ ಹಾಕಿ ಜಾಲವನ್ನು ಭೇದಿಸುವ ಕೆಲಸ ಆರಂಭಿಸಿದ್ದಾರೆ.

21 ಜನರ ಆಸ್ಪತ್ರೆಗಳಲ್ಲಿ ಹೊರರೋಗಿ ಚೀಟಿ ಮಾಡಿಸುವುದು ಕಡ್ಡಾಯ. ಸಂಬAಧಪಟ್ಟ ತಜ್ಞವೈದ್ಯರ ತಪಾಸಣೆ ನಡೆಸಬೇಕು. ನಂತರ ಬರುವ ವರದಿಯನ್ನು ತಾಲೂಕಿನ ವೈದ್ಯಾಕಿಯ ಮಂಡಳಿಯಲ್ಲಿ ಮಂಡನೆ ಮಾಡಬೇಕು. ನಂತರ ಅದಕ್ಕೆ ಎಷ್ಟು ಪ್ರಮಾಣದ ಅಂಗವೈಫಲ್ಯತೆ ಆಗಿದೆ ಎಂಬುದುರ ಪ್ರಮಾಣ ಪತ್ರವನ್ನು ಕೊಡಬೇಕು. ಆದರೆ, ಈ ಯಾವುದೇ ಪ್ರಕ್ರೀಯೆ ನಡೆಸದೇ, ನೇರವಾಗಿ ನಕಲಿ ಅಂಗವಿಕಲ ಪ್ರಮಾಣ ಪತ್ರದೊಂದಿಗೆ ಯುಡಿಐಡಿ ಮಾಡಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ತಿಳಿಸಿದರು.

ನಗರದ ನಿವಾಸಿ ಉಮೇಶ್ ನಾಗಪ್ಪ ಚೌಧರಿ ಜುಲೈ 9ರ ವರೆಗೆ ಇಲ್ಲಿನ ಸಾರ್ವಜನಿಕರ ಸರ್ಕಾರಿ ವಿಭಾಗಿಯ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅವರು 7 ಜನರಿಗೆ ಯುಡಿ ಐಡಿ ನೀಡಿದ್ದರು ಎಂದು ಹೇಳಲಾಗಿದೆ. ಜುಲೈ 9ರಂದು ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದ ಅವರು, ಅದೇ ದಿನ ಅಲ್ಲಿ 13 ಜನರಿಗೆ ಯುಡಿಐಡಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಹಗರಿಬೊಮ್ಮನಹಳ್ಳಿ ವೈದ್ಯಾಧಿಕಾರಿಗಳ ಗಮನಕ್ಕೆ ತರದೇ ಪ್ರಮಾಣ ಪತ್ರಗಳಿಗೆ ನಕಲಿ ಸಹಿ ಮಾಡಲಾಗಿದೆ. ಇನ್ನೂ ಹೊಸಪೇಟೆಯಲ್ಲಿ ಆಮಿಷ್ಯಕ್ಕೆ ಒಳಗಾಗಿ ಯುಡಿಐಡಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸರ್ಕಾರಕ್ಕೆ 206 ಪುಟಗಳ ವರದಿ

ನಕಲಿ ಯುಡಿಐಡಿ ತಾಲೂಕು ಹಾಗೂ ವಿಭಾಗಿಯ ಆಸ್ಪತ್ರೆಗಳಲ್ಲಿ ನೀಡಲಾಗಿದೆ. ಇದಕ್ಕೆ ಅಲ್ಲಿನ ಆಡಳಿತ ಮಂಡಳಿಯೇ ಜವಾಬ್ದಾರಿಯಾಗುತ್ತದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಉಮೇಶ್ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹಗರಿ ಬೊಮ್ಮನಹಳ್ಳಿಯ ಕೇಸ್ ವರ್ಕರ್ ಅಶೋಕ್ಗಾಗಿ ಹುಡುಕಾಟ ನಡೆಯುತ್ತಿದೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಎರಡು ದಿನಗಳ ಕಾಲ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ಠಾಣೆಯಲ್ಲಿ ವಿಚಾರಣೆಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರಕ್ಕೆ 206 ಪುಟಗಳ ವರದಿ ನೀಡಲಾಗಿದೆ ಎಂದು ಡಿಎಚ್ಒ ಡಾ.ಎಲ್.ಆರ್.ಶಂಕರ್ ನಾಯ್ಕ ತಿಳಿಸಿದರು.

ಬೆಂಗಳೂರಿನಿAದ ತಂದ ನಕಲಿ ಅಂಗವಿಕಲತೆ ಪ್ರಮಾಣ ಪತ್ರ ನೀಡಿ, ಆಸ್ಪತ್ರೆ ವೈದ್ಯಾಧಿಕಾರಿಗಳ ಗಮನಕ್ಕೆ ತಾರದೇ ಯುಡಿಐಡಿ ಮಾಡಲಾಗಿದೆ. ಬಂಧನಕೊಳ್ಳಗಾದ ಎಫ್ಡಿಎನನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರ ತನಿಖೆಗೆ ಸಹಕಾರ ನೀಡಲಾಗುತ್ತಿದೆ. - ಡಾ.ಎಲ್.ಆರ್.ಶಂಕರ್ ನಾಯ್ಕ್, ಡಿಎಚ್ಒ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net