ನೇತ್ರದಾನ ಮಾಡಿ ಸಾವಿನಲ್ಲು ಸಾರ್ಥಕತೆ

04 MANJU 03
Published on

ಹೊಸಪೇಟೆ: ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಚೇರ್ಮನ್ ಹಾಗೂ ಉದ್ಯಮಿ ಎಚ್.ಶ್ರೀನಿವಾಸ ರಾವ್ (75) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಎಚ್.ಶ್ರೀನಿವಾಸರಾವ್ ಅವರು ಮಂಗಳವಾರ ತಡರಾತ್ರಿ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ರೋಟರಿ ಕಣ್ಣಿನ ಆಸ್ಪತ್ರೆಯಿಂದ ಕಣ್ಣುಗಳನ್ನು ತಗೆದುಕೋಳಲಾಗಿದೆ. ನಗರದಲ್ಲಿ ಯಶಸ್ವಿ ಉದ್ಯಮಿಯಾಗಿ ಉತ್ತಮ ಸೇವೆ ನೀಡಿದ್ದಾರೆ.

ಶ್ರೀನಿವಾಸ್ ರವರು ತಮ್ಮ 75ನೇ ವರ್ಷದ ವಯಸ್ಸಿನಲ್ಲಿಯೂ ಸಮಾಜ ಸೇವೆಗೆ ಸದಾ ತುಡಿಯುತ್ತಿದ್ದರು. ಶಿಸ್ತು ಬದ್ಧ ಜೀವನದ ಮೂಲಕ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಅವರು ರೋಟರಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದರು.

ಸರ್ಕಾರಿ ಬಾಲಕಿಯರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕೂಡ ಆಗಿದ್ದರು. ಕಳೆದ 40 ವರ್ಷಕ್ಕಿಂತಲೂ ಹೆಚ್ಚು ಕಾಲ ಸಮಾಜದ ವಿವಿಧ ಸಂಘಗಳೊAದಿಗೆ ಕೈ ಜೋಡಿಸಿ ಬಡವರ ಸೇವೆ ಮಾಡಿದ್ದಾರೆ. ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net